Advertisement

ಶಿಬಿರಗಳು ಸಂಘದ ಗುರಿ ಸಾಧನೆಗೆ ಸಹಕಾರಿ

04:16 PM Oct 14, 2018 | Team Udayavani |

ಜಗಳೂರು: ಸಂಘದ ಗುರಿ ಮತ್ತು ಉದ್ದೇಶಗಳ ಈಡೇರಿಕೆಗೆ ತರಬೇತಿ ಕಾರ್ಯಕ್ರಮಗಳು ಸಹಾಯಕವಾಗಲಿವೆ
ಎಂದು ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಯು.ಜಿ. ಶಿವಕುಮಾರ್‌ ತಿಳಿಸಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಸಹಕಾರ
ಇಲಾಖೆ, ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್‌ ಹಾಗೂ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಸಹಕಾರ ಹಾಲು ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ
ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ನಡೆದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಇಂತಹ ಕಾರ್ಯಾಗಾರದಲ್ಲಿ ಸಹಕಾರ ಸಂಘದ ಸದಸ್ಯರು ತಪ್ಪದೇ ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳ ಸಲಹೆ ಸೂಚನೆಗಳನ್ನು ಅನುಸರಿಸುವ ಮೂಲಕ ಸಂಘಗಳ ಉದ್ದೇಶ ಸಾಧಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
 
ಶಿವಮೊಗ್ಗ ಡಿ.ಸಿ.ಸಿ.ಬ್ಯಾಂಕ್‌ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಚ್‌.ಕೆ. ಮಹಾಬಲಗಿರಿ ಸಹಕಾರ ಸಂಘಗಳಿಗೆ ಸಂಬಂಧಿತ ಕಾಯ್ದೆಗಳ ತಿದ್ದುಪಡಿ, ಸಹಕಾರ ಅಭಿವೃದ್ಧಿ ಅಧಿಕಾರಿ ಸಿ.ಗೋಪಾಲ್‌ ಸಹಕಾರ ಸಂಘಗಳ ಚುನಾವಣೆ ಪ್ರಕ್ರಿಯೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಆರ್‌. ಬಸವರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕ ಎಸ್‌.ಶಂಕರ್‌ನಾಯಕ್‌, ಪ್ರಭಾರ ಸಿಇಒ ಕೆ.ಎಚ್‌. ಸಂತೋಷ್‌ಕುಮಾರ್‌, ವ್ಯವಸ್ಥಾಪಕ ಕೆ.ಎಂ.ಜಗದೀಶ್‌, ನಿವೃತ್ತ ಉಪನ್ಯಾಸಕ ಸುಭಾಶ್ಚಂದ್ರಬೋಸ್‌, ಹನುಮಂತಾಪುರದ ಬಸವರಾಜ್‌, ಸಹಾಯಕ ವ್ಯವಸ್ಥಾಪ ಹರೀಶ್‌, ವಿಸ್ತರಣಾಧಿ ಕಾರಿ ರಶ್ಮಿ, ಶಾಖಾ ವ್ಯವಸ್ಥಾಪಕ ಪ್ರಮೋದ್‌ಕುಮಾರ್‌, ಡಿ.ಸಿ.ಸಿ. ಬ್ಯಾಂಕ್‌ ಕ್ಷೇತ್ರಾಧಿಕಾರಿಗಳಾದ ಹಾದಿಮನಿ, ಹಾಲಸ್ವಾಮಿ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next