Advertisement

SC: ದಿನಾಂಕ ಉಳಿಸಿ ಪೀಠಿಕೆಗೆ ತಿದ್ದುಪಡಿ ಸಾಧ್ಯವೇ?: ಸುಪ್ರೀಂ ಕೋರ್ಟ್‌

12:05 AM Feb 10, 2024 | Team Udayavani |

ಹೊಸದಿಲ್ಲಿ: ಸಂವಿಧಾನ ಪೀಠಿಕೆ ಅಳವಡಿಸಿಕೊಂಡ 1949ರ ನ.26ರ ದಿನಾಂಕ ಉಳಿಸಿಕೊಂಡು ಸಂವಿಧಾನ ಪೀಠಿಕೆಗೆ ತಿದ್ದುಪಡಿ ಮಾಡಲು ಸಾಧ್ಯವೇ? ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರಶ್ನಿಸಿದೆ.

Advertisement

ಪೀಠಿಕೆಯಿಂದ “ಸಮಾಜವಾದಿ” ಮತ್ತು “ಜಾತ್ಯಾತೀತ” ಪದಗಳನ್ನು ತೆಗೆದು ಹಾಕಬೇಕು ಎಂದು ಕೋರಿ ರಾಜ್ಯಸಭಾ ಮಾಜಿ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾ.ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತಾ ಅವರಿದ್ದ ನ್ಯಾಯಪೀಠ ಈ ಪ್ರಶ್ನೆಯನ್ನು ಕೇಳಿದೆ. “ಶೈಕ್ಷಣಿಕ ಉದ್ದೇಶಕ್ಕಾಗಿ ದಿನಾಂಕವನ್ನು ಉಳಿಸಿಕೊಂಡು ಸಂವಿಧಾನ ಪೀಠಿಕೆಗೆ ತಿದ್ದುಪಡಿ ಮಾಡಲು ಸಾಧ್ಯವೇ?. ದಿನಾಂಕವನ್ನು ಹಾಗೆ ಉಳಿಸಿಕೊಂಡು ತಿದ್ದುಪಡಿ ಮಾಡ ಲಾಗಿರುವ ಏಕೈಕ ಪೀಠಿಕೆ ಇದೇ ಇರಬೇಕು’ ಎಂದು ನ್ಯಾಯಪೀಠ ಹೇಳಿತು.

1976ರಲ್ಲಿ 42ನೇ ತಿದ್ದುಪಡಿ ಮೂಲಕ ಸಂವಿಧಾನಕ್ಕೆ ಪೀಠಿಕೆಯನ್ನು ತಿದ್ದುಪಡಿ ಮಾಡಿ, ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳನ್ನು ಸೇರ್ಪಡೆ ಮಾಡಲಾಗಿದೆ. ಆದರೆ, ಈ ತಿದ್ದುಪಡಿಯನ್ನು ಅಳವಡಿ ಸಿಕೊಂಡ ದಿನಾಂಕವನ್ನು 1949ರ ನವೆಂಬರ್‌ 29 ಎಂಬುದಾಗಿಯೇ ಉಳಿಸಿ ಕೊಳ್ಳಲಾಗಿದೆ. ಈ ವಿಷಯವನ್ನು ತಾರ್ಕಿಕ ದೃಷ್ಟಿಕೋನದಿಂದ ಅವಲೋಕಿಸುವುದು ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

“ಇದೇ ನಾವು ಅವಲೋಕಿಸಬೇಕಿರುವ ನಿಜವಾದ ಅಂಶ” ಎಂದು ಹೇಳಿದ ಸುಬ್ರಮಣಿಯನ್‌ ಸ್ವಾಮಿ, “ಸಮಾಜ ವಾದಿ ಮತ್ತು ಜಾತ್ಯತೀತ ಪದಗಳು ಮೂಲ ಸಂವಿಧಾನದಲ್ಲಿ ಇರಲಿಲ್ಲ. ಇದಕ್ಕೆ ಸಂಬಂಧಸಿದ ತಿದ್ದುಪಡಿ ಕಾಯ್ದೆಯನ್ನು ತುರ್ತು ಪರಿಸ್ಥಿತಿ ವೇಳೆ(1975-77) ಅಂಗೀಕರಿಸಲಾಯಿತು’ ಎಂದು ನ್ಯಾಯ ಪೀಠದ ಗಮನಕ್ಕೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next