ಮೈಸೂರು: ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವಶ್ರಮಿಕ ವರ್ಗದ ಕುಟುಂಬಗಳಿಗೆ ತಲಾ 10 ಸಾವಿರ ರೂ. ಪ್ಯಾಕೇಜ್‌ಘೋಷಿಸುವಂತೆ ಆಗ್ರಹಿಸಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ಸಮಿತಿ ಕಾರ್ಮಿಕ ವಿಭಾಗದಿಂದ ಪ್ರತಿಭಟನೆ ನಡೆಯಿತು.
ನಗರದ ಕಾಂಗ್ರೆಸ್ ಭವನದ ಎದುರು ಬುಧವಾರ ಆಯೋಜಿಸಿದ್ದ”ಶ್ರಮಿಕ ವರ್ಗ ಉಳಿಸಿ’ ಅಭಿಯಾನದಲ್ಲಿ ಗುದ್ದಲಿ, ಮಟ್ಟಗೋಲು ಹಾಗೂ ಕಾರ್ಮಿಕರಿಗೆ ಸಂಬಂಧಿಸಿದ ಭಿತ್ತಿಪತ್ರ ಪ್ರದರ್ಶಿಸಿ, 10 ಸಾವಿರರೂ. ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದರು.
ಕೊರೊನಾ ಹಿನ್ನೆಲೆ ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರುಜೀವನ ನಿರ್ವಹಣೆ ಮಾಡಲಾಗದ ಸ್ಥಿತಿಯಲ್ಲಿ ಇದ್ದಾರೆ. ಇಂತಹಸಂದರ್ಭ ದಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ 2-3 ಸಾವಿರ ರೂ.ಯಾವು ದಕ್ಕೂ ಸಾಲದು. ಹೀಗಾಗಿ ತಕ್ಷಣ ಹತ್ತು ಸಾವಿರ ರೂ. ನೀಡಬೇಕೆಂದರು. ಶ್ರಮಿಕ ವರ್ಗ ಕೋವಿಡ್‌ಗೆ ತುತ್ತಾಗಿ ಮರಣ ಹೊಂದಿದಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು.
ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜವಾಬ್ದಾರಿ ತೆಗೆದುಕೊಳ್ಳಬೇಕು. ಜತೆಗೆ ಕಾರ್ಮಿಕ ಕಲ್ಯಾಣಮಂಡಳಿ ಯಲ್ಲಿರುವ 7000 ಕೋಟಿ ರೂ.ಗಳನ್ನು ಬಳಸಿಕೊಂಡುಶ್ರಮಿಕ ವರ್ಗಕ್ಕೆ ನೆರವಾಗಬೇಕೆಂದರು.ಶ್ರಮಿಕ ವರ್ಗ ಉಳಿಸಿ ಅಭಿಯಾನಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಚಾಲನೆ ನೀಡಿದರು.
ಮೈಸೂರು ಗ್ರಾಮಾಂತರಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಅಧ್ಯಕ್ಷ ಎಚ್.ಕೆ.ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಅಭಿಯಾನದಲ್ಲಿ ಕಾರ್ಮಿಕ ವಿಭಾಗದ ರಾಜ್ಯ ಸಮಿತಿ ಕಾರ್ಯದರ್ಶಿಮಾವಿನಹಳ್ಳಿ ರವಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಎಡತಲೆಮಂಜುನಾಥ್, ಶಿವಪ್ರಸಾದ್, ಉತ್ತನಹಳ್ಳಿ ಶಿವಣ್ಣ, ಕಡಕೊಳ ಭರತ್,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಡೊನಾಲ್ಡ್, ದಡದಳ್ಳಿ ಮಹದೇವ್,ಕವಿತಾ ಕಾಳೆ, ಸಕಳ್ಳಿ ಬಸವರಾಜ್, ಎಂ.ಪಿ ಹೇಮಂತ್, ಕೆ.ಮಹೇಶ್,ಪ್ರಭು, ಸುನಿಲ್‌ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.