ಲಂಡನ್: ಕೋವಿಡ್ ಸೋಂಕು ನಿಗ್ರಹಿಸಲು ನೆರವಾಗುವಂತಹ ಜನರು ಸಾವನ್ನಪ್ಪಿದ್ದಾರೆ. ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಸುಮಾರು 200ಕ್ಕೂ ಅಧಿಕ ಕಂಪೆನಿಗಳು ನಿರತವಾಗಿದ್ದು, ಈ ಪೈಕಿ 10ಕ್ಕೂ ಅಧಿಕ ಲಸಿಕೆಗಳು ಕೊನೆಯ ಹಂತದ ಪ್ರಯೋಗದಲ್ಲಿವೆ.
ಈ ನಡುವೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಆಶಾದಾಯಕ ಸುದ್ದಿಯೊಂದು ಹೊರ ಬಿದ್ದಿದ್ದು, ಎಲ್ಲ ಬಗೆಯ ಕೋವಿಡ್ ಸೋಂಕನ್ನು ನಿಗ್ರಹಿಸುವ ಲಸಿಕೆ ಸಂಶೋಧನೆಯಲ್ಲಿ ನಾವು ನಿರತರಾಗಿದ್ದೇವೆ ಎಂದು ಹೇಳಿಕೊಂಡಿದೆ.
ಪ್ರಾಣಿಗಳು, ಮಾನವರ ಮೂಲಕ ಹರಡುವ, ರೂಪಾಂತರಗೊಳ್ಳುವ ಎಲ್ಲ ಬಗೆಯ ಕೊರೊನಾ ಸೋಂಕುಗಳನ್ನು ನಿಷ್ಕ್ರಿಯ ಮಾಡುವ ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದು, ಸದ್ಯದಲ್ಲಿಯೇ ಪರೀಕ್ಷೆಗಳನ್ನು ನಡೆಸುವುದಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಖಚಿತಪಡಿಸಿದೆ.
ಪ್ರಾಯೋಗಿಕ ಪರೀಕ್ಷೆ ಹಂತದಲ್ಲಿರುವ ಈ ಲಸಿಕೆಯನ್ನು DIOS & CoVax2 ಎಂದು ಹೆಸರಿಸಲಾಗಿದ್ದು, ಬಾವಲಿಗಳಿಂದ ಮನುಷ್ಯರಿಗೆ ಹಬ್ಬಿದ ಸೋಂಕು ಸೇರಿ ಎಲ್ಲ ಬಗೆಯ ಕೋವಿಡ್ ಮತ್ತು ಅದರ ರೂಪಾಂತರಿಗಳಿಗೆ ಈ ಲಸಿಕೆ ಮದ್ದಾಗಲಿದೆ ಎಂದಿದ್ದಾರೆ.
ಇನ್ನು ಎಲ್ಲ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ ಈ ಲಸಿಕೆಯನ್ನು ಸೂಜಿಯ ಸಹಾಯವಿಲ್ಲದೇ, ಚರ್ಮದ ಮೂಲಕವೇ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ. ಸಾರ್ಸ್- ಸಿಒವಿ-2 (ಕೋವಿಡ್19) ಇದರ ಮೂಲಗಳೇ ಎನ್ನಬಹುದಾದ ಸಾರ್ಸ್, ಎಂಇಆರ್ ಎಸ್ ಹಾಗೂ ಪ್ರಾಣಿಗಳಲ್ಲಿ ಕಂಡುಬರುವ ಆ ಮೂಲಕ ಮನುಷ್ಯರ ದೇಹವನ್ನು ಪ್ರವೇಶಿಸುವ ಇತರ ಕೋವಿಡ್ ಸೋಂಕಿನ 3ಆಯಾಮಗಳ ಮಾದರಿಯನ್ನು ರಚಿಸುವುದು ನಮ್ಮ ಗುರಿಯಾಗಿತ್ತು ಎಂದು ಕೇಂಬ್ರಿಡ್ಜ್ ವಿವಿ ಪ್ರಾಧ್ಯಾಪಕ ಹಾಗೂ ಡಿಯೋಸಿನ್ ವ್ಯಾಕ ಕಂಪನಿಯ ಸಂಸ್ಥಾಪಕ ಜೋನ್ನಾಥನ್ ಹೀನೇ ಹೇಳಿದ್ದಾರೆ. ಈ ಲಸಿಕೆ ಸೋಂಕಿಗೆ ತಕ್ಕ ಪ್ರತಿರೋಧ ಶಕ್ತಿಯನ್ನು ಉಂಟು ಮಾಡಲಿದೆ.
ಇದರಿಂದ ಕೋವಿಡ್ ಮಾತ್ರವಲ್ಲ, ಉಳಿದೆಲ್ಲ ಕೋವಿಡ್ ಕಾಯಿಲೆಗಳಿಗೆ ಲಸಿಕೆ ಪರಿಣಾಮಕಾರಿಯಾಗಲಿದೆ ಎಂದು ಅವರು ತಿಳಿಸಿದ್ದು, ಈ ವರ್ಷದ ಅಂತ್ಯಕ್ಕೆ ಮಾನವರ ಮೇಲಿನ ಪ್ರಯೋಗಕ್ಕೆ ಲಸಿಕೆ ಸಜ್ಜಾಗಬಹುದು ಎಂದು ನಿರೀಕ್ಷಿಸಲಾಗಿದೆ.
ನೈಜೀರಿಯಾ:ಶೈಕ್ಷಣಿಕ ವರ್ಷಪುನರಾರಂಭ
ಅಬುಜಾ: ನೈಜೀರಿಯಾದಲ್ಲಿ ಸೋಂಕು ಪ್ರಕರಣಗಳ ಪ್ರಮಾಣ ಕಡಿಮೆಯಾಗಿದ್ದು, ಶೈಕ್ಷಣಿಕ ವರ್ಷವನ್ನು ಪುನರಾರಂಭಗೊಳಿಸಲು ಮುಂದಾಗಿದೆ. ಹಿಂಜರಿತಕ್ಕೆ ಒಳಗಾಗಿರುವ ದೇಶದ ಆರ್ಥಿಕತೆಯನ್ನು ಪುನರ್ ಶ್ಚೇತನಗೊಳಿಸಲು ಈ ನಿರ್ಧಾರ ಕೈಗೊಂಡಿದ್ದು, ಇದರ ಭಾಗವಾಗಿ ಮುಂದಿನ ತಿಂಗಳಿನಿಂದ ನೈಜೀರಿಯಾದ ವಾಣಿಜ್ಯ ಕೇಂದ್ರವಾದ ಲಾಗೋಸ್‌ನಲ್ಲಿ ಶಾಲೆಗಳು ಮತ್ತೆ ತೆರೆಯಲಿವೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಕೋವಿಡ್ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿದ್ದ ಲಾಗೋಸ್‌ನಿಂದ ಸೆಪ್ಟೆಂಬರ್ 14 ರಿಂದ ಕಾಲೇಜುಗಳನ್ನು ಮತ್ತು ಸೆಪ್ಟೆಂಬರ್ 21ರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪುನ: ತೆರೆಯಲು ನಿರ್ಧರಿಸಲಾಗಿದೆ.