Advertisement

ಎಂಟು ಸುಳ್ಳು ಜಾತಿ ಪ್ರಮಾಣ ಪತ್ರ ರದ್ದು

05:08 PM Nov 12, 2021 | Team Udayavani |

ಧಾರವಾಡ: ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪಡೆದ ಬಗ್ಗೆ 10 ಪ್ರಕರಣಗಳಲ್ಲಿ ದೋಷಾರೋಪಣೆ ಕಂಡು ಬಂದಿದ್ದು, ಇವುಗಳ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿ ವಿತರಿಸಿದ 8 ಜಾತಿ ಪ್ರಮಾಣ ಪತ್ರ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು. ಜಿಲ್ಲಾ ಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ 3ನೇ ತ್ತೈಮಾಸಿಕ ಸಭೆಯಲ್ಲಿ ಮಾತನಾಡಿದರು.

Advertisement

ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. 2 ಪ್ರಕರಣಗಳಲ್ಲಿ ನಿಜವಾಗಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದು, ಇವುಗಳನ್ನು ಮಾನ್ಯ ಮಾಡಲಾಗಿದೆ ಎಂದರು. ಸಭೆಯಲ್ಲಿ ವಿಶೇಷ ಕಾನೂನು ಸಲಹೆಗಾರರ ಹುದ್ದೆ ನೇಮಕಾತಿ, ಕುಂಬಾರಕೊಪ್ಪ ಗ್ರಾಮದ ಟೆನೆಂಟ್‌ ಕೋ ಆಪರೇಟಿವ್‌ ಸೊಸೈಟಿ, ಅಳ್ನಾವರ ತಾಲೂಕಿನ ದೊಪೆನಟ್ಟಿ ಗ್ರಾಮದ ಯಲ್ಲಪ್ಪ ಕರೆಯಪ್ಪ ಹರಿಜನ
ಅವರಿಗೆ ಮಂಜೂರಾದ ಜಮೀನು, ಪರಿಶಿಷ್ಟ ವರ್ಗದ ಜನಸಂಖ್ಯೆ ಹೆಚ್ಚಿರುವ ಕಾಲೋನಿಗಳ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.

ಕುಂದಗೋಳ ತಾಲೂಕಿನ ಗುರುವಿನಹಳ್ಳಿ ಗ್ರಾಮದ ರತ್ನವ್ವಾ ಕೋಂ ನಾಗಪ್ಪ ಪಡೆಸೂರು ಪ್ರವರ್ಗ 01 ಭೋಯಿ ಬದಲಾಗಿ ಪರಿಶಿಷ್ಟ ಜಾತಿಯ ಭೋವಿ ಪ್ರಮಾಣ ಪತ್ರ ಪಡೆದ ಕುರಿತು ಕುಂದಗೋಳ ತಹಶೀಲ್ದಾರ್‌ 15 ದಿನದಲ್ಲಿ ಸಮಿತಿಗೆ ಪರಿಶೀಲನಾ ವರದಿ ನೀಡುವಂತೆ ಸೂಚಿಸಲಾಯಿತು.

ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗದ ಕಲ್ಯಾಣ ಸಂಘದ ವತಿಯಿಂದ ನಡೆಯುವ ಪ್ರೌಢಶಾಲೆಗಳಿಗೆ ಜಮೀನು ಮಂಜೂರು ಮಾಡುವ ಕುರಿತು ಚರ್ಚಿಸಲಾಯಿತು. ಸರ್ಕಾರಿ ಅಭಿಯೋಜಕರು ಜಿಲ್ಲೆಯಲ್ಲಿ ಒಟ್ಟು ಪರಿಶಿಷ್ಟ ಜಾತಿ-ದೌರ್ಜನ್ಯ ತಡೆ ಕಾಯ್ದೆ ಅಡಿ 143 ಪ್ರಕರಣಗಳು ದಾಖಲಾಗಿದ್ದು 2 ಪ್ರಕರಣಗಳು ವಿಲೇವಾರಿಯಾಗಿವೆ. 141 ಪ್ರಕರಣಗಳು ಬಾಕಿಯಿವೆ ಎಂದು ಸಭೆಗೆ ತಿಳಿಸಿದರು.

ಬ್ಯಾಕ್‌ಲಾಗ್‌ ಹುದ್ದೆಗೆ ಸಲಹೆ: ಹುಬ್ಬಳ್ಳಿ ಹೆಗ್ಗೇರಿ ಆರ್ಯವೇದ ಮಹಾವಿದ್ಯಾಲಯದ ಪ್ರಾಂಶುಪಾಲರಿಗೆ ರೋಸ್ಟರ್‌ ಆಧಾರದ ಮೇಲೆ ಬ್ಲಾಕ್‌ ಲಾಗ್‌ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮುಚ್ಚಳಿಕೆಯನ್ನು ಸಮಿತಿ ನೀಡುವಂತೆ ತಿಳಿಸಲಾಯಿತು. ಇತ್ಯರ್ಥವಾದ ವಿಷಯಗಳನ್ನು ಸಭೆಯ ನಡಾವಳಿಯಿಂದ ಕೈಬಿಟ್ಟು ಹೊಸ ವಿಷಯಗಳನ್ನು ಮುಂದಿನ ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪೊಲೀಸ್‌ ಆಯುಕ್ತ ಲಾಭುರಾಮ್‌, ಧಾರವಾಡ ಪೊಲೀಸ್‌ ವರಿಷ್ಠಾಧಿಕಾರಿ ಕೃಷ್ಣಕಾಂತ್‌,ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ| ಎನ್‌. ಆರ್‌.ಪುರುಷೋತ್ತಮ್‌, ಜಾಗೃತಿ ಸಮಿತಿ ಸದಸ್ಯರಾದ ಅಶೋಕ ದೊಡ್ಡಮನಿ, ಇಂದುಮತಿ ಶಿರಗಾವ, ಅರ್ಜುನ ವಡ್ಡೇರ್‌, ರಮೇಶ್‌ ಹುಲಿಕೊಪ್ಪ, ಸಿದ್ದಲಿಂಗಪ್ಪ ಕೆರೆಮ್ಮನವರ, ಇಸೆಬೆಲ್ಲಾ ಝವೀಯರ್‌, ಕಾಡಯ್ಯ ಹೆಬ್ಬಳ್ಳಿಮಠ, ಕಸ್ತೂರಿ ಹಳ್ಳದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next