Advertisement

ಕನ್ನಡ ಬಳಕೆ ಹೆಚ್ಚಾಗಲಿ: ಭಾರತಿ

09:15 PM Oct 29, 2021 | Team Udayavani |

ಧಾರವಾಡ: ಮಾತೃಭಾಷೆಯಲ್ಲಿ ಜ್ಞಾನದ ಗ್ರಹಿಕೆ ಸುಲಭವಾಗುತ್ತದೆ. ಜತೆಗೆ ಪರಿಪೂರ್ಣತೆ ಪಡೆದು ಜಗತ್ತಿನ ಯಾವುದೇ ಜ್ಞಾನ ಸುಲಭವಾಗಿ ಪಡೆಯಬಲ್ಲರು. ಕನ್ನಡಿಗರಾದ ನಾವು ಕನ್ನಡ ಬಳಸುವುದನ್ನು ಹೆಚ್ಚು ಮಾಡುತ್ತ ಹೋಗಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಸಿದರೆ ಅನ್ಯ ಭಾಷಿಗರು ಕನ್ನಡ ಕಲಿಯಲು ಸಾಧ್ಯ ಎಂದು ಪ್ರಾಚಾರ್ಯರಾದ ಭಾರತಿ ಶಾನಭಾಗ ಹೇಳಿದರು.

Advertisement

ನಗರದ ವಿದ್ಯಾಗಿರಿಯ ಜೆಎಸ್‌ ಎಸ್‌ನ ಆರ್‌.ಎಸ್‌. ಹುಕ್ಕೇರಿಕರ ಮಹಾವಿದ್ಯಾಲಯದಲ್ಲಿ ಮಾತಾಡ್‌ ಮಾತಾಡ್‌ ಕನ್ನಡ, ಕನ್ನಡಕ್ಕಾಗಿ ನಾವು ಕನ್ನಡ ರಾಜ್ಯೋತ್ಸವ ಅಭಿಯಾನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವದಾದ್ಯಂತ ಏಕಕಾಲದಲ್ಲಿ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯುತ್ತಿರುವುದು ಉತ್ತಮ ವಿಚಾರ ಎಂದರು.

ಈ ಸಂದರ್ಭದಲ್ಲಿ ಕನ್ನಡ ನಾಡಗೀತೆ, ಬಾರಿಸು ಕನ್ನಡ ಡಿಂಡಿಮವ, ನಿತ್ಯೋತ್ಸವ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು. ಗೀತ ಗಾಯನ ಕಾರ್ಯಕ್ರಮದಲ್ಲಿ ಸೇರಿದ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಕನ್ನಡ ಮಾತನಾಡುವ, ಉಳಿಸುವ, ಬೆಳೆಸುವ ಸಂಕಲ್ಪ ಮಾಡಿದರು.

ಡಾ|ಶಿವಾನಂದ ಟವಳಿ ಸಂಕಲ್ಪದ ಪ್ರತಿಜ್ಞಾ ವಿಧಿ ನಡೆಸಿಕೊಟ್ಟರು. ಸಂಯೋಜಕ ಡಾ| ಜಿ.ಕೃಷ್ಣಮೂರ್ತಿ, ಡಾ|ಗೋವಿಂದರಾಜ ತಳಕೋಡ, ಡಾ|ಸಂಗಯ್ಯ ಎಸ್‌. ಇದ್ದರು.

ಬೇಂದ್ರೆ ಭವನ: ಕನ್ನಡಕ್ಕಾಗಿ ನಾನು ಅಭಿಯಾನ ಅಂಗವಾಗಿ ನಗರದ ಬೇಂದ್ರೆ ಭವನದಲ್ಲಿ ಗುರುವಾರ ಕನ್ನಡ ಗೀತ ಗಾಯನ ಕಾರ್ಯಕ್ರಮ ಜರುಗಿತು. ಡಾ|ಡಿ.ಎಂ. ಹಿರೇಮಠ ಅವರ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಗೀತಾ ಎಲ್‌. ನಾಯ್ಕ, ಅಮೋದಿನಿ ಮಹಾಲೆ, ಪ್ರಸನ್ನ ಸಿಂಧಗಿ ಕನ್ನಡ ಗೀತಗಳ ಗಾಯನ ಪ್ರಸ್ತುತ ಪಡಿಸಿದರು. ಟ್ರಸ್ಟ್‌ ವ್ಯವಸ್ಥಾಪಕರ ಪ್ರಕಾಶ ಬಾಳಿಕಾಯಿ ವಂದಿಸಿದರು.

Advertisement

ಡಯಟ್‌: ಧಾರವಾಡದ ಶಿಕ್ಷಕಕಿಯರ ಸರಕಾರಿ ತರಬೇತಿ ವಿದ್ಯಾಲಯದಲ್ಲಿ ರಾಜ್ಯ ಸರಕಾರದ ಆದೇಶದಂತೆ ಕನ್ನಡ ರಾಜ್ಯೋತ್ಸವ ನಿಮಿತ್ತ ಜರುಗಿದ ಕನ್ನಡ ಗೀತ ಗಾಯನದ ಸಮಾವೇಶದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗೀಯ ಸಹ ನಿರ್ದೇಶಕ ವಾಲ್ಟರ್‌ ಹಿಲೇರಿ ಡಿಮೆಲ್ಲೊ ಪಾಲ್ಗೊಂಡು ಕನ್ನಡಮ್ಮನಿಗೆ ನುಡಿ ನಮನ ಸಲ್ಲಿಸಿದರು.ತರಬೇತಿ ವಿದ್ಯಾಲಯದ ಪ್ರಾಚಾರ್ಯ ಸಂಜೀವ ಬಿಂಗೇರಿ, ಶಿಕ್ಷಕಿಯರ ಸರಕಾರಿ ವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಸೇರಿದಂತೆ ಶಿಕ್ಷಣ ಇಲಾಖೆ ವಿವಿಧ ಹಂತದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next