Advertisement

ಕೇಂದ್ರದ ಸಾಧನೆ ತಿಳಿಸಲು ಅಭಿಯಾನ

05:30 AM Jun 12, 2020 | Lakshmi GovindaRaj |

ಮಂಡ್ಯ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಮನೆ ಮನೆ ಅಭಿಯಾನ ಕಾರ್ಯಕ್ರಮಕ್ಕೆ ಬಿಜೆಪಿ ಮಾಜಿ  ಜಿಲ್ಲಾಧ್ಯಕ್ಷ ಎಚ್‌.ಪಿ. ಮಹೇಶ್‌ ಗುರುವಾರ ಚಾಲನೆ ನೀಡಿದರು. ನಂತರ ಮಾತನಾಡಿದರು.

Advertisement

ಕಳೆದ 6 ವರ್ಷಗಳಲ್ಲಿ ಮೋದಿ ಜಾರಿಗೊಳಿಸಿದ ಯೋಜನೆಗಳನ್ನು ಇಂದಿನ ಯಾವ ಸರ್ಕಾರವೂ ಜಾರಿಗೊಳಿಸಿರಲಿಲ್ಲ. ಹೀಗಾಗಿ ಮೋದಿ ಸರ್ಕಾರ  ಇತರೆ ಸರ್ಕಾರಗಳಿಗಿಂತ ಭಿನ್ನವಾಗಿದೆ. ಕೇಂದ್ರದ ಯೋಜನೆಗಳಲ್ಲಿ ಯಾವುದೇ ತಾರತಮ್ಯ, ರಾಗ-ದ್ವೇಷಗಳಿಲ್ಲದೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಗಳು ತಲುಪಿವೆ. ಮೋದಿಯವರು ನಾನು ಪ್ರಧಾನಿಯಲ್ಲ.

ನಿಮ್ಮೆಲ್ಲರ ಪ್ರಧಾನ ಸೇವಕ  ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತ ವೈಖರಿ ಜಗತ್ತಿಗೇ ಮಾದರಿಯಾಗಿದೆ ಎಂದು ಅವರು ತಿಳಿಸಿದರು. ಜಮ್ಮು ಕಾಶ್ಮೀರದ ಆರ್ಟಿಕಲ್‌ 370ರ ರದಟಛಿತಿ, ಪೌರತ್ವ ತಿದ್ದುಪಡಿ ವಿಧೇಯಕ ಅಂಗೀಕಾರ, ರಾಮಮಂದಿರ ನಿರ್ಮಾಣಕ್ಕೆ ಚಾಲನೆ, ಕೊರೊನಾ  ಸಂಕಷ್ಟದಲ್ಲಿ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಘೋಷಣೆ, ಜನಧನ್‌ ಖಾತೆ ಮೂಲಕ 500 ಜಮಾ ಮಾಡಿರುವುದು ಕೇಂದ್ರದ ಜನಪರ ಕಾಳಜಿಗೆ ಸಾಕ್ಷಿಯಾಗಿದೆ.

ಕಿಸಾನ್‌ ಸಮ್ಮಾನ್‌  ಯೋಜನೆ ರೂಪಿಸುವ ಮೂಲಕ ರೈತರ ಖಾತೆಗೆ ನೇರವಾಗಿ ಹಣ ಬಿಡುಗಡೆ ಮಾಡುವುದು, ಬಡವರಿಗೆ ಉಜ್ವಲ ಯೋಜನೆ ಸೇರಿ ದಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ವಿವರಿಸಿದರು. ಬಿಜೆಪಿ ನಗರಾಧ್ಯಕ್ಷ ವಿವೇಕ್‌,  ಮಹಿಳಾ ಮೋರ್ಚಾ ಅಧ್ಯಕ್ಷೆ ರಶ್ಮಿ, ನಗರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅರು ಣ್‌ಕುಮಾರ್‌, ಮುಖಂಡರಾದ ಶಂಕರ್‌, ಸಿ.ಟಿ. ಮಂಜುನಾಥ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next