Advertisement
ಯಾಕೆ? ಏನು?: ರಾಜ್ಯಾದ್ಯಂತ ಧಾರ್ಮಿಕವಾಗಿ ಖ್ಯಾತಿ ಇರುವ ರೇವಣ ಸಿದ್ದೇಶ್ವರ ಕ್ಷೇತ್ರ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಪ್ರತಿ ವರ್ಷ ಬಸವೇಶ್ವರರ ಅಗ್ನಿಕುಂಡೋತ್ಸವ ಮತ್ತು ಮಹಾ ರಥೋತ್ಸವವನ್ನು ಸ್ಥಳೀಯ ಗ್ರಾಮಸ್ಥರು, ಭಕ್ತಾದಿಗಳ ಸಹಕಾರದಲ್ಲಿ ಜಿಲ್ಲಾಡಳಿತ ಆಚರಿಸುತ್ತ ಬಂದಿದೆ. ಬಸವೇಶ್ವರ ಅಗ್ನಿಕೊಂಡೋತ್ಸವಕ್ಕೆ 60 ಅಡಿ ಉದ್ದದ ಅಗ್ನಿಕೊಂಡವನ್ನು ನಿರ್ಮಿಸುವುದು ವಾಡಿಕೆ. ಕಳೆದ ವರ್ಷ ನಡೆದ ಅಗ್ನಿ ಕೊಂಡವನ್ನು ಹಾಯುವ ವೇಳೆ ವಿಜಯ್ ಕುಮಾರ್ ಅವರು ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಚಕರ ತಂಡ ಅಗ್ನಿಕೊಂಡದ ಉದ್ದವನ್ನು ಕಡಿಮೆ ಮಾಡು ವಂತೆ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿ ಸಿದ ಜಿಲ್ಲಾಡಳಿತ 60 ಅಡಿ ಉದ್ದಕ್ಕೆ ಬದಲಿಗೆ 15 ಅಡಿ ಉದ್ದದ ಅಗ್ನಿಕೊಂಡವನ್ನು ನಿರ್ಮಿಸಿತು. ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಪದ್ಧತಿಯಂತೆ 60 ಅಡಿ ಉದ್ದದ ಅಗ್ನಿಕೊಂಡವನ್ನು ನಿರ್ಮಿಸಿ ಎಂದು ಪಟ್ಟು ಹಿಡಿದು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ತಮ್ಮ ಆಕ್ಷೇಪಕ್ಕೆ ಜಿಲ್ಲಾಡಳಿತ ಸ್ಪಂದಿಸ ದಿದ್ದರಿಂದ ಶನಿವಾರ ಬೆಳಿಗ್ಗೆ ನಡೆಯಬೇಕಿದ್ದ ಅಗ್ನಿ ಕೊಂಡ ಮಹೋತ್ಸವವನ್ನು ಸ್ಥಳೀಯರು ಬಹಿಷ್ಕರಿಸಿ ದರು. ಹೀಗಾಗಿ ಅಗ್ನಿಕುಂಡೋತ್ಸವ ನೆರವೇರಲಿಲ್ಲ.
Related Articles
Advertisement
ಸ್ಥಳೀಯರು ಅಧಿಕಾರಿಗಳ ನಡುವೆ ವಾಗ್ವಾದ:
ರಾಜ್ಯಾದ್ಯಂತ ಪ್ರಸಿದ್ದ ಪಡೆದಿರುವ ತಾಲೂಕಿನ ಕೈಲಾಂಚ ಹೋಬಳಿ ಅವ್ವೇರಹಳ್ಳಿ ಗ್ರಾಮದ ಬಳಿಯ ಎಸ್‌ಆರ್‌ಎಸ್ ಕ್ಷೇತ್ರದಲ್ಲಿ ಶನಿವಾರ ದತ್ತಿ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ವಾಕ್ಸಮರ ನಡೆಯಿತು.
ಪದ್ಧ್ದತಿಯಂತೆ ಅಗ್ನಿಕುಂಡವನ್ನು ನಿರ್ಮಿಸದ ಅಧಿ ಕಾರಿಗಳು ಹಾಗೂ ಅರ್ಚಕರ ವಿರುದ್ದವೂ ಗ್ರಾಮ ಸ್ಥರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
60 ಅಡಿ ಬದಲಿಗೆ 15 ಅಡಿ ಉದ್ದದ ಅಗ್ನಿಕೊಂಡ ನಿರ್ಮಿಸಿದ್ದೇ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾ ಯಿತು. ಅಗ್ನಿಕುಂಡ ವನ್ನು ಹಾಯದೆ ರಥೋತ್ಸವ ನಡೆಯುವುದು ಸರಿಯಲ್ಲ ಎಂದ ಕೆಲವು ಗ್ರಾಮ ಸ್ಥರು ಮಹಾರಥದ ಸಿಂಗಾರವನ್ನು ತಡೆದರು.
ಅಗ್ನಿಕುಂಡದ ಬಳಿ ಜಮಾಯಿಸಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಮತ್ತು ದತ್ತಿ ಇಲಾಖೆ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರಾದರು. ಗ್ರಾಮ ಸ್ಥರು ತಮ್ಮ ಪಟ್ಟು ಬಿಡಲಿಲ್ಲ. ರಾಜ್ಯಾದ್ಯಂತ ಭಕ್ತರು ಆಗಮಿಸಿದ್ದು ಅವರನ್ನು ನಿರಾಸೆಗೊಳಿಸಬೇಡಿ ಎಂದು ಅಧಿಕಾರಿಗಳು ಪರಿಪರಿಯಾಗಿ ಮಾಡಿ ಕೊಂಡ ಮನವಿಗೆ ಪ್ರತಿಭಟನೆ ಕೈಬಿಟ್ಟರು. ನಂತರ ರಥಕ್ಕೆ ನಡೆಯಬೇಕಿದ್ದ ಸಿಂಗಾರ ಮುಂದು ವರೆಯಿತು. ರಥದಲ್ಲಿ ಉತ್ಸವ ಮೂರ್ತಿ ಸ್ಥಾಪನೆ, ಮಂಗಳವಾದ್ಯ ಮೊಳಗಿತು. ಉಪವಿಭಾಗಾಧಿಕಾರಿ ಗಳು ರಥೋತ್ಸವಕ್ಕೆ ಪೂಜೆಯನ್ನು ನೆರೆವೇರಿಸಿದರು. ಆದರೆ ರಥವನ್ನು ಎಳೆಯಬೇಕಿದ್ದ ಸಮುದಾಯ ಸ್ಥಳಕ್ಕೆ ಬರಲಿಲ್ಲ. ಹೀಗಾಗಿ ರಥ ಮುಂದೆ ಸಾಗಲೇ ಇಲ್ಲ.