Advertisement

ಇಂಗ್ಲಿಷ್‌ ಕೌಶಲ್ಯಾಭಿವೃದ್ಧಿಗೆ ಕೈಜೋಡಿಸಿದ ಕೇಂಬ್ರಿಜ್‌ ವಿವಿ-ಎನ್‌ಎಸ್‌ಡಿಸಿ

10:08 PM Feb 06, 2023 | Team Udayavani |

ನವದೆಹಲಿ: ಇಂಗ್ಲೆಂಡ್‌ನ‌ ಕೇಂಬ್ರಿಜ್‌ ವಿವಿ ಮಾಧ್ಯಮ ಮತ್ತು ಪರಿಶೀಲನಾ ಸಂಸ್ಥೆ (ಸಿಯುಪಿ ಆ್ಯಂಡ್‌ ಎ) ಭಾರತದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದೊಂದಿಗೆ (ಎನ್‌ಎಸ್‌ಡಿಸಿ) ಒಪ್ಪಂದ ಮಾಡಿಕೊಂಡಿದೆ. ವಿದೇಶಗಳಿಗೆ ಪ್ರಯಾಣಿಸಿ ಅಲ್ಲಿ ಕೆಲಸ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳ ಇಂಗ್ಲಿಷ್‌ ಕೌಶಲ್ಯವನ್ನು ವೃದ್ಧಿಸುವುದೇ ಇದರ ಉದ್ದೇಶ. ಈ ಕುರಿತ ತಿಳಿವಳಿಕೆ (ಎಂಒಯು) ಪತ್ರಕ್ಕೆ ಎನ್‌ಎಸ್‌ಡಿಸಿ ಸಿಇಒ ವೇದಮಣಿ ತಿವಾರಿ ಮತ್ತು ಸಿಯುಪಿಆ್ಯಂಡ್‌ಎ ದಕ್ಷಿಣ ಏಷ್ಯಾ ಎಂಡಿ ಅರುಣ್‌ ರಾಜಾಮಣಿ ಸಹಿಹಾಕಿದ್ದಾರೆ.

Advertisement

ಕಡಿಮೆ ಬೆಲೆಯಲ್ಲಿ, ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ಜಾಗತಿಕ ಮಾರುಕಟ್ಟೆಯಲ್ಲಿ ಕುಶಲ ಭಾರತೀಯರು ಇರಬೇಕು ತಿವಾರಿ ಹೇಳಿದ್ದಾರೆ. ಈ ಒಪ್ಪಂದದ ಪ್ರಕಾರ ಕೇಂಬ್ರಿಜ್‌ ವಿವಿಯು ಕಲಿಕಾ ಕ್ರಮಗಳು, ಮುದ್ರಿತ ಮತ್ತು ಡಿಜಿಟಲ್‌ ಮಾಹಿತಿಗಳನ್ನು ಒದಗಿಸಲಿದೆ. ಶಿಕ್ಷಕರಿಗೆ ತರಬೇತಿ ನೀಡಲಿದೆ. ಐಇಎಲ್‌ಟಿಎಸ್‌ ಮತ್ತು ಒಇಟಿಗಳಂತಹ ಪರೀಕ್ಷೆಗಳನ್ನು ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next