Advertisement
ಕೊಡವ ಮಕ್ಕಡ ಕೂಟದ 25ನೇ ಪ್ರಕಟಣೆಯಾಗಿ ಆಂಗ್ಲ ಭಾಷೆಯಲ್ಲಿ ಹೊರ ತಂದಿರುವ “ದಿ ಮೇಜರ್ ಹೂ ಕೆಪ್ಟ್ ಹಿಸ್ ಕೂಲ್ ‘ಕೃತಿಯನ್ನು ಕೊಡವ ಮಕ್ಕಡ ಕೂಟ ಮತ್ತು ಕೊಡಗು ಪ್ರಸ್‌ಕ್ಲಬ್ ಸಹಯೋಗದಲ್ಲಿ ನಗರದ ಪತ್ರಿಕಾಭವನ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದ ನಿವೃತ್ತ ಏರ್‌ಮಾರ್ಷಲ್ ಕೊಡಂದೇರ ಸಿ.ಕಾರ್ಯಪ್ಪ ಪಿವಿಎಸ್‌ಎಂ, ವಿಎಂ ಅವರು, ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿ ಅವರ ಪ್ರಾಮಾಣಿಕ ಸೇವೆ ಮತ್ತು ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವಜನರಿಗೆ ಆದರ್ಶಪ್ರಾಯರಾಗಿರುವ ಇವರ ಸೇನಾ ಸಾಧನೆಯ ಪುಸ್ತಕವನ್ನು ಹೊರತಂದಿರುವುದು ಸ್ವಾಗತಾರ್ಹ. ಲೇಖಕ ಮೂಕೊಂಡ ನಿತಿನ್ ಕುಶಾಲಪ್ಪ ಅವರು ಗಣಪತಿ ಅವರ ಜೀವನ ಮತ್ತು ವ್ಯಕ್ತಿತ್ವಕ್ಕೆ ತಮ್ಮ ಪುಸ್ತಕದಲ್ಲಿ ನ್ಯಾಯ ಒದಗಿಸಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಲೆಫ್ಟಿನೆಂಟ್ ಜನರಲ್ ಡಾ.ಬಿಎನ್‌ಬಿಎಂ ಪ್ರಸಾದ್ ಎಸ್‌ಎಂ, ವಿಎಸ್‌ಎಂ, ಸೇನೆಯಲ್ಲಿ ಕೊಡಗಿನ ಸೇನಾಧಿಕಾರಿಗಳಿಗೆ ವಿಶೇಷ ಗೌರವವಿದ್ದು, ಕೊಡವರ ಸೇನಾಸೇವೆಯ ಕೊಡುಗೆ ಮತ್ತಷ್ಟು ಹೆಚ್ಚಾಗಬೇಕು. ಇದಕ್ಕೆ ಹೆಚ್ಚು, ಹೆಚ್ಚು ಸಂಖ್ಯೆಯಲ್ಲಿ ಯುವ ಸಮೂಹ ಸೇನೆಗೆ ಸೇರ್ಪಡೆಗೊಳ್ಳಬೇಕೆಂದು ಕರೆ ನೀಡಿದರು. ಕೊಡಗು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಾಚಮಂಡ ಎ.ಕಾರ್ಯಪ್ಪ ಅವರು ಮಾತನಾಡಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಸ್ತಕ ಸಮಿತಿ ಸಂಚಾಲಕ ಬಿ.ಸಿ.ದಿನೇಶ್ ಉಪಸ್ಥಿತರಿದ್ದರು. ಬಾಳೆಯಡ ದಿವ್ಯಾ ಮಾದಪ್ಪ ನಿರೂಪಿಸಿ, ಪತ್ರಕರ್ತ ಕಿಶೋರ್ ರೈ ವಂದಿಸಿದರು. ಚೊಟ್ಟಂಡ ನಿಶಿತಾ ದೇಚಮ್ಮ ಪ್ರಾರ್ಥಿಸಿದರು.