Advertisement

ಕರೆದಿದೆ, ಕೇಂದ್ರೀಯ ವಿದ್ಯಾಲಯ

06:40 AM Dec 26, 2017 | Team Udayavani |

ಖಾಸಗಿಗಿಂತ ಸರ್ಕಾರಿ ನೌಕರಿ ಸಿಕ್ಕರೆ ಸಾಕು. ಅದೂ ಕೇಂದ್ರ ಸರ್ಕಾರದ ನೌಕರಿ ಸಿಕ್ಕರೆ ಎಲ್ಲಿಗೆ ಬೇಕಾದರೂ ಹೋಗಲು ನಾನು ಸಿದ್ಧ ಎಂದು ಹೇಳುವ ಅನೇಕರಿ¨ªಾರೆ. ಇಂಥವರಿಗಾಗಿ ಕೇಂದ್ರೀಯ ವಿದ್ಯಾಲಯವು ಅದೃಷ್ಟದ ಬಾಗಿಲು ತೆರೆದಿದೆ… 

Advertisement

ಶೈಕ್ಷಣಿಕವಾಗಿ ರಾಜ್ಯವನ್ನೂ ಮೀರಿ ದೇಶದ ಯಾವುದೇ ಭಾಗದÇÉಾದರೂ ಜೀವನ ರೂಪಿಸಿಕೊಳ್ಳಲು ಧೈರ್ಯ ಮಾಡುವವರು ತೀರಾ ವಿರಳ. ನಮ್ಮ ನಗರ, ಜಿÇÉೆ ರಾಜ್ಯದಲ್ಲಿಯೇ ಯಾವುದಾದರೊಂದು ಕೆಲಸ ಸಿಕ್ಕಿದರೆ ಸಾಕು ಎಂದು ಹಂಬಲಿಸುವುದು ಸಾಮಾನ್ಯ. ಆದರೆ, ಅವನು ಹೈದರಾಬಾದಿನಲ್ಲಿ¨ªಾನೆ. ದೆಹಲಿಯಲ್ಲಿ ದೊಡ್ಡ ಹುದ್ದೆ, ಆರು ವರ್ಷದ ಬಳಿಕ ಚೆನ್ನೈನಿಂದ ಬಂದ ಹೀಗೆ ಕಣ್ಣರಳಿಸಿ ಕೆಲವರನ್ನು ಶ್ಲಾ ಸುವುದುಂಟು. “ನಾನು ನಿನ್ನ ಮಾತು ಕೇಳಿದ್ದರೆ ದೆಹಲಿಯಲ್ಲಿರಬಹುದಿತ್ತು’ ಎಂದು ಹತಾಶೆ ವ್ಯಕ್ತಪಡಿಸುವುದುಂಟು. ಅವಕಾಶ ಸಿಕ್ಕಾಗ ಯತ್ನಿಸದೇ ಪರಿತಪಿಸಿದ್ದೂ ಇದೆ. ಅಂಥ ಅವಕಾಶಕ್ಕೆ ಕಾಯುವವರಿಗಾಗಿ ಕೇಂದ್ರೀಯ ವಿದ್ಯಾಲಯವು ಅಪ್ಪರ್‌, ಲೋಯರ್‌ ಕ್ಲರ್ಕ್‌ ಸೇರಿದಂತೆ ಒಟ್ಟು 1017 ಹುದ್ದೆಗಳಿಗೆ ಅನುವು ಮಾಡಿಕೊಟ್ಟಿದೆ.

ಖಾಸಗಿಗಿಂತ ಸರ್ಕಾರಿ ನೌಕರಿ ಸಿಕ್ಕರೆ ಸಾಕು. ಅದೂ ಕೇಂದ್ರ ಸರ್ಕಾರದ ನೌಕರಿ ಸಿಕ್ಕರೆ ಎಲ್ಲಿಗೆ ಬೇಕಾದರೂ ಹೋಗಲು ನಾನು ಸಿದ್ಧ ಎಂದು ಹೇಳುವ ಅನೇಕರಿ¨ªಾರೆ. ಅದಕ್ಕಾಗಿ ಹಲವು ಸಿದ್ಧತೆಗಳು. ಸಂದರ್ಶನ, ಪರೀûಾ ತಯಾರಿ ಮಾಡಿಕೊಳ್ಳುವುದೂ ಉಂಟು. ರಾಜ್ಯ, ಅಂತಾರಾಜ್ಯಗಳಲ್ಲಿ ಸಿಕ್ಕ ಹುದ್ದೆಗಳನ್ನು ಬಿಡದೆ, ಅಲ್ಲಿನ ಭಾಷೆಯನ್ನು ಕಲಿತುಕೊಂಡು ಕೆಲಸ ಮಾಡಿ ತೋರಿಸಿದವರೂ ನಮ್ಮ ಕಣ್ಣಮುಂದಿ¨ªಾರೆ.

ಇದೇ ರೀತಿಯಲ್ಲಿ ಅನೇಕ ಅಡೆತಡೆಗಳನ್ನು ದಾಟಿ ಹೊಸ ಅನುಭವವನ್ನು ಪಡೆದು ಎಲ್ಲಿ ಬೇಕಾದರೂ ಕೆಲಸ ಮಾಡುತ್ತೇನೆ ಎನ್ನುವವರಿಗೆ ಕೇಂದ್ರ ಸರ್ಕಾರ ಕೇಂದ್ರೀಯ ವಿದ್ಯಾಲಯ ಸಂಘಟನೆಯು ಅಪ್ಪರ್‌, ಲೋಯರ್‌ ಡಿವಿಜನ್‌ ಕ್ಲರ್ಕ್‌, ಸ್ಟೆನೋಗ್ರಾಫ‌ರ್‌, ಲೈಬ್ರೇರಿಯನ್‌ ಸೇರಿ ಒಟ್ಟು 1017 ಹು¨ªೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಹತೆ- ವೇತನ ಶ್ರೇಣಿ
ಉಪ ಆಯುಕ್ತ ಹುದ್ದೆಗೆ ಸ್ನಾತಕೋತ್ತರ ಪದವಿ, ಬಿ ಎಡ್‌, ಜೊತೆಗೆ ಐದು ವರ್ಷಗಳ ಕಾಲ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದ ಅನುಭವ, ಹಿಂದಿ, ಆಂಗ್ಲ ಭಾಷಾಜ್ಞಾನ ಅಗತ್ಯ. (ವಯೋಮಿತಿ 50 ವರ್ಷದೊಳಗೆ, ವೇತನ- 78,800 ರೂ.- 2,90,200 ರೂ.)

Advertisement

 - ಸಹಾಯಕ ಆಯುಕ್ತರಿಗೆ ಮಾಸ್ಟರ್‌ ಡಿಗ್ರಿ, ಬಿಎಡ್‌, ಪ್ರಾಂಶುಪಾಲ ಹುದ್ದೆ ನಿಭಾಯಿಸಿದ ಅನುಭವ ಮತ್ತು ಗಣಕಯಂತ್ರದ ಜ್ಞಾನ ಅಗತ್ಯ (ವಯೋಮಿತಿ 50 ವರ್ಷದೊಳಗೆ, ವೇತನ- 78,800- 2,90,200 ರೂ.). 

– ಆಡಳಿತಾತ್ಮಕ ಹುದ್ದೆಗೆ ಗ್ರಾಜುಯೇಟ್‌ ಪದವಿ ಜೊತೆ ಆಡಳಿತಾತ್ಮಕವಾಗಿ ಸೂಪರ್‌ವೈಸರಿ ಹುದ್ದೆ ನಿರ್ವಹಿಸಿದ ಮೂರು ವರ್ಷದ ಅನುಭವ, ಗಣಕ ಜ್ಞಾನ ಅವಶ್ಯ (ವಯೋಮಿತಿ 45 ವರ್ಷದೊಳಗೆ, ವೇತನ- 56,100 ರೂ – 1,77,500).

– ಫೈನಾ®Õ… ಆಫೀಸರ್‌ ಹುದ್ದೆಗೆ ಬಿ.ಕಾಂ. ಪದವಿಯೊಂದಿಗೆ ನಾಲ್ಕು ವರ್ಷದ ಕರ್ತವ್ಯ ಅನುಭವ ಅಥವಾ ಎಂ.ಕಾಂ.ನೊಂದಿಗೆ ಮೂರು ವರ್ಷಗಳ ಕರ್ತವ್ಯ ನಿರ್ವಹಿಸಿದ ಅನುಭವ ಮುಖ್ಯ (ವಯೋಮಿತಿ 35 ವರ್ಷದೊಳಗೆ, ವೇತನ- 44,900- 1,42,400 ರೂ.).

– ಅಸಿಸ್ಟೆಂಟ್‌ ಎಂಜಿನಿಯರ್‌ ಹುದ್ದೆಗೆ ಅಂಗೀಕೃತ ವಿವಿಯಲ್ಲಿ ಎಲೆಕ್ಟ್ರಿಕಲ… ಎಂಜಿನಿಯರ್‌ ಮತ್ತು ಎರಡು ವರ್ಷದ ಅನುಭವ ಬೇಕು (ವಯೋಮಿತಿ 35 ವರ್ಷದೊಳಗೆ, ವೇತನ- 44,900- 1,42,400 ರೂ.).

– ಸಹಾಯಕ ಹುದ್ದೆಗೆ ಗ್ರಾಜುಯೇಟ್‌ ಪದವಿಯೊಂದಿಗೆ ಮೂರು ವರ್ಷಗಳ ಕರ್ತವ್ಯದ ಅನುಭವ ಮತ್ತು ಕಂಪ್ಯೂಟರ್‌ ಜ್ಞಾನ ಅಗತ್ಯ (ವಯೋಮಿತಿ 28 ವರ್ಷದೊಳಗೆ, ವೇತನ- 35,400- 1,12,400ರೂ.).

– ಹಿಂದಿ ಅನುವಾದಕರಿಗೆ ಮಾಸ್ಟರ್‌ ಡಿಗ್ರಿ ಜೊತೆಗೆ ಹಿಂದಿ, ಆಂಗ್ಲಭಾಷಾ ಪ್ರಾವೀಣ್ಯತೆ ಮುಖ್ಯ (ವಯೋಮಿತಿ 30 ವರ್ಷದೊಳಗೆ, ವೇತನ- 35,400- 1,12,400 ರೂ.)

– ಹಿರಿಯ ದರ್ಜೆ ಗುಮಾಸ್ತ ಹುದ್ದೆಗೆ ಗ್ರಾಜುಯೇಟ್‌ ಪದವಿಯೊಂದಿಗೆ ಮೂರು ವರ್ಷಗಳ ಕರ್ತವ್ಯಾನುಭವ, ಗಣಕ ಜ್ಞಾನ ಅಗತ್ಯ (ವಯೋಮಿತಿ 30 ವರ್ಷದೊಳಗೆ, ವೇತನ- 25,500 – 81,100ರೂ.)

– ಸ್ಟೆನೋಗ್ರಾಫ‌ರ್‌ ಹುದ್ದೆಗೆ ದ್ವಿತೀಯ ಪಿಯುಸಿ, ಹಿಂದಿ, ಆಂಗ್ಲ ಭಾಷಾ ಟೈಪಿಂಗ್‌ ಕೌಶಲ ಮುಖ್ಯ (ವಯೋಮಿತಿ 27 ವರ್ಷದೊಳಗೆ, ವೇತನ- 25,500- 81,100 ರೂ.).

– ಕಿರಿಯ ಸಹಾಯಕ ಹುದ್ದೆಗೆ ದ್ವಿತೀಯ ಪಿಯು ಜೊತೆಗೆ ಟೈಪಿಂಗ್‌, ಹಿಂದಿ ಭಾಷಾಜ್ಞಾನ ಅಗತ್ಯ (ವಯೋಮಿತಿ 27 ವರ್ಷದೊಳಗೆ, ವೇತನ-19,900-63,200 ರೂ.)

– ಗ್ರಂಥಪಾಲಕ ಹುದ್ದೆಗೆ ಪದವಿಯೊಂದಿಗೆ ಹಿಂದಿ ಮತ್ತು ಆಂಗ್ಲಭಾಷಾ ಮತ್ತು ಗಣಕ ಜ್ಞಾನ ಅಗತ್ಯ (ವಯೋಮಿತಿ 35 ವರ್ಷದೊಳಗೆ, ವೇತನ-44,900- 1,42,400 ರೂ.)
ಇನ್ನು ಜೆಒಸಿಗೆ 3 ವರ್ಷ, ಪರಿಶಿಷ್ಟರಿಗೆ 5 ವರ್ಷ ಮತ್ತು ಕಗಈ ವರ್ಗಕ್ಕೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆಯಿದೆ.

ಆಯ್ಕೆ, ಅರ್ಜಿ ಸಲ್ಲಿಕೆ
ಎಲ್ಲ ಹುದ್ದೆಗಳ ಆಯ್ಕೆಯನ್ನು ಲಿಖೀತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಸಲಾಗುತ್ತದೆ. ಆಯಾ ಹುದ್ದೆಗಳಿಗನುಗುಣವಾಗಿ ಪರೀಕ್ಷೆಗಳು ನಡೆಯುತ್ತವೆ. ಅರ್ಜಿ ಸಲ್ಲಿಕೆಯು ಆನ್‌ಲೈನ್‌ ಮೂಲಕ ನಡೆಸಲಿದ್ದು kvsangathan.nic.in ಜಾಲತಾಣದ ಮೂಲಕ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಉಪ ಆಯುಕ್ತ, ಸಹಾಯಕ ಆಯುಕ್ತ ಮತ್ತು ಆಡಳಿತಾತ್ಮಕ ಅಧಿಕಾರಿ ಹುದ್ದೆಗೆ 1200 ರೂ. ಮತ್ತು ಇತರ ಹುದ್ದೆಗಳಿಗೆ 750 ರೂ. ಅರ್ಜಿ ಶುಲ್ಕವಾಗಿದೆ. ಅರ್ಜಿ ಸಲ್ಲಿಸಲು ಜನವರಿ 11 ಕಡೆಯ ದಿನವಾಗಿದೆ. 

ಹೆಚ್ಚಿನ ಮಾಹಿತಿಗೆ
//bit.do/dYqbP
   
ಹುದ್ದೆಗಳು ಎಷ್ಟು?:
ಉಪ ಆಯುಕ್ತರು (ಗ್ರೂಪ್‌-ಎ) – 4
ಸಹಾಯಕ ಆಯುಕ್ತರು (ಗ್ರೂಪ್‌-ಎ) – 13
ಆಡಳಿತಾತ್ಮಕ ಅಧಿಕಾರಿ ( ಗ್ರೂಪ್‌-ಎ) – 7
ವಾಣಿಜ್ಯಾಧಿಕಾರಿ (ಗ್ರೂಪ್‌-ಬಿ) – 2
ಸಹಾಯಕ ಅಭಿಯಂತರ (ಗ್ರೂಪ್‌-ಬಿ) – 1
ಸಹಾಯಕರು (ಗ್ರೂಪ್‌- ಬಿ) – 27
ಹಿಂದಿ ಅನುವಾದಕಾರ (ಗ್ರೂಪ್‌ -ಬಿ) – 4
ಹಿರಿಯ ದರ್ಜೆ ಗುಮಾಸ್ತ (ಗ್ರೂಪ್‌-ಸಿ) – 146
ಸ್ಟೆನೋಗ್ರಾಫ‌ರ್‌ (ಜೆಂಡರ್‌-||) (ಗ್ರೂಪ್‌-ಸಿ) – 38
ಕಿರಿಯ ದರ್ಜೆ ಗುಮಾಸ್ತ (ಗ್ರೂಪ್‌-ಸಿ) – 561
ಗ್ರಂಥಪಾಲಕ (ಗ್ರೂಪ್‌-ಸಿ) – 214
ಒಟ್ಟು ಎಲ್ಲ ಸೇರಿ 1017 ಹುದ್ದೆಗಳಾಗಿದ್ದು, ಇದನ್ನು ಮೀಸಲಾತಿ, ಒಬಿಸಿ, ಕಗಈಗೆ ಅನುಗುಣವಾಗಿ ವಿಂಗಡನೆ ಮಾಡಲಾಗಿದೆ.

– ಅನಂತನಾಗ್‌ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next