Advertisement

ತಳ ಮಟ್ಟದಿಂದ ಜೆಡಿಎಸ್‌ ಸಂಘಟಿಸಲು ಕಾರ್ಯಕರ್ತರಿಗೆ ಕರೆ

03:40 PM Jan 26, 2022 | Shwetha M |

ಹೂವಿನಹಿಪ್ಪರಗಿ: ರಾಷ್ಟ್ರೀಯ ಪಕ್ಷಗಳ ಅಪ ಪ್ರಚಾರಕ್ಕೆ ಕಿವಿಗೊಡದೆ ಜಾತ್ಯತೀತ ಜನತಾ ದಳ ಪಕ್ಷವನ್ನು ಕ್ಷೇತ್ರದಲ್ಲಿ ಬೇರು ಮಟ್ಟದಿಂದ ಬಲಪಡಿಸಿ ಎಂದು ದೇವರಹಿಪ್ಪರಗಿ ಕ್ಷೇತ್ರದ ಜೆಡಿಎಸ್‌ ಧುರೀಣ ರಾಜು ಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

Advertisement

ಬಸವನಬಾಗೇವಾಡಿ ತಾಲೂಕಿನ ರಬಿನಾಳ ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಜೆಡಿಎಸ್‌ ಪಕ್ಷದ ಹೂವಿನಹಿಪ್ಪರಗಿ ವಲಯ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಹಾಗೂ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷ ಸಿದ್ದಾಂತದ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡಿ ಎಂದರು.

ಜೆಡಿಎಸ್‌ ಅಧಿಕಾರವಧಿಯಲ್ಲಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಭಿವೃದ್ಧಿ ಹಾಗೂ ಜನಪರ ಕಲ್ಯಾಣ ಯೋಜನೆಗಳನ್ನು ಕ್ಷೇತ್ರದ ಜನರಿಗೆ ತಿಳಿಸಿ. ಮುಂದಿನ ದಿನಮಾನಗಳಲ್ಲಿ ಪಕ್ಷವನ್ನು ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರೋಣ ಎಂದು ಹೇಳಿದರು.

ಕುಮಾರಣ್ಣನ ಕನಸಿನ ಕೂಸಾದ ಪಂಚರತ್ನ ಕಾರ್ಯಕ್ರಮವನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯದ ಸಾಮಾಜಿಕ ನ್ಯಾಯ ಅನುಸರಿಸುವ ಏಕೈಕ ಪಕ್ಷ ಜೆಡಿಎಸ್‌. ದೇವೇಗೌಡರು ಪ್ರಧಾನಿಗಳಾಗಿದ್ದ ಸಮಯದಲ್ಲಿ ಆಲಮಟ್ಟಿ ಡ್ಯಾಂ ನಿರ್ಮಾಣ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಿ ಆಣೆಕಟ್ಟು ಪೂರ್ಣಗೊಳಿಸಿದರು. ಇಂದಿನ ದಿನಮಾನಗಳಲ್ಲಿ ಅಖಂಡ ಜಿಲ್ಲೆ ನೀರಾವರಿ ನಾಡಾಗಿ ಸದಾ ಹಸಿರಿನಿಂದ ಕಂಗೊಳಿಸುವುದಕ್ಕೆ ದೇವೇಗೌಡರ ಕಾರಣರಾಗಿ ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ಜಿ. ಪಾಟೀಲ (ಹಲಸಂಗಿ) ಮಾತನಾಡಿ, ಬಿಜೆಪಿ ಸರಕಾರ ಪಕ್ಷದ ಸಿದ್ಧಾಂತವನ್ನು ಕಡೆಗಣಿಸಿ ಬೆಲೆ ಏರಿಕೆ ಮಾಡಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದಲ್ಲಿ ಕುಮಾರಸ್ವಾಮಿಯವರು ಜನಪರ ಹಾಗೂ ರೈತ ಪರವಾದ ಪಂಚರತ್ನ ಯೋಜನೆಯನ್ನು ಜಾರಿಗೆ ತರುವ ಉದ್ದೇಶ ಹೊಂದಿದ್ದು ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ. ಕ್ಷೇತ್ರದಲ್ಲಿ ರಾಜುಗೌಡ ಪಾಟೀಲರ ಕೈ ಬಲಪಡಿಸಲು ಕಾರ್ಯಕರ್ತರು ಸಿದ್ಧರಿರಬೇಕು. ಯಾವುದೇ ಕಾರಣಕ್ಕೂ ಇಂತಹ ವ್ಯಕ್ತಿ ನಿಮಗೆ ಸಿಗುವುದಿಲ್ಲ. ಕಳೆದುಕೊಂಡು ಹುಡುಕುವುದರಲ್ಲಿ ಅರ್ಥವಿಲ್ಲ, ಆ ನಿಟ್ಟಿನಲ್ಲಿ ಜಾತಿಯನ್ನು ಮೀರಿ ಅವರ ಕೈ ಬಲ ಪಡಿಸಿಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

Advertisement

ಜೆಡಿಎಸ್‌ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಸಾಯಬಣ್ಣ ಬಾಗೇವಾಡಿ, ಬಸವರಾಜ ಬಾಗೇವಾಡಿ, ಹೂವಿನಹಿಪ್ಪರಗಿ ವಲಯ ಅಧ್ಯಕ್ಷ ಬಸನಗೌಡ ಬಿರಾದಾರ ಮಾತನಾಡಿದರು. ಅನಿಲಗೌಡ ಪಾಟೀಲ, ಗುರನಗೌಡ ಪಾಟೀಲ, ಸಚಿನಗೌಡ ಪಾಟೀಲ, ಮಾಂತಗೌಡ ಪಾಟೀಲ, ಅಣ್ಣಪ್ಪ ಆಲೂರ, ರಿಯಾಜ್‌ ಯಲಗಾರ, ಶಿವಣ್ಣ ಬಾಗೇವಾಡಿ, ಶ್ರೀಮಂತ ಜೋಗಿ, ಮಡುಸಾಹುಕಾರ ಬಿರಾದಾರ, ನಿಂಗನಗೌಡ ಬಿರಾದಾರ, ಬಸಣ್ಣ ಬಾಗೇವಾಡಿ, ಭೀಮನಗೌಡ ಪಾಟೀಲ, ಜ್ಞಾನೇಶ್ವರ ಭೋಸಲೆ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು. ರಾಜುಗೌಡ ಬಿರಾದಾರ ನಿರೂಪಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಕಾಲ ಸಮೀಪಿಸುತ್ತಿದೆ. ಮುಂದಿನ ದಿನಗಳನ್ನು ಗಮನದಲ್ಲಿಟ್ಟು ಜಿಪಂ ಹಾಗೂ ತಾಪಂ ಚುನಾವಣೆಯನ್ನು ಗಮನಿಸಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಾವು ವಿಧಾನಸಭೆ ಚುನಾವಣೆಯಲ್ಲಿ ಸುಲಭವಾಗಿ ಅಧಿಕಾರಕ್ಕೆರಲು ಸಾಧ್ಯ. -ಬಸನಗೌಡ ಮಾಡಗಿ, ಜೆಡಿಎಸ್‌ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next