Advertisement

ಸ್ವಾಸ್ಥ್ಯ ಕಾಪಾಡುವ ಹವ್ಯಾಸ ಬೆಳೆಸಿಕೊಳ್ಳಲು ಕರೆ

10:11 AM Dec 04, 2018 | |

ಕಲಬುರಗಿ: ಮುಕ್ತ ಮನಸ್ಸಿನಿಂದ ತನ್ನೊಂದಿಗೆ ಇತರರನ್ನು ಬೆಳೆಸುವ ಹೃದಯ ವೈಶಾಲತೆ ಮೈಗೂಡಿಸಿಕೊಂಡಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಪ್ರತಿಯೊಬ್ಬರ ಬದುಕಿನಲ್ಲಿ ಹವ್ಯಾಸಗಳಿರಬೇಕು. ಆದರೆ ಹವ್ಯಾಸವೇ ಬದುಕು ಆಗಬಾರದು ಎಂದು ಹಿರಿಯ ಸಾಹಿತಿ ಡಾ| ಸ್ವಾಮಿರಾವ ಕುಲಕರ್ಣಿ ಹೇಳಿದರು.

Advertisement

ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ ಗ್ಯಾಲರಿ (ಕಲಾನಿಕೇತನ)ಯಲ್ಲಿ ದಿ.ಐಡಿಯಲ್‌ ಫೈನ್‌ ಆರ್ಟ್‌ ಸಂಸ್ಥೆ, ಹೈದರಾಬಾದ್‌ ಕರ್ನಾಟಕ ಮೀಡಿಯಾ ಎಕ್ಸ್‌ಲೆನ್ಸಿ ಅಕಾಡೆಮಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಶಿಕ್ಷಕ ದಿ| ಮಧುಕರರಾವ್‌ ಜೋಶಿ ಸ್ಮರಣಾರ್ಥ ಚಿತ್ರಕಲಾವಿದ, ಛಾಯಾಗ್ರಾಹಕ ನಾರಾಯಣ ಎಂ. ಜೋಶಿ ಅವರು ಪತ್ರಿಕೆಗಳಲ್ಲಿ ಪ್ರಕಟವಾದ ಚಿತ್ರಲೇಖನಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ಮನಸ್ಸುಗಳು ಸಂಕುಚಿತಗೊಂಡು ದ್ವೇಷ, ಅಸೂಯೆ ಹೆಚ್ಚಾಗಿ ಮನಸ್ಸುಗಳೇ ಸೇರುತ್ತಿಲ್ಲ. ಈ ನಿಟ್ಟಿನಲ್ಲಿ ಒಂದಕ್ಕೊಂದು ಸಂಘ ರಚನೆಗಳಾಗಿವೆ. ಬದಲಾಗಿ ಸಾಹಿತಿಗಳು ಒಂದೆಡೆ ಸೇರಲು ವೇದಿಕೆಗಳೇ ಇಲ್ಲ. ಕಲಾವಿದರಿಗೆ ಬಣ್ಣವೇ ಶ್ರೇಷ್ಠವಾದರೆ, ಸಾಹಿತಿಗಳು ಮಾತುಗಾರರು. ಈ ದಿಸೆಯಲ್ಲಿ ನಾರಾಯಣ ಎಂ. ಜೋಶಿ ಅವರೊಬ್ಬರು ಚಿತ್ರಕಲಾವಿದ, ಛಾಯಾಗ್ರಾಹಕ ಮತ್ತು ಹವ್ಯಾಸಿ ಬರಹಗಾರರಾಗಿ ಹೊರಹೊಮ್ಮಿದ್ದಾರೆ ಎಂದು ಬಣ್ಣಿಸಿದರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಬಸವರಾಜ ಉಪ್ಪಿನ ಮಾತನಾಡಿ, ಅದೃಷ್ಟ ಮತ್ತು ದೈವ ಬಲಕ್ಕೆ ಅಂಟಿಕೊಳ್ಳದೆ, ಸತತ ಪ್ರಯತ್ನ, ಪರಿಶ್ರಮದಿಂದ ಯಶಸ್ಸು ದೊರೆಯಲು ಸಾಧ್ಯ ಎಂದು ಹೇಳಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್‌ ಠಾಕೂರ್‌, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಮೊಹಮ್ಮದ ಅಯಾಜುದ್ದೀನ್‌ ಪಟೇಲ್‌, ದಿ| ಐಡಿಯಲ್‌ ಫೈನ್‌ ಆರ್ಟ್‌ ಸಂಸ್ಥೆ ಕಾರ್ಯದರ್ಶಿ ಡಾ| ವಿ.ಜಿ. ಅಂದಾನಿ ಮಾತನಾಡಿದರು.

ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್‌ ಇದ್ದರು. ರಂಜೀಶಾ ಕುಲಕರ್ಣಿ ಪ್ರಾರ್ಥಿಸಿದರು. ಡಾ| ಎಸ್‌.ಎಂ. ನೀಲಾ ಸ್ವಾಗತಿಸಿದರು. ನಾರಾಯಣ ಎಂ. ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಎಂ. ರಾವೂರ ನಿರೂಪಿಸಿದರು. ಭರತ ಧನ್ನಾ ವಂದಿಸಿದರು.

Advertisement

ದಿ| ಐಡಿಯಲ್‌ ಫೈನ್‌ ಆರ್ಟ್‌ ಕಾಲೇಜು ಪ್ರಾಂಶುಪಾಲ ರಾಜಶೇಖರ ಎಸ್‌., ನೂತನ ವಿದ್ಯಾಲ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ| ಹೇಮಂತ ಕೊಲ್ಲಾಪುರ, ರವಿ ಲಾತೂರಕರ, ನರಹರಿ ಪಾಟೀಲ, ಪ್ರಭಾಕರ ಸಲಗರೆ, ಜೋಶಿ ಪರಿವಾರದವರು ಮುಂತಾದವರು ಇದ್ದರು. ಮೂರು ದಿನಗಳವರೆಗೆ ಬೆಳಗ್ಗೆ 11:00ರಿಂದ ಸಂಜೆ 5:00ರ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ವೀಕ್ಷಿಸಬಹುದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next