ದೋಟಿಹಾಳ: ಗ್ರಾಮದ ಕೈಮಗ್ಗ ನೇಕಾರ ಉತ್ಪಾದನ ಮತ್ತು ಮಾರಾಟ ಸಂಘದ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ಆಡಳಿತಾಧಿಕಾರಿಯನ್ನು ನೇಮಿಸಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಏ. 11ರಂದು ಆದೇಶ ನೀಡಿದ್ದರು. ಈ ಆದೇಶಕ್ಕೆ ಸದ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಗ್ರಾಮದ ಕೈಮಗ್ಗ ನೇಕಾರ ಉತ್ಪಾದನ ಮತ್ತು ಮಾರಾಟ ಸಂಘದ ಮಾಜಿ ಕಾರ್ಯದರ್ಶಿಯಾದ ರುದ್ರಮುನಿ ಬಿಜ್ಜಲ್ ಅವರು ನೀಡಿದ ದೂರಿನನ್ವಯ ವಿಚಾರ ನಡೆಸಿದ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಏ. 11ರಂದು ಸಂಘದ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶ ನೀಡಿದ್ದರು.
ಸದರಿ ಆದೇಶವನ್ನು ಪ್ರಶ್ನಿಸಿ ಸಂಘದ ಆಡಳಿತ ಮಂಡಳಿಯವರು ತಡೆಯಾಜ್ಞೆ ಕೋರಿ ಧಾರವಾಡ ಹೈಕೋರ್ಟ್ ಸಂಚಾರಿ ಪೀಠಕ್ಕೆ ಮೊರೆ ಹೋಗಿದ್ದರು. ಧಾರವಾಡ ಹೈಕೊರ್ಟ್ ರಜಾ ಅವಧಿ ಇರುವದರಿಂದ ಮೇ. 04ರಂದು ಬೆಂಗಳೂರು ವಿಶೇಷ ನ್ಯಾಯಲಯ ಪುರಸ್ಕರಿಸಿತು. ಮೇ.05ರಂದು ಗೌರವಾನ್ವಿತ ನ್ಯಾಯಮೂರ್ತಿ ಇ.ಎಸ್ ಇಂದರೇಶ್ ಅವರು ಸಹಕಾರ ಸಂಘಗಳ ಉಪ ನಿಬಂಧಕರು ಏ.11ರಂದು ನೀಡಿದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಹೀಗಾಗಿ ಸದ್ಯ ಆಡಳಿತ ಮಂಡಳಿಯವರು ನಿಟ್ಟುಸಿರುಬಿಡುವಂತಾಗಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಒಂದು ವಾರ ಸುಮ್ಮನಿದ್ದರೆ ರಾಜ್ಯ ಶಾಂತವಾಗಿರುತ್ತದೆ: ಪ್ರತಾಪ್ ಸಿಂಹ
ನಮ್ಮ ಆಡಳಿತ ಮಂಡಳಿಯವರು ಯಾವುದೇ ನಿಯಮಬಾಹಿರ ಕೆಲಸ ಮಾಡಿಲ್ಲ. ಆಡಳಿತ ಮಂಡಳಿಯನ್ನು ರದ್ದು ಮಾಡುವ ವೇಳೆ ಅಧಿಕಾರಿಗಳು ನೀಡಿದ ಎಲ್ಲಾ ಅಂಶಗಳು ಸತ್ಯಕ್ಕೆ ದೂರವಾಗಿದ್ದು, ರದ್ದು ಆದೇಶವನ್ನು ಪ್ರಶ್ನಿಸಿ ನಾವು ತಡೆಯಾಜ್ಞೆ ಕೋರಿ ಧಾರವಾಡ ಹೈಕೋರ್ಟ್ ಸಂಚಾರಿ ಪೀಠಕ್ಕೆ ಮೊರೆ ಹೋಗಿದ್ದೇವು. ಧಾರವಾಡ ಹೈಕೊರ್ಟ್ ರಜಾ ಅವಧಿ ಇರುವುದರಿಂದ ಮೇ.04ರಂದು ಬೆಂಗಳೂರು ವಿಶೇಷ ನ್ಯಾಯಲಯ ನಮ್ಮ ಅರ್ಜಿಯನ್ನು ಪುರಸ್ಕರಿಸಿದೆ. ಆದರೆ ಧಾರವಾಡ ಹೈಕೋರ್ಟ್ ರಜಾ ಅವಧಿ ಇರುವುದರಿಂದ ನಮಗೆ ತಡೆಯಾಜ್ಞೆ ಆದೇಶದ ಪ್ರತಿ ತಡವಾಗಿ ಸಿಕ್ಕಿದೆ ಎಂದು ಸಂಘದ ಅಧ್ಯಕ್ಷ ಹೀರಣ್ಣಪ್ಪ ಸಕ್ರಿ, ಉಪಾಧ್ಯಕ್ಷ ನೂರುದ್ದೀನಸಾಬ ನಡ್ಲಮನಿ ಹಾಗೂ ನಿರ್ದೇಶಕರು ತಿಳಿಸಿದರು.