ಒಟ್ಟಾವಾ(ಕೆನಡಾ): ಕೆನಡಾದ ಬಿಲಿಯನೇರ್ ಉದ್ಯಮಿ ಫ್ರಾಂಕ್ ಸ್ಟ್ರೋನಾಕ್ (91ವರ್ಷ) ಅವರನ್ನು ದೈಹಿಕ ದೌರ್ಜನ್ಯದ ಆರೋಪದ ಮೇಲೆ ಶುಕ್ರವಾರ (ಜೂನ್ 07) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Chikkamagaluru: ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು… ಅದೃಷ್ಟವಶಾತ್ ಪಾರಾದ ಪ್ರಯಾಣಿಕರು
ಪೀಲ್ ರೀಜನಲ್ ಪೊಲೀಸರು ಬಿಡುಗಡೆಗೊಳಿಸಿರುವ ಪ್ರಕಟನೆ ಪ್ರಕಾರ, 1980ರಿಂದ 2023ರವರೆಗೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇದರಲ್ಲಿ ಸೇರಿರುವುದಾಗಿ ಮಾಹಿತಿ ನೀಡಿದ್ದಾರೆ.
ಕೋಟ್ಯಧೀಶ್ವರ ಉದ್ಯಮಿ ಫ್ರಾಂಕ್ ಸ್ಟ್ರೋನಾಕ್ ಅವರನ್ನು ಬಂಧಿಸಿದ್ದು, ಅವರ ವಿರುದ್ಧ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯ ಹಾಗೂ ದುರ್ನಡತೆ ಸೇರಿದಂತೆ ಐದು ಕ್ರಿಮಿನಲ್ ಅಪರಾಧಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಒಂದು ವೇಳೆ ಫ್ರಾಂಕ್ ಸ್ಟ್ರೋನಾಕ್ ವಿರುದ್ಧ ಇಂತಹ ಬೇರೆ ಯಾವುದಾದರು ಪ್ರಕರಣಗಳಿದ್ದರೆ ಆ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ವಾಹನ ತಯಾರಿಕೆಯ ಬಿಡಿಭಾಗಗಳನ್ನು ತಯಾರಿಸುವ ಕೆನಡಾದ ಮ್ಯಾಗ್ನಾ ಇಂಟರ್ ನ್ಯಾಶನಲ್ ಕಂಪನಿಯ ಸಂಸ್ಥಾಪಕರಾಗಿರುವ ಸ್ಟ್ರೋನಾಕ್ ಅವರನ್ನು ಷರತ್ತುಗಳ ಮೇಲೆ ಬಿಡುಗಡೆ ಮಾಡಲಾಗಿದೆ. ಸೂಚಿಸಿದ ದಿನಾಂಕದಂದು ಬ್ರಾಂಪ್ಟನ್ ನಲ್ಲಿರುವ ಒಂಟಾರಿಯೊ ಕೋರ್ಟ್ ಆಫ್ ಜಸ್ಟೀಸ್ ಗೆ ಹಾಜರಾಗಬೇಕೆಂದು ಕೋರ್ಟ್ ನಿರ್ದೇಶನ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.