Advertisement

ಕೋವಿಡ್ ತಂದ ಸಂಕಷ್ಟ: ಭಾರತದ ವಿಮಾನಗಳಿಗೆ ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ ನಿರ್ಬಂಧ

11:23 AM Apr 23, 2021 | Team Udayavani |

ಕೆನಡಾ/ಒಟ್ಟಾವಾ: ಭಾರತ ಮತ್ತು ಪಾಕಿಸ್ತಾನದಿಂದ ಆಗಮಿಸುವ ಪ್ರಯಾಣಿಕರಲ್ಲಿ ಕೋವಿಡ್ 19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಎರಡು ದೇಶಗಳಿಂದ ಆಗಮಿಸುವ ಎಲ್ಲಾ ನಾಗರಿಕ ವಿಮಾನಯಾನ ಕೆನಡಾ 30 ದಿನಗಳ ಕಾಲ ನಿಷೇಧಿಸಿರುವುದಾಗಿ ಸಾರಿಗೆ ಸಚಿವ ಒಮರ್ ಅಲ್ಘಾಬ್ರಾ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಪಿಪಿಎಫ್ ಸ್ಕೀಮ್ : 150 ರೂಪಾಯಿ ಹೂಡಿಕೆ ಮಾಡಿ 15 ಲಕ್ಷ ಪಡೆಯಿರಿ..!

“ಭಾರತ ಮತ್ತು ಪಾಕಿಸ್ತಾನದಿಂದ ಕೆನಡಾಕ್ಕೆ ವಿಮಾನದಲ್ಲಿ ಆಗಮಿಸುತ್ತಿರುವ ಪ್ರಯಾಣಿಕರಲ್ಲಿ ಕೋವಿಡ್ 19 ಸೋಂಕು ಭಾರೀ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಮುಂದಿನ 30 ದಿನಗಳ ಕಾಲ ಎರಡೂ ದೇಶಗಳಿಂದ ಕೆನಡಾಕ್ಕೆ ಆಗಮಿಸುವ ಎಲ್ಲಾ ವಾಣಿಜ್ಯ ಮತ್ತು ಖಾಸಗಿ ನಾಗರಿಕ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ” ಒಮರ್ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ಭಾರತದಲ್ಲಿ ಕೋವಿಡ್ ಸೋಂಕು ಕ್ಷಿಪ್ರವಾಗಿ ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಈ ಕ್ರಮವನ್ನು ತೆಗೆದುಕೊಂಡಿದ್ದವೆ, ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಂತರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವುದಾಗಿ ಒಮರ್ ತಿಳಿಸಿದ್ದಾರೆ.

ಈ ನಿಷೇಧ ಶುಕ್ರವಾರದಿಂದಲೇ (ಏಪ್ರಿಲ್ 23) ಜಾರಿಯಾಗಲಿದೆ. ಆದರೆ ಈ ನಿರ್ಬಂಧ ಸರಕು ಸಾಗಾಣೆ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದಿರುವ ಒಮರ್, ಲಸಿಕೆ, ರಕ್ಷಣಾ ಉಪಕರಣ ಮತ್ತು ಅಗತ್ಯ ವಸ್ತುಗಳ ಸರಬರಾಜು ನಿರಾತಂಕವಾಗಿ ಮುಂದುವರಿಯಲಿದೆ ಎಂದು ಹೇಳಿದರು.

Advertisement

ಭಾರತದ ವಿಮಾನಗಳಿಗೆ ಇಂಗ್ಲೆಂಡ್‌, ಆಸ್ಟ್ರೇಲಿಯಾ, ಯುಎಇ ನಿರ್ಬಂಧ

ಲಂಡನ್ನಿನ ಹೀಥ್ರೂ ಏರ್‌ಪೋರ್ಟ್‌ಗೆ ಆಗಮಿಸುವ ಭಾರತದ ಹೆಚ್ಚುವರಿ ವಿಮಾನಗಳಿಗೆ ಇಂಗ್ಲೆಂಡ್‌ ಸರ್ಕಾರ ನಿರಾಕರಣೆ ಹೇಳಿದೆ. ಅಲ್ಲದೆ, ವಿಮಾನ ಸಂಚಾರಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್‌ನ‌ ಹೌಸ್‌ ಆಫ್ ಕಾಮನ್ಸ್‌, ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಲು ನಿರ್ಧರಿಸಿದೆ. ಭಾರತದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿರುವ ಕಾರಣ, ಮುನ್ನೆಚ್ಚರಿಕೆಯಾಗಿ ಈ ಕ್ರಮ ಅನಿವಾರ್ಯ ಜರುಗಿಸಿದೆ.

ಶೇ.30 ವಿಮಾನ ಇಳಿಕೆ: ಭಾರತದಿಂದ ಆಗಮಿಸುವ ವಿಮಾನಗಳ ಸಂಖ್ಯೆ ಶೇ.30 ಕಡಿತಗೊಳಿಸಲು ಆಸ್ಟ್ರೇಲಿಯಾ ನಿರ್ಧರಿಸಿದೆ. ಭಾರತದಂಥ ಹೈ -ರಿಸ್ಕ್ ದೇಶಗಳಿಗೆ ಪ್ರಯಾಣಿಸದಂತೆ ಸೂಚಿಸಿದೆ. ಯುಎಇ ನಿರ್ಬಂಧ: ಭಾರತ ಸೇರಿದಂತೆ 20 ರಾಷ್ಟ್ರಗಳ ವಿಮಾನ ಸಂಚಾರಕ್ಕೆ ಯುಎಇ ನಿರ್ಬಂಧ ವಿಸ್ತರಿಸಿದೆ. ಈಗಾಗಲೇ ಯುಎಇ ಫೆಬ್ರವರಿಯಲ್ಲೇ ಕೆಲವು ರಾಷ್ಟ್ರಗಳ ವಿಮಾನಗಳಿಗೆ ನಿರ್ಬಂಧ ವಿಧಿಸಿತ್ತು. ಮೇ 17ರವರೆಗೆ ಈ ಆದೇಶವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next