Advertisement

Canada: ಜಮೈಕಾದಲ್ಲಿ ಕೈಕೊಟ್ಟ ಕೆನಡಾ ಪ್ರಧಾನಿ ವಿಮಾನ

08:11 PM Jan 06, 2024 | Pranav MS |

ಕಿಂಗ್‌ಸ್ಟನ್‌: ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಜಿ20 ರಾಷ್ಟ್ರದ ಸಮ್ಮೇಳನಕ್ಕೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೌ ಆಗಮಿಸಿದ್ದ ವೇಳೆ ಅವರ ವಿಮಾನ ತಾಂತ್ರಿಕ ತೊಂದರೆಗೆ ಈಡಾಗಿ 2 ದಿನಗಳ ಕಾಲ ನವದೆಹಲಿಯಲ್ಲಿ ಉಳಿದಿತ್ತು. 2 ದಿನಗಳ ಕಾದು ಕುಳಿತು ಬೇರೆ ವಿಮಾನದಲ್ಲಿ ಸ್ವದೇಶಕ್ಕೆ ವಾಪಸಾಗಿದ್ದರು.

Advertisement

ಅದೇ ಮಾದರಿ ಘಟನೆ ಕೆರೆಬಿಯನ್‌ ದ್ವೀಪ ಸಮೂಹಗಳ ರಾಷ್ಟ್ರ ಜಮೈಕಾದಲ್ಲಿ ನಡೆದಿದೆ. ಪ್ರವಾಸಕ್ಕಾಗಿ ಕುಟುಂಬ ಸಮೇತ ಕೆನಡಾ ಪ್ರಧಾನಿ ಜಮೈಕಾಗೆ ಆಗಮಿಸಿದ್ದರು. ಜಸ್ಟಿನ್‌ ಅವರ ಕುಟುಂಬವನ್ನು ಮರಳಿ ಸ್ವದೇಶಕ್ಕೆ ಕರೆತರಲು ರಾಯಲ್‌ ಕೆನಡಾ ವಾಯು ಪಡೆಯ ಪರ್ಯಾಯ ವಿಮಾನವು ಜಮೈಕಾಗೆ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದ 4 ತಿಂಗಳಲ್ಲಿ ವಿದೇಶ ಭೇಟಿ ಸಂದರ್ಭದಲ್ಲಿ ಕೆನಡಾ ಪ್ರಧಾನಿಗಳ ವಿಮಾನ ಈ ರೀತಿ ಸಮಸ್ಯೆಗೆ ತುತ್ತಾಗಿರುವುದು ಇದು ಎರಡನೇ ಬಾರಿ.

Advertisement

Udayavani is now on Telegram. Click here to join our channel and stay updated with the latest news.

Next