Advertisement

ಕ್ಯಾಮಿಲ್ಲಾ ಇಂಗ್ಲೆಂಡ್ ರಾಣಿ…ಆದರೆ ಅಧಿಕಾರ ಚಲಾಯಿಸುವಂತಿಲ್ಲ; ಏನಿದು Queen Consort?

03:33 PM Sep 09, 2022 | Team Udayavani |

ಲಂಡನ್(ಯುಕೆ): ಸುಮಾರು ಏಳು ದಶಕಗಳ ನಂತರ ಯುನೈಟೆಡ್ ಕಿಂಗ್ ಡಮ್ ಗೆ ನೂತನ ರಾಣಿಯ ಆಯ್ಕೆಯಾಗಲಿದೆ. ಹೌದು ಚಾರ್ಲ್ಸ್ ಪತ್ನಿ ಕ್ಯಾಮಿಲ್ಲಾ ಇನ್ಮುಂದೆ ಡಚೆಸ್ಸ್ ಆಫ್ ಕಾರ್ನ್ ವಾಲ್ ಎಂದು ಕರೆಯಲ್ಪಡುತ್ತಾರೆ. ಕ್ವೀನ್ ಕಾನ್ ಸಾರ್ಟ್ ಎಂಬ ಬಿರುದು ಲಭಿಸಿದರೂ ಕೂಡಾ ಕ್ಯಾಮಿಲ್ಲಾಗೆ ಯಾವುದೇ ಸಾರ್ವಭೌಮ ಅಧಿಕಾರ ಚಲಾಯಿಸುವ ಹಕ್ಕು ಹೊಂದಿರುವುದಿಲ್ಲ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ನನ್ನ ಅರ್ಧ ಶತಕಗಳನ್ನೂ ವೈಫಲ್ಯ ಎನ್ನುತ್ತಿದ್ದರು..: ಶತಕದ ಹಿಂದಿನ ಕತೆ ಬಿಚ್ಚಿಟ್ಟ ವಿರಾಟ್

ಕ್ಯಾಮಿಲ್ಲಾಗೆ ರಾಣಿ ಬಿರುದು ನೀಡಬೇಕೆ ಬೇಡವೇ ಎಂಬ ಬಗ್ಗೆ ಇಂಗ್ಲೆಂಡ್ ನಲ್ಲಿ ದೀರ್ಘಕಾಲ ಚರ್ಚೆ ನಡೆದಿದ್ದು, ಕೊನೆಗೆ ರಾಣಿ ಎಲಿಜಬೆತ್ II ಮಧ್ಯಪ್ರವೇಶಿಸಿ, ಕ್ವೀನ್ ಕಾನ್ ಸಾರ್ಟ್ ಬಿರುದು ನೀಡುವಂತೆ ಸಲಹೆ ನೀಡುವ ಮೂಲಕ ವಿವಾದ ಬಗೆಹರಿದಿತ್ತು.

ರಾಣಿ ಎಲಿಜಬೆತ್ ಮರಣದ ನಂತರ ಪ್ರಿನ್ಸ್ ಚಾರ್ಲ್ಸ್ ಸಾಂಪ್ರದಾಯಿಕವಾಗಿ ರಾಜನ ಪಟ್ಟಕ್ಕೇರುತ್ತಾರೆ. ಆದರೆ ಚಾರ್ಲ್ಸ್ ರಾಜನಾದ ಮೇಲೆ ಪತ್ನಿ ಕ್ಯಾಮಿಲ್ಲಾ ರಾಣಿಯಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಹಲವು ವರ್ಷಗಳ ಕಾಲ ಚರ್ಚೆಯಲ್ಲಿತ್ತು.

ಇದು ತುಂಬಾ ಸೂಕ್ಷ್ಮ ವಿಚಾರವಾಗಿ ಚರ್ಚೆಯಾಗಲು ಕಾರಣ, ಕ್ಯಾಮಿಲ್ಲಾ ಚಾರ್ಲ್ಸ್ ಅವರ ಎರಡನೇ ಪತ್ನಿಯಾಗಿದ್ದು. 1997ರಲ್ಲಿ ಚಾರ್ಲ್ಸ್ ಮೊದಲ ಪತ್ನಿ ಪ್ರಿನ್ಸೆಸ್ ಡಯಾನಾ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಬಳಿಕ ಚಾರ್ಲ್ಸ್ ಕ್ಯಾಮಿಲ್ಲಾ ಅವರನ್ನು ವಿವಾಹವಾಗಿದ್ದರು.

Advertisement

2010ರಲ್ಲಿ ಎನ್ ಬಿಸಿ ಸಂದರ್ಶನದಲ್ಲಿ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಒಂದು ವೇಳೆ ನೀವು ಸಂಪ್ರದಾಯದಂತೆ ಇಂಗ್ಲೆಂಡ್ ರಾಜನಾದರೆ, ಆಗ ಕ್ಯಾಮಿಲ್ಲಾ ಇಂಗ್ಲೆಂಡ್ ರಾಣಿಯಾಗಲಿದ್ದಾರಾ ಎಂಬ ಪ್ರಶ್ನೆಗೆ ಚಾರ್ಲ್ಸ್ ಅದು ಒಳ್ಳೆಯದೇ ಎಂದು ಹೇಳಿ ನುಣುಚಿಕೊಂಡಿದ್ದರು.

ಕೊನೆಗೆ ರಾಣಿ ಎಲಿಜಬೆತ್ II ಅವರು, ತಮ್ಮ ಮಗ ಚಾರ್ಲ್ಸ್ ಇಂಗ್ಲೆಂಡ್ ರಾಜನಾದ ನಂತರ ಕ್ಯಾಮಿಲ್ಲಾ ಅವರನ್ನು ಕ್ವೀನ್ ಕಾನ್ ಸಾರ್ಟ್ ಎಂದು ಘೋಷಿಸಬೇಕೆಂದು ಇಚ್ಛೆ ವ್ಯಕ್ತಪಡಿಸಿರುವ ಮೂಲಕ ಗೊಂದಲಕ್ಕೆ ತೆರೆ ಬಿದ್ದಿತ್ತು ಎಂದು ವರದಿ ತಿಳಿಸಿದೆ.

ಕ್ವೀನ್ ಕಾನ್ಸಾರ್ಟ್ ಮತ್ತು ಕ್ವೀನ್ ನಡುವಿನ ವ್ಯತ್ಯಾಸವೇನು?

ಇಂಗ್ಲೆಂಡ್ ಸಂಪ್ರದಾಯದಲ್ಲಿ ರಾಜ ಮತ್ತು ರಾಣಿಯಾಗಿ ಆಡಳಿತ ನಡೆಸುವವರಿಗೆ ಪೂರ್ಣ ಅಧಿಕಾರ ಇರುತ್ತದೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಯಾವುದೆಂದರೆ, ಕ್ವೀನ್ ಕಾನ್ಸಾರ್ಟ್ ಅಂದರೆ ರಾಜನ ಸಂಗಾತಿ ಅಥವಾ ಪತ್ನಿ ಎಂದರ್ಥ. ಕಾನ್ಸಾರ್ಟ್ ಯಾವುದೇ ಆಡಳಿತಾತ್ಮಕ ಪಾತ್ರ ಹೊಂದಿಲ್ಲ. ಇದೊಂದು ರಾಜನಿಗೆ ಬೆಂಬಲ ನೀಡುವ ಸಾಂಕೇತಿಕ ಬಿರುದು. ಇಂಗ್ಲೆಂಡ್ ರಾಣಿ ಎಲಿಜಬೆತ್ II ಅವರು ಹೊಂದಿರುವ ಅಧಿಕಾರ ಕ್ವೀನ್ ಕಾನ್ಸಾರ್ಟ್ ಗೆ ಇರುವುದಿಲ್ಲ. ಅವರು ಕೇವಲ ರಾಜನ ಸಂಗಾತಿ ಆಗಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next