Advertisement

ಇಬ್ಬರು ಕುಲಸಚಿವರು, 15 ಬೋಧಕೇತರ ಸಿಬ್ಬಂದಿ ನೇಮಕ ರದ್ದು

05:16 PM Nov 28, 2019 | Suhan S |

ಮಂಡ್ಯ: ಸರ್ಕಾರದಿಂದ ಅನುಮೋದನೆಯನ್ನೇ ಪಡೆಯದೆ ನಿಯಮಾವಳಿ ಮೀರಿ ನೇಮಕ ಮಾಡಿಕೊಂಡಿದ್ದ ಇಬ್ಬರು ಕುಲಸಚಿವರು ಹಾಗೂ 15 ಬೋಧಕೇತರ ಸಿಬ್ಬಂದಿ ನೇಮಕಾತಿಯನ್ನು ರಾಜ್ಯಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

Advertisement

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮಂಡ್ಯ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಮಹದೇವ ನಾಯಕ್‌ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿಅಧಿಕಾರ ದುರುಪಯೋಗಪಡಿಸಿಕೊಂಡು ಕರ್ನಾಟಕ ವಿಶ್ವವಿದ್ಯಾನಿಲಯದ ಅಧಿನಿಯಮ ಗಳನ್ನು ಉಲ್ಲಂ ಸಿ ನೇಮಕಾತಿ ಮಾಡಿಕೊಂಡಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯ) ಉಪ ಕಾರ್ಯದರ್ಶಿ ಸುಬ್ರಹ್ಮಣ್ಯ ಆಪಾದಿಸಿದ್ದಾರೆ.

ನಿಯಮಾವಳಿ ಮೀರಿ ನೇಮಕ: ಮಂಡ್ಯ ವಿಶ್ವ ವಿದ್ಯಾನಿಲಯದ ಪ್ರಭಾರ ಕುಲಸಚಿವ (ಮೌಲ್ಯಮಾಪನ) ಸ್ಥಾನಕ್ಕೆ ಡಾ.ಯೋಗಾ ನರಸಿಂಹಾಚಾರಿ ಹಾಗೂ ಆಡಳಿತ ವಿಭಾಗಕ್ಕೆ ಡಾ.ಶಿವಣ್ಣ ಅವರನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಈಗ ಇವರಿಬ್ಬರನ್ನೂ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಇವರೊಂದಿಗೆ ನಿಯಮಾವಳಿ ಮೀರಿ 40 ಮಂದಿ ಬೋಧಕೇತರ ಸಿಬ್ಬಂದಿಯನ್ನೂ ನಿಯಮಾವಳಿ ಮೀರಿ ನೇಮಕವಾಗಿದ್ದು, ಇವರಲ್ಲಿ 15 ಮಂದಿ ನೇಮಕಾತಿ ರದ್ದುಗೊಳಿಸಲಾಗಿದೆ.

ನೀತಿ ನಿಯಮ ಉಲ್ಲಂಘನೆ: ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಉಪಬಂಧಗಳುಹಾಗೂ ಕರ್ನಾಟಕ ವಿಶ್ವ ವಿದ್ಯಾಲಯಗಳ (ತಿದ್ದುಪಡಿ) ಅಧಿನಿಯಮ 2019ರ ಉಪಬಂಧಗಳು, ಸರ್ಕಾರದ ನೀತಿ ನಿಯಮಗಳ ಮಾಹಿತಿ ಇದ್ದರೂ ಅಧಿನಿಯಮಗಳ ಉಪಬಂಧಗಳನ್ನು, ಸರ್ಕಾರದ ನೀತಿನಿಯಮ ಗಳನ್ನು ಉಲ್ಲಂಘಿಸಿ ಮಂಡ್ಯ ವಿಶ್ವವಿದ್ಯಾಲಯದಲ್ಲಿ ತಮ್ಮ ಹಂತದಲ್ಲಿಯೇ ಸರ್ಕಾರದ ನೀತಿ ನಿಯಮಗಳಿಗೆ ವಿರುದ್ಧವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ನೇಮಕಾತಿಯನ್ನು ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.

ಉದಯವಾಣಿ ಸಮಗ್ರ ವರದಿ: ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಅಕ್ರಮನೇಮಕಾತಿ ಕುರಿತು ಉದಯವಾಣಿ ಸಮಗ್ರ ವರದಿಯನ್ನು ಈ ಹಿಂದೆಯೇ ಪ್ರಕಟಿಸಿತ್ತು. ವಿಶ್ವವಿದ್ಯಾಲಯದಲ್ಲಿ ನಿಯಮಾವಳಿ ಮೀರಿ ನೇಮಕಾತಿ ಮಾಡಿಕೊಂಡಿರುವ ಬಗ್ಗೆ ಶಾಸಕ ಎಂ.ಶ್ರೀನಿವಾಸ್‌ ಹಾಗೂ ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆಸದಿದ್ದರು.

Advertisement

ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆ ನಡೆಯುತ್ತಿರುವುದರಿಂದ ಬೋಧಕೇತರ ಸಿಬ್ಬಂದಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಪರೀಕ್ಷೆ ಮುಗಿದ ಕೂಡಲೇ ಅವರನ್ನು ಮುಕ್ತಗೊಳಿಸಲಾಗುವುದು. ಉಳಿದಂತೆ ಕುಲಸಚಿವರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.-ಮಹದೇವ ನಾಯಕ್‌, ವಿಶೇಷಾಧಿಕಾರಿ, ಮಂಡ್ಯವಿಶ್ವವಿದ್ಯಾನಿಲಯ

Advertisement

Udayavani is now on Telegram. Click here to join our channel and stay updated with the latest news.

Next