ಒಟ್ಟಾವಾ: ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯ ವಿವಾದದ ಮಧ್ಯೆ ಕೆನಡಾ ಭಾರತದಿಂದ 41 ರಾಜತಾಂತ್ರಿಕರನ್ನು ಹಿಂಪಡೆದಿದೆ ಎಂದು ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಗುರುವಾರ ಹೇಳಿದ್ದಾರೆ.
ಅಕ್ಟೋಬರ್ 10ರೊಳಗೆ ಭಾರತದಲ್ಲಿರುವ ಹೆಚ್ಚುವರಿ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಭಾರತ ಖಡಕ್ ಸೂಚನೆ ನೀಡಿದ ಬೆನ್ನಲ್ಲೇ ಕೆನಡಾ ವಾಪಸ್ ಕರೆಸಿಕೊಂಡಿದೆ.
ರಾಜತಾಂತ್ರಿಕರು ಹೊರಹೋಗದಿದ್ದಲ್ಲಿ ಶುಕ್ರವಾರದೊಳಗೆ ಅವರ ಅಧಿಕೃತ ಸ್ಥಾನಮಾನವನ್ನು ಏಕಪಕ್ಷೀಯವಾಗಿ ಹಿಂತೆಗೆದುಕೊಳ್ಳುವುದಾಗಿ ಭಾರತ ಬೆದರಿಕೆ ಹಾಕಿದೆ ಎಂದು ಜೋಲಿ ಹೇಳಿದ್ದಾರೆ. ಈ ಕ್ರಮವು “ಅಸಮಂಜಸ ಮತ್ತು ಅಭೂತಪೂರ್ವ ಮತ್ತು ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ” ಎಂದು ಅವರು ಹೇಳಿದ್ದಾರೆ.
ಕೆನಡಾ ಅಕ್ಟೋಬರ್ 10 ರೊಳಗೆ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಭಾರತವು ರಾಜತಾಂತ್ರಿಕ ವಿನಾಯಿತಿಯನ್ನು ರದ್ದುಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು ಹಾಗಾಗಿ ಕೆನಡಾ ಒಟ್ಟು ನಲ್ವತ್ತೊಂದು ರಾಜತಾಂತ್ರಿಕರನ್ನು ವಾಪಾಸ್ ಕರೆಸಿಕೊಂಡಿದೆ.
ಇದನ್ನೂ ಓದಿ: ವಾಯುವಿಹಾರಿಗಳಿಗೆ ಜವರಾಯನಾದ ಟಿಪ್ಪರ್; ಒಬ್ಬರು ಸ್ಥಳದಲ್ಲೇ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ