ಮೈಸೂರು: ಮೈಮುಲ್ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ, ಹೊಸದಾಗಿ ನೇಮಕ ನಡೆಸುವಂತೆ ಶಾಸಕ ಸಾ.ರಾ.ಮಹೇಶ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಮುಲ್ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ. ಜತೆಗೆ ನೇಮಕಾತಿ ಪ್ರಕ್ರಿಯೆಯೂ ಮುಂದುವರಿಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದ್ದಾರೆ. ಆದರೆ ಲೋಪಗಳನ್ನು ಸರಿಪಡಿಸದೇ ನೇಮಕಾತಿ ಮಾಡಲು ಕಾನೂನಿನಡಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹೊಸದಾಗಿ ನೇಮಕ ಪ್ರಕ್ರಿಯೆ ನಡೆಯಲಿ ಎಂದು ಒತ್ತಾಯಿಸಿದರು.
ಪ್ರಕ್ರಿಯೆ ತೆಡೆಯಿರಿ: ಈ ಹಿಂದೆ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಲ್ಲಿ (ಚಾಮುಲ್) 72 ವಿವಿಧ ಹುದ್ದೆ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರು ವುದು ತನಿಖೆ ಯಿಂದ ತಿಳಿದು ಬಂದಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ನಿಯಮ, ಕಾರ್ಯವಿಧಾನ ಉಲ್ಲಂಘನೆ, ಪಾರದರ್ಶಕತೆ ಇಲ್ಲದಿರುವುದು, ಸ್ವಜನಪಕ್ಷ ಪಾತ ನಡೆ ದಿದೆ ಎಂದು ಅಲ್ಲಿನ ಡೀಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಜತೆಗೆ ಚಾಮುಲ್‌ನಲ್ಲಿ ಪರೀಕ್ಷಾ ಅಕ್ರಮ ವೆಸಗಿರುವ ಅದೇ ಏಜೆನ್ಸಿಗೆ ಇಲ್ಲಿಯೂ ಪರೀಕ್ಷೆ ನಡೆಸಲು ಅವ ಕಾಶ ಕೊಟ್ಟಿದ್ದಾರೆ. ನಿಮ್ಮ ಇಲಾಖೆ ಅಧಿಕಾರಿಗಳೇ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಮೈಮುಲ್ ನಲ್ಲೂ ನೇಮಕಾತಿ ಪ್ರಕ್ರಿಯೆ ನಿಲ್ಲಿಸಿ. ಪರೀಕ್ಷೆ ನಡೆಸಿದ ಏಜೆನ್ಸಿ ವಿರುದ, ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದವರ ವಿರುದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದರು.
ಜಿಲ್ಲಾ ಸಚಿವರಿಗೆ ಸಲಹೆ: ಜಿಲ್ಲಾ ಉಸ್ತುವಾರಿ ಸಚಿವರೆ ಯಾರ ಒತ್ತಡಕ್ಕೂ ಮಣಿಯಬೇಡಿ. ಮೈಸೂರಿನಲ್ಲಿ ವಿವಿಧ ಬಗೆಯ ಹಾವುಗಳಿವೆ. ಕೆಲವು ಹಾವು ಕಡಿದರೆ ವಿಷ. ಇನ್ನು ಕೆಲವು ಮೂಸಿದರೂ ವಿಷ. ಆದ್ದರಿಂದ ಎಚ್ಚ ರಿಕೆಯಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಬೇರೆ ಕಡೆ ಭ್ರಷ್ಟಾಚಾರ ನಡೆಸಲ್ಲವೇ: ಮೈಸೂರಿನ ಅಬಕಾರಿ ಡಿಸಿ ಮೇಲೆ ಭ್ರಷ್ಟಾಚಾರ ಆರೋಪ ಇತ್ತು. ಅದಕ್ಕೆ ವರ್ಗಾವಣೆ ಮಾಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಆದರೆ, ಅವರು ಹೋದ ಕಡೆ ಭ್ರಷ್ಟಾಚಾರ ನಡೆಸುವುದಿಲ್ಲವೇ? ಅಬಕಾರಿ ಡಿಸಿ ವರ್ಗಾವಣೆಗೆ ಅಷ್ಟೊಂದು ಆಸಕ್ತಿ ತೋರಿದ್ದು ಏಕೆ? ಭ್ರಷ್ಟಾಚಾರ ಆರೋಪ ಇದ್ದರೆ ಅಮಾನತು ಮಾಡಿ. ಆರೋಪ ಸಾಬೀತಾದರೆ ವಜಾಗೊಳಿಸಿ ಎಂದು ಆಗ್ರಹಿಸಿದರು.