ಮಹಾನಗರ: ಕೆನರಾ ಪ್ರೌಢ ಶಾಲೆಯ 2019- 20ರ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿ ಮಂಡಲದ ಉದ್ಘಾಟನೆ ಸಮಾ ರಂಭ ಸೋಮವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಯೋಗೀಶ್ ಭಟ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಆ ಕ್ಷೇತ್ರದ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಕೆನರಾ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ. ಅಣ್ಣಪ್ಪ ಪೈ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮಂತ್ರಿ ಮಂಡಲದ ನಾಯಕನಾಗಿ ಪ್ರಥಮೇಶ್, ಉಪನಾಯಕಿಯಾಗಿ ಪ್ರಾರ್ಥನಾ ರಾವ್, ವಿಪಕ್ಷ ನಾಯಕಿಯಾಗಿ ಮೇಘನಾ ರಾವ್ ಹಾಗೂ ಉಳಿದ ಇಲಾಖೆ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದರು.
ಶಾಲಾ ಮುಖ್ಯೋಪಾದ್ಯಾಯಿನಿ ಜಲಜಾಕ್ಷಿ ಪ್ರತಿಜ್ಞಾವಿಧಿ ಬೋಧಿ ಸಿದರು. ಶಾಲಾ ಸಂಚಾಲಕ ಎಂ. ವಾಮನ್ ಕಾಮತ್, ಗೋಪಾಲ ಶೆಣೈ, ಕೆನರಾ ಕನ್ನಡ ಮಾಧ್ಯಮದ ಸಂಚಾಲಕ ಬಸ್ತಿ ಪುರುಷೋತ್ತಮ್ ಶೆಣೈ, ರಕ್ಷಕ- ಶಿಕ್ಷಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮಂಜುಳಾ, ರಿಷಬ್ ನಿರೂಪಿಸಿದರು.
ಶಿಕ್ಷಕಿಯರಾದ ಉದಯ ಕುಮಾರಿ, ಶೀತಲ್ ಶೆಣೈ, ಇಂದು ಮತಿ, ವಿದ್ಯಾ ಶೆಟ್ಟಿ, ಸುಭಾಷಿಣಿ, ರಮಾನಂದ ಕಾರ್ಯಕ್ರಮ ಸಂಘಟಿಸಿದರು.