Advertisement

ರೈತರ ಮೇಲಿನ ಮೊಕದ್ದಮೆ ರದ್ದು: ಸರಕಾರಕ್ಕೆ ಕೃತಜ್ಞತೆ ಪತ್ರ

01:53 PM Mar 30, 2018 | |

ವಿಜಯಪುರ: ಕೂಡಗಿ ಎನ್‌ಟಿಪಿಸಿ ವಿರೋಧಿಸಿ ಹೋರಾಟ ನಡೆಸಿದ್ದ ರೈತರ ಮೇಲಿನ ಮೊಕದ್ದಮೆ ಹಿಂಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿ ರೈತರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪತ್ರ ರವಾನಿಸಿದರು. 

Advertisement

ಬಸವನಬಾಗೇವಾಡಿ ತಾಲೂಕು ಕೂಡಗಿ ಎನ್‌ಟಿಪಿಸಿ ಘಟಕ ಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸಿದ 291 ಜನ ರೈತರ ಮೇಲೆ 27 ಮೊಕದ್ದಮೆ ಹೂಡಲಾಗಿತ್ತು. ಇದೀಗ ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ಅವರ ಸಂಪುಟ ಸದಸ್ಯರು ಒಕ್ಕೊರಲ ಬೆಂಬಲ ನೀಡಿ ಕೂಡಗಿ ವಿರೋಧಿ  ಹೋರಾಟ ನಡೆಸಿದ ರೈತರ ಮೇಲಿನ ಮೊಕದ್ದಮೆ ಹಿಂಪಡೆದಿದ್ದಾರೆ. ಹೀಗಾಗಿ ಬಾಧಿತ ರೈತರೆಲ್ಲರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ರೈತರು ತಿಳಿಸಿದ್ದಾರೆ.

ಶಾಸಕ ದಿ| ಕೆ.ಎಸ್‌. ಪುಟ್ಟಣ್ಣಯ್ಯ ಅವರಿಗೂ ನಮನ ಸಲ್ಲಿಸುವ ಅಗತ್ಯವಿದೆ. ರೈತರ ಮೇಲಿನ ಮೊಕದ್ದಮೆ ಹಿಂಡೆಯಲು ಸದನದಲ್ಲಿ ಪ್ರಸ್ತಾಪ ಮಾಡಿ, ಸತತ ನಾಲ್ಕು ವರ್ಷಗಳ ಕಾಲ ಹೋರಾಡಿ ಸರ್ಕಾರದ ಮೇಲೆ ಒತ್ತಡ ಹೇರಿ ಮೊಕದ್ದಮೆ ಹಿಂಪಡೆಯುವ ಅಗತ್ಯದ ಮನವರಿಕೆ ಮಾಡಿ ಕೊಟ್ಟಿದ್ದಾರೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ಸಿಂಧೂರ, ಕರ್ನಾಟಕ
ಜನ ಹಾಗೂ ಪರಿಸರ ರಕ್ಷಣಾ ಸಮಿತಿಯ ಮಲ್ಲಿಕಾರ್ಜುನ ಕೆಂಗನಾಳ, ಮಲ್ಲಿಕಾರ್ಜುನ ಬೇರಲದಿನ್ನಿ, ಶರಣಯ್ಯ ನಿಂಗಯ್ಯ ಕಂಬಿಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next