Advertisement

ಕೆನರಾ, ವಿಜಯ ಬ್ಯಾಂಕ್‌ಗಳೂ ವಿಲೀನ?

03:45 AM Jun 26, 2017 | Harsha Rao |

ಹೊಸದಿಲ್ಲಿ: ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಸೇರಿದಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಐದು ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಮುಕ್ತಾಯದ ಬಳಿಕ ಕೆನರಾ ಬ್ಯಾಂಕ್‌, ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳನ್ನು ವಿಲೀನಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಈ ಪೈಕಿ ಮೊದಲ ಹಂತದಲ್ಲಿ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳನ್ನು ವಿಲೀನಗೊಳಿಸಲು ಕ್ರಮ ಆರಂಭಿಸುವ ಸಾಧ್ಯತೆಗಳಿವೆ. ಬ್ಯಾಂಕಿಂಗ್‌ ವಹಿವಾಟಿನಲ್ಲಿ ಸದ್ಯದ ಸ್ಥಿತಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಸಂಸತ್‌ನ ಮುಂಗಾರು ಅಧಿವೇಶನ ಮುಕ್ತಾಯದ ಬಳಿಕ ಈ ಬಗ್ಗೆ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ.

Advertisement

ಕೇಂದ್ರ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಈಗ 21 ಇವೆ. ಅದರ ಬದಲಾಗಿ 10-12 ಸರಕಾರಿ ಬ್ಯಾಂಕ್‌ಗಳು ಸಾಕು ಎನ್ನುವುದು ಅದರ ಇರಾದೆ. ದೇಶದ ಜನಸಂಖ್ಯೆಗೆ ಅನುಗುಣವಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ನಂಥ 3 ಬ್ಯಾಂಕುಗಳು ಅಗತ್ಯವಾಗಿದೆ ಎಂದು ಅದರ ಪ್ರತಿಪಾದನೆ. ಅಂಥ ಬ್ಯಾಂಕ್‌ಗಳ ಬಳಿಕ ಮಧ್ಯಮ ಪ್ರಮಾಣದ ಬ್ಯಾಂಕ್‌ಗಳು ಮತ್ತು ಕೆಲ ವಿಶೇಷ ವಲಯಗಳಿಗೆ ಸಂಬಂಧಿಸಿ ವಿಶೇಷ ಬ್ಯಾಂಕ್‌ಗಳು ಇದ್ದರೆ ಸಾಕಾಗುತ್ತದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ. 

ಇದಲ್ಲದೆ, ಇಂಡಿಯನ್‌ ಬ್ಯಾಂಕ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಮತ್ತು ಸಿಂಡಿ ಕೇಟ್‌ ಬ್ಯಾಂಕ್‌ಗಳಿಗೂ ಅವುಗಳ ಮಟ್ಟದಲ್ಲಿಯೇ ವಿಲೀನ ಪ್ರಕ್ರಿಯೆ ನಡೆಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲನೆಗೆ ಸೂಚಿಸಲಾಗಿದೆ. ಆರ್‌ಬಿಐನ ತಪ್ಪುಗಳನ್ನು ಸರಿಯಾದ ರೀತಿಯಲ್ಲಿ ತಿದ್ದಿಕೊಳ್ಳುವ (ಪಿಸಿಎ) ಯೋಜನೆಗೆ ದೇನಾ ಬ್ಯಾಂಕ್‌ ಸೇರಿ 5 ಬ್ಯಾಂಕ್‌ಗಳನ್ನು ಆರಿಸಲಾಗಿದೆ. ಐಡಿಬಿಐ ಬ್ಯಾಂಕ್‌, ಬ್ಯಾಂಕ್‌ ಆಫ್ ಮಹಾರಾಷ್ಟ್ರ, ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ, ಯೂಕೋ ಬ್ಯಾಂಕ್‌ ಈ ನಿಯಮ ಅನುಸರಿಸಿದ ಇತರ ಬ್ಯಾಂಕ್‌ಗಳು.

Advertisement

Udayavani is now on Telegram. Click here to join our channel and stay updated with the latest news.

Next