Advertisement

ರಾತ್ರಿ ಮಾಂಸ ತಿಂದು ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದಾ?: ಸಿದ್ದರಾಮಯ್ಯ ಪ್ರಶ್ನೆ

04:08 PM Aug 21, 2022 | Team Udayavani |

ಚಿಕ್ಕಬಳ್ಳಾಪುರ: ಮಧ್ಯಾಹ್ನ ಊಟ ಮಾಡಿ ಸಂಜೆ ದೇವಾಲಯಕ್ಕೆ ಹೋದರೆ ತಪ್ಪೇನು? ದೇವರು ಇಂತಹದೆ ಆಹಾರ ಸೇವಿಸಿಕೊಂಡು‌ ಬರಬೇಕೆಂದು ಹೇಳುತ್ತಾರಾ? ನನ್ನ ಊಟದ ಬಗ್ಗೆ ಪ್ರಶ್ನಿಸಲು‌ ನೀವ್ಯಾರು? ಎಂದು ಬಿಜೆಪಿ ನಾಯಕರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ಕಿಡಿಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಟೀಕೆಗಳ ಕುರಿತು ಪ್ರತಿಕ್ರಿಯಿಸಿ, ”ನಾನು ಮಧ್ಯಾಹ್ನ ಸುದರ್ಶನ ಗೆಸ್ಟ್ ಹೌಸ್ ನಲ್ಲಿ ಊಟ ಮಾಡಿ ಸಂಜೆ ದೇವಾಲಯಕ್ಕೆ ಹೋದರೆ ತಪ್ಪಾ?ಸಂಜೆ‌ ನಾನು ಬಸವೇಶ್ವರ ‌ದೇವಾಲಯಕ್ಕೆ ಹೋಗಿದ್ದು, ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪೇನು? ಹಿಂದಿನ ದಿನ ತಿಂದು ಹೋಗಬಹುದಾ? ರಾತ್ರಿ ಮಾಂಸ ತಿಂದು ಬೆಳಗ್ಗೆ ದೇವಾಲಯಕ್ಕೆ ಹೋಗಬಹುದಾ? ಬಿಜೆಪಿ ಯವರಿಗೆ ಮೊಸರಲ್ಲಿ ಕಲ್ಲು ಹುಡುಕುವುದೇ ಕೆಲಸ, ಶಾಂತವಾಗಿರುವ ಪ್ರದೇಶದಲ್ಲಿ ಬೆಂಕಿ ಹಾಕುವುದು, ವಿಷ ಹಾಕುವುದು ಬಿಜೆಪಿಯವರ ಕೆಲಸ” ಎಂದು ಕಿಡಿ ಕಾರಿದರು.

”ಕಾರಿನ ಮೇಲೆ ಮೊಟ್ಟೆ ಎಸೆದವನು ಕಾಂಗ್ರೆಸ್ ಕಾರ್ಯಕರ್ತ ಅಲ್ಲ.  ಅವನ ಕೈಯಲ್ಲಿ ಬಲವಂತವಾಗಿ ಕಾಂಗ್ರೆಸ್ ಕಾರ್ಯಕರ್ತ ಅಂತ ಹೇಳಿಸಿದ್ದಾರೆ. ಜೀವಿಜಯ ಅವನು ಯಾರು ಅಂತ ಗೊತ್ತಿಲ್ಲ ಅನ್ನುತ್ತಾರೆ . ನೋಡೇ ಇಲ್ಲ ಅಂತಾನೆ, ಬಲತ್ಕಾರವಾಗಿ ಹೇಳಿಸಿದ್ದಾರೆ, ಸಂಪತ್ ಪಕ್ಕಾ ಆರ್ ಎಸ್ ಎಸ್ ಕಾರ್ಯಕರ್ತ. ಅವನ ಕೈಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಅಂತ ಹೇಳಿಸಿದ್ದಾರೆ. ಬಿಜೆಪಿ ನಾಯಕರು ಡೋಂಗಿಗಳು” ಎಂದು ಕೆಂಡಕಾರಿದರು.

”ನಾನು ದಾಳಿ ಮಾಡಲು ಕೊಡಗಿಗೆ ಹೊಗುತ್ತಿಲ್ಲ, ಜನರ ಕಷ್ಟಗಳಿಗ ಸ್ಪಂದಿಸಲು ಹೋಗುತ್ತಿದ್ದೇನೆ, ಬಿಜೆಪಿಯವರಿಗೆ ನಮ್ಮ ಏಳಿಗೆ ಸಹಿಸಲು ಆಗುತ್ತಿಲ್ಲ, ಬಿಜೆಪಿಯವರ ತಪ್ಪುಗಳನ್ನು ‌ಮುಚ್ಚಿಡಲು ನಮ್ಮ ವಿರುದ್ಧ ಈ ರೀತಿಯ ಅಪಪ್ರಚಾರಕ್ಕೆ ಮುಂದಾಗುತ್ತಿದ್ದಾರೆ” ಎಂದು‌ ವಾಗ್ದಾಳಿ ನಡೆಸಿದರು.

”ಟಿಪ್ಪು ವನ್ನು ಬಿಜೆಪಿಯವರು ಈಗ ವಿರೋಧ ಮಾಡುತ್ತಿದ್ದಾರೆ ಈ ಹಿಂದೆ ಬಿಜೆಪಿ ನಾಯಕರು ಟಿಪ್ಪು ವೇಷ ಭೂಷಣ ಧರಿಸಿದ್ದು‌ ನಾಟಕವೇ?ಅಶೋಕ್, ಶೆಟ್ಟರ್, ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿ ಬಿಜೆಪಿ ನಾಯಕರು ಬೆಂಬಲಿಸಿದ್ದು ಯಾಕೆ?” ಎಂದು ಪ್ರಶ್ನಿಸಿದರು.

Advertisement

”ಟಿಪ್ಪು ‌ಪುಸ್ತಕಕ್ಕೆ‌ ಯಡಿಯೂರಪ್ಪ‌ ಅವರೇ ಮುನ್ನಡಿ ಬರೆದಿದ್ದಾರೆ ಎಂದು ಟೀಕಿಸಿದ ಸಿದ್ದರಾಮಯ್ಯ ಬಡವರ ಹಣವನ್ನ ತಿಂದು ತೇಗಿದ್ದವರ ಭ್ರಷ್ಟೋತ್ಸವ” ಎಂದು‌ ಜನೋತ್ಸವ ಕಾರ್ಯಕ್ರಮಕ್ಕೆ ಲೇವಡಿ ಮಾಡಿದರು.

ಪ್ರಹ್ಲಾದ್ ಜೋಶಿಗೆ ಟಾಂಗ್
”ನಾನು ಯಾರಿಗೂ ಭಯ ಪಡುವ ಪ್ರಶ್ನೆ‌ ಇಲ್ಲ. 2013 ರಲ್ಲಿ ನಾನು ಭಯಪಟ್ಟು ಪ್ರವಾಸ ಮಾಡಿದ್ದೇನಾ? ನಾವು ಸಂವಿಧಾನದಲ್ಲಿ ಗೌರವ ಇಟ್ಟುಕೊಂಡವರು ಸಂವಿಧಾನದ ಹೇಳಿದ ರೀತಿ ನಡೆದುಕೊಳ್ಳುತ್ತೇವೆ. ಬಿಜೆಪಿ ಕಂಡರೂ ಭಯವಿಲ್ಲ, ಯಾರ‌ಕಂಡರು ಭಯವಿಲ್ಲ, ಜನರ ಕಂಡರೆ ಭಯ. ನಾವು ಜನರಿಗೆ ಗೌರವ‌ಕೊಡಬೇಕು ಜನರ‌ ಆಶೀರ್ವಾದದಿಂದ‌‌ ನಾವು ಅಧಿಕಾರಕ್ಕೆ‌ ಬರುವುದು. ಜನ ಏನು‌ ಹೇಳುತ್ತಾರೋ ಅದನ್ನು ‌ಕೇಳುತ್ತೇವೆ.. ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಟಾಂಗ್ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next