Advertisement

ಕೆನರಾ ದೈವಜ್ಞ ಅಸೋಸಿಯೇಶನ್‌:ವಾರ್ಷಿಕ ಸ್ನೇಹ ಸಮ್ಮಿಲನ

12:37 PM Jan 10, 2018 | Team Udayavani |

ಮುಂಬಯಿ: ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡಿದಾಗಲೆ ಸೇವೆ ಸಮಾಧಾನಕರವಾಗಿರುತ್ತದೆ. ಸೇವೆ ಫಲದಾಯಕವಾದಾಗ ಸೇವೆಗೈದವರೂ ನೆಮ್ಮದಿಯಾಗಿರುತ್ತಾರೆ.  ನಾವು ಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವ ಅಗತ್ಯವಿದ್ದು  ಆಗ ಮಾತ್ರ ನಮ್ಮ ಅಸ್ಮಿತೆ ನಾಡಿಗೆ ತಿಳಿಯುತ್ತದೆ ಎಂದು ಕೆನರಾ ದೈವಜ್ಞ ಅಸೋಸಿಯೇಶನ್‌ ಮುಂಬಯಿ ಇದರ ಅಧ್ಯಕ್ಷ ಸದಾನಂದ ಎಸ್‌. ಶೇಠ್‌ ಅವರು  ತಿಳಿಸಿದರು.

Advertisement

ಜ. 7 ರಂದು ಅಪರಾಹ್ನ ದಾದರ್‌ ಪೂರ್ವದ ಬೋಂಬೆ ಆಂಧ್ರ ಮಹಾಸಭಾ ಜಿಮಾVನದ ಸಭಾಗೃಹದಲ್ಲಿ ಆಯೋಜಿಸಲಾಗಿರುವ ಅಸೋಸಿಯೇಶನ್‌ನ ವಾರ್ಷಿಕ ಧಾರ್ಮಿಕ ಮತ್ತು ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಂಸ್ಥೆಯ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಿಂಡಿಕೇಟ್‌ ಬ್ಯಾಂಕ್‌ನ ನಿವೃತ್ತ ಉನ್ನತಾಧಿಕಾರಿ ಕಮಲಾಕರ್‌ ಎಂ. ಶೇಠ್‌ ಬೆಂಗಳೂರು, ಶೋಭಾ ಕೆ. ಶೇಠ್‌ ಮತ್ತು ಮಂಗಳೂರು ಜುವೆಲ್ಲರ್ನ ಗಣೇಶ್‌ ಶೇಠ್‌ ಉಪಸ್ಥಿತರಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಉದಯ್‌ ಪಿ. ಶೇಠ್‌, ಗೌರವ ಪ್ರಧಾನ  ಕಾರ್ಯದರ್ಶಿ ಗಜಾನನ ಡಿ. ಪವಸ್ಕಾರ್‌, ಗೌರವ ಕೋಶಾಧಿಕಾರಿ ವಿನಾಯಕ್‌ ಎಂ. ದಿವಾಕರ್‌, ಜೊತೆ ಕಾರ್ಯದರ್ಶಿ ಪ್ರಕಾಶ್‌ ಎಸ್‌. ಸಾನು, ಜೊತೆ ಕೋಶಾಧಿಕಾರಿ ರಾಜೇಂದ್ರ ಬುಡೇìಕರ್‌ ಉಪಸ್ಥಿತರಿದ್ದು ಕಮಲಾಕರ್‌ ದಂಪತಿಯನ್ನು ಸಮ್ಮಾನಿಸಿ ಅಭಿನಂದಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ದೈವಜ್ಞ ಸಂಸ್ಥೆಯ ಸದಸ್ಯರಾದ ಸುರೇಶ್‌ ಸಿ. ಶೇಠ್‌, ಶ್ರೀನಿವಾಸ್‌ ಆರ್‌. ರೈಕಾರ್‌, ಚಂದ್ರಶೇಖರ್‌ ಎಸ್‌. ರಾವ್‌, ಸುರೇಶ್‌ ಪಿ. ರೇವಣRರ್‌, ವಿಲಾಸ್‌  ವಿ. ಶೀರೊಡ್ಕರ್‌, ಪ್ರಶಾಂತ್‌ ಶೇಠ್‌, ವಿಮ್ಲೆàಶ್‌ ಎನ್‌. ಕಂಬದ್‌ಕೋನ್‌,  ಸಂತೋಷ್‌ ಎ. ಶೇಠ್‌, ಸವಿತಾ ಎಸ್‌. ಚಂದೋನ್ಕರ್‌, ಅನುರಾಧಾ ಎಸ್‌. ವೆರ್ಣೆಕರ್‌, ಸರೋಜಾ ಎಸ್‌. ವೆರ್ಣೆಕರ್‌ ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರು  ಸೇರಿದಂತೆ ಅಪಾರ ಸಂಖ್ಯೆಯ ಬಂಧುಗಳು ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮದ ಪ್ರಯುಕ್ತ ಪೂರ್ವಾಹ್ನ ವಿದ್ವಾನ್‌ ಶ್ರೀ ವಿನಾಯಕ್‌ ಭಟ್‌ ಅವರು ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದವನ್ನಿತ್ತು ಹರಸಿದರು. ಕಮಲಾಕರ ಶೇಠ್‌ ಮತ್ತು  ಸುಮನ್‌ ಕೆ. ಶೇs… ದಂಪತಿ ಪೂಜೆಯ  ಯಜಮಾನತ್ವ ವಹಿಸಿದ್ದರು. ಅಪರಾಹ್ನ ಮನೋರಂಜನಾ ಕಾರ್ಯಕ್ರಮವಾಗಿ ಸದಸ್ಯ ಬಾಂಧವರಿಂದ ಮತ್ತು ಮಕ್ಕಳಿಂದ ನೃತ್ಯ ವೈವಿಧ್ಯ, ಸಂಗೀತ, ಛದ್ಮವೇಶ ಇನ್ನಿತರ ಕಾರ್ಯಕ್ರಮಗಳು ನಡೆಯಿತು.

ಕೊನೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಿ ಹಾಗೂ ಕ್ರಿಕೆಟ್‌ ಪಂದ್ಯಾಟದ ವಿಜೇತ ತಂಡಗಳಿಗೆ ಟ್ರೋಫಿಯನ್ನು ಪ್ರದಾನಿಸಿ ಅಭಿನಂದಿಸಲಾಯಿತು. ಪ್ರಶಾಂತ್‌ ಶೇಠ್‌ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವಿಭಾಗದ ಸದಸ್ಯೆಯರು  ಪ್ರಾರ್ಥನೆಗೈದರು. ಗಜಾನನ ಪವಸ್ಕಾರ್‌ ಅತಿಥಿಗಳನ್ನು ಪರಿಚಯಿಸಿ ವಂದಿಸಿದರು. 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next