Advertisement

“ಬಡತನದಲ್ಲಿಯೂ ಸಾಧಿಸಿ ತೋರಿಸಬಹುದು’

09:40 PM Apr 10, 2019 | mahesh |

ನೆಹರೂನಗರ: ಮೌನದಿಂದ ಮನೋಬಲ ವೃದ್ಧಿಯಾಗುತ್ತದೆ. ನಮ್ಮಲ್ಲಿ ಹೇಗೆ ಸುಧಾರಣೆ ತಂದುಕೊಳ್ಳಬೇಕು ಎನ್ನುವತ್ತ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸೋಲು -ಗೆಲುವು, ಲಾಭ -ನಷ್ಟ ಮತ್ತು ಹೊಗಳಿಕೆಗಳಲ್ಲಿ ಸಮಚಿತ್ತರಾಗಿರಬೇಕು ಎಂದು ಬೆಂಗಳೂರಿನ ಬಿ.ಎಸ್‌.ಬಿ.ಎಸ್‌. ಮ್ಯಾನೇಜ್‌ಮೆಂಟ್‌ ಕಾಲೇಜಿನ ಉಪಾಧ್ಯಕ್ಷ ವಿನಯ್‌ ಜಾಧವ್‌ ಹೇಳಿದರು.

Advertisement

ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಿವೇಕ ವಿಕಸನ ಶಿಬಿರದ ಎರಡನೇ ದಿನ “ಸಾಧನೆಯ ಹಿಂದಿನ ಶ್ರಮ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಯಾವುದೇ ಕ್ಷೇತ್ರದಲ್ಲಿ ಆಸಕ್ತಿಯನ್ನು ತೋರಿಸುವುದರ ಮೂಲಕ ವಿದ್ಯಾರ್ಥಿಗಳು ಸಾಧನೆಯನ್ನು ಮಾಡಬೇಕು. ದೇಶಪ್ರೇಮವನ್ನು ಜನರಲ್ಲಿ ಮೂಡಿಸಿ ಜಾಗೃತಿಯನ್ನು ತರುವವರು ನಿಜವಾದ ಸಾಧಕರು. ಸಾಧಿಸಲು ಶ್ರೀಮಂತಿಕೆಯೇ ಇರಬೇಕಾಗಿಲ್ಲ. ಬಡತನದಲ್ಲಿಯೂ ಸಾಧಿಸಿ ತೋರಿಸಬಹುದು. ದುಡಿದು ತಿನ್ನುವವರು ಸಾಧಕರಾಗುತ್ತಾರೆ ಎಂದರು.

ಯಶಸ್ಸಿನ ತತ್ವಗಳು ಕೇವಲ ಒಂದು ಸೂತ್ರವಲ್ಲ. ಅವುಗಳು ನಮಗೆ ಮಹತ್ವ ಪೂರ್ಣ ಪ್ರತಿಫಲಗಳನ್ನು ತಂದು ಕೊಡಬೇಕಾದರೆ ಅವುಗಳನ್ನು ಸಂಪೂರ್ಣ ವಾಗಿ ಅರಿತುಕೊಂಡು ಗುರಿ ಸಾಧನೆಯತ್ತ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಸಾಧನೆಯನ್ನು ಮಾಡ ಬೇಕಾದರೆ ಮನಸ್ಸಿನಲ್ಲಿ ನಿಶ್ಚೆಸಿದ್ದನ್ನು ಕಾರ್ಯರೂಪಕ್ಕೆ ತರುವ ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಹೊಂದಿರ ಬೇಕು. ಆತ್ಮವಿಶ್ವಾಸದ ನೆರವಿಲ್ಲದೆ ಸಾಧನೆಗಳು ಗುರಿಯ ಕಡೆ ಚಲಿಸಲಾರವು. ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಉನ್ನತ ಸ್ಥಾನ ವನ್ನೇರಲು ಸಾಧ್ಯ ಎಂದು ಹೇಳಿದರು.

ಉಪನ್ಯಾಸಕಿ ದೀಕ್ಷಿತಾ ಸ್ವಾಗತಿಸಿ, ನಿಶಿತಾ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next