Advertisement

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

12:47 AM Jul 09, 2024 | Team Udayavani |

ಹೊಸದಿಲ್ಲಿ: ಮೇ 5ರಂದು ನಡೆದ ನೀಟ್‌-ಯುಜಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯ ವ್ಯಾಪಕತೆ ಎಷ್ಟಿದೆ ಎಂಬುದನ್ನು ಅರಿತುಕೊಂಡ ಬಳಿಕವಷ್ಟೇ ನೀಟ್‌-ಯುಜಿ(ವೈದ್ಯ ಕೀಯ ಕಾಲೇಜುಗಳಿಗೆ ಪ್ರವೇಶ ಪಡೆ ಯುವ ಪರೀಕ್ಷೆ) ಪರೀಕ್ಷೆಯನ್ನು ರದ್ದು ಮಾಡಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು. ನೀಟ್‌ ಪರೀಕ್ಷೆ ರದ್ದು ಕೋರ್ಟ್‌ನ ಕೊನೆಯ ಆಯ್ಕೆಯಾಗಿ ರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ನೀಟ್‌ ಪರೀಕ್ಷೆ ರದ್ದು ಕೋರಿ ಸಲ್ಲಿಕೆಯಾಗಿರುವ 30ಕ್ಕೂ ಅಧಿಕ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು ಸೋಮವಾರ ಕೈಗೆತ್ತಿಕೊಂಡಿದೆ. ಪ್ರಶ್ನೆಪತ್ರಿಕೆ ಯು ಟೆಲಿಗ್ರಾಮ್‌, ವಾಟ್ಸ್‌ಆ್ಯಪ್‌ನಂಥ ಸಾಮಾಜಿಕ ಜಾಲತಾಣಗಳ ಮೂಲಕ ಆಗಿದ್ದರೆ, ಅದು ವ್ಯಾಪಕವಾಗಿರುತ್ತದೆ. ಈ ಕುರಿತು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾದೆ ಎಂದು ಪೀಠ ಹೇಳಿತು.

ಸೋರಿಕೆಯು ವ್ಯಾಪಕವಾಗಿದ್ದರೆ ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಹಾಗಾಗಿ ಮರು ಪರೀಕ್ಷೆ ಕೈಗೊಳ್ಳುವುದು ಅನಿವಾ ರ್ಯ. ಸೋರಿಕೆ ಲಾಭ ಪಡೆದ ಅಭ್ಯರ್ಥಿ ಗಳನ್ನು ಗುರುತಿಸಲು ಸಾಧ್ಯ ವಾದರೆ ಮತ್ತು ಅವರ ಪ್ರಮಾಣದ ತೀರಾ ಚಿಕ್ಕ ದಾಗಿದ್ದರೆ ಮರು ಪರೀಕ್ಷೆ ಅಗ ತ್ಯವಿಲ್ಲ. ಪ್ರಶ್ನೆ ಪತ್ರಿಕೆ ಯಾವಾಗ ಸೋರಿಕೆ ಯಾಯಿತು? ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳ ಪ್ರಸರಣ ಹೇಗೆ ನಡೆಯಿತು? ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ನಡೆದ ನಡುವಿನ ಸಮಯದ ವ್ಯತ್ಯಾಸವೆಷ್ಟು ಎಂಬ ಕುರಿತು ಮಾಹಿತಿ ನೀಡುವಂತೆ ಎನ್‌ಟಿಎಗೆ ಪೀಠ ಮಾಹಿತಿ ಕೇಳಿತು. ಬಳಿಕ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತು.

ಸಿಐನಿಂದ ವರದಿ ಕೇಳಿದ ಪೀಠ
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳ (ಸಿಬಿಐ)ದಿಂದಲೂ ಪೀಠವು ವರದಿಯನ್ನು ಕೇಳಿದೆ. ತನಿಖೆಯು ಯಾವ ಹಂತದಲ್ಲಿದೆ ಹಾಗೂ ತನಿಖೆ ವೇಳೆ ಗೊತ್ತಾಗಿರುವ ಮಾಹಿತಿಯನ್ನು ಹಂಚಿ ಕೊಳ್ಳುವಂತೆ ಕೋರ್ಟ್‌ ವಿಚಾರಣೆ ವೇಳೆ ಸೂಚಿ ಸಿ ತು.

ನಾಳೆ ಮಾಹಿತಿಗೆ ಸೂಚನೆ
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಗುರುತಿಸಲು ಕಳಂಕಿತ ವಿದ್ಯಾರ್ಥಿಗಳಿಂದ ಪ್ರತ್ಯೇಕಿಸಲು ಡೇಟಾ ವಿಶ್ಲೇಷಣೆಯನ್ನು ಬಳಸಲು ಸೈಬರ್‌ ಫೂರೆನ್ಸಿಕ್ಸ್‌ ಘಟಕದಿಂದ ಕಾರ್ಯಸಾಧ್ಯವೇ ಎಂಬುದನ್ನು ಸೇರಿ ಎಲ್ಲ ಮಾಹಿತಿಯನ್ನು ಜುಲೈ 10ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು ಸರಕಾರ ಮತ್ತು
ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next