ಒಟ್ಟಾವಾ: ಇನ್ನು ಕೆಲವು ವರ್ಷಗಳಲ್ಲಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳ ಲಿರುವ ಮಕ್ಕಳಿಗಾಗಿ ಕುಟುಂಬವೊಂದು ವಿಶ್ವ ಪ್ರವಾಸ ಮಾಡುತ್ತಿದೆ. ಕೆನಡಾದ ಕ್ವಿಬೆಕ್‌ನ ಎಡಿತ್ ಲೆಮೆ ಹಾಗೂ ಸೆಬಾಸ್ಟಿ ಯನ್ ಪೆಲ್ಲೆಟೈ ಯರ್ ಈ ರೀತಿ ಸಾಹಸಕ್ಕೆ ಕೈ ಹಾಕಿರುವ ಜೋಡಿ.
ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಅದರಲ್ಲಿ ಮೊದ ಲನೆ ಮಗಳಾದ ಮಿಯಾ(12) ಹಾಗೂ ಗಂಡು ಮಕ್ಕಳಾದ ಕೊಲಿನ್(7), ಲಾರೆಂಟ್(5) ರೆಟಿನೈಟಿಸ್ ಪಿಗ್ಮೆಂಟೋಸಾ ಹೆಸರಿನ ಕಾಯಿಲೆಯಿಂದ ಬಳಲುತ್ತಿ ದ್ದಾರೆ. ಈ ಮಕ್ಕಳಿಗೆ ಅವರ ಮಧ್ಯ ವಯಸ್ಸಿನ ಸಮಯದಲ್ಲಿ ಕಣ್ಣಿನ ದೃಷ್ಟಿ ಹೋಗಲಿದೆ.
ಅದೇ ಕಾರಣಕ್ಕೆ ಅವರಿಗೆ ನೆನಪುಗಳ ಕಲೆ ಹಾಕುವುದಕ್ಕಾಗಿ ಈ ಜೋಡಿ, ನಾಲ್ಕೂ ಮಕ್ಕಳನ್ನು ವಿಶ್ವ ಪ್ರವಾಸ ಮಾಡಿಸುತ್ತಿದೆ.
ಮಾರ್ಚ್‌ನಿಂದಲೇ ವರ್ಲ್ಡ್ ಟ್ರಿಪ್ ಆರಂಭವಾಗಿದ್ದು, ಇನ್ನೂ ಆರು ತಿಂಗಳ ಕಾಲ ಈ ಕುಟುಂಬ ಪ್ರವಾಸದಲ್ಲಿಯೇ ಇರಲಿದೆ. ಈಗಾಗಲೇ ನಮೀಬಿಯಾ, ಮಂಗೋಲಿಯಾ, ಇಂಡೋನೇಷ್ಯಾ ಸೇರಿ ಅನೇಕ ರಾಷ್ಟ್ರಗಳ ಪ್ರವಾಸ ಮಾಡಲಾಗಿದೆ.