Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲ್ ಸಂಘಟನೆ ತೊರೆದು ಶರಣಾಗತರಾದಾಗ ಇವರಿಗೆ ನ್ಯಾಯಾಲಯ ಜಾಮೀನು ನೀಡುವಾಗ ಯಾವುದೇ ಕಾರಣಕ್ಕೂ ಚಿತ್ರದುರ್ಗ ಬಿಟ್ಟು ಹೊರಗೆ ಹೋಗಬಾರದು. ಅವರು ಮಾಡುತ್ತಿರುವ ಚಟುವಟಿಕೆಗಳ ಬಗ್ಗೆ ಅಲ್ಲಿನ ಠಾಣೆಗೆ ಮಾಹಿತಿ ನೀಡಬೇಕೆಂದು ಷರತ್ತು ವಿಧಿಸಲಾಗಿತ್ತು. ಆದರೆ ನೂರ್ ಜುಲ್ಫಿàಕರ್ ರಾಜ್ಯದೆಲ್ಲೆಡೆ ಓಡಾಡುತ್ತಿದ್ದು, ಪ್ರತಿಭಟನೆಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ಜೊತೆಗೆ ತಮ್ಮ ಕಾರ್ಯಚಟುವಟಿಕೆಗಳ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಶರಣಾಗುವಾಗ ಹಾಕಿದ್ದ ಷರತ್ತುಗಳನ್ನು ಉಲ್ಲಂ ಸಿರುವುದರಿಂದ ಜಾಮೀನು ರದ್ದುಪಡಿಸುವಂತೆ ಎಡಪಂಥೀಯ ತೀವ್ರಗಾಮಿಗಳ ಶರಣಾಗತ ಜಿಲ್ಲಾ ಸಮಿತಿಯಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ ಎಂದರು. ಶರಣಾದ ನಕ್ಸಲರ ಚಟುವಟಿಕೆಗಳನ್ನು 3 ವರ್ಷಗಳ ಕಾಲ ಗಮನಿಸಲು ಓರ್ವ ಉಸ್ತುವಾರಿ ಅಧಿಕಾರಿ ನೇಮಿಸಲಾಗುತ್ತದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೇಮಕವಾಗಿದ್ದ ಕೊಪ್ಪ ಡಿವೈಎಸ್‌ಪಿ ನೀಡಿದ ವರದಿ ಆಧರಿಸಿ ನೂರ್ ಜುಲ್ಫಿàಕರ್‌ರ ಜಾಮೀನು ರದ್ದುಪಡಿಸಲು ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.