Advertisement

ಮರಗಿಡ ಬೆಳೆಸಿ ಪರಿಸರ ಕಾಪಾಡಲು ಕರೆ

08:01 PM Jun 23, 2019 | sudhir |

ಪೆರ್ಲ:ಇಲ್ಲಿನ ನೇತಾಜಿ ಸಾರ್ವಜನಿಕ ಗ್ರಂಥಾಲಯದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಾಳೆಗಾಗಿ ಹಸಿರು ಸಂವಾದ ನಡೆಯಿತು.
ಎಣ್ಮಕಜೆ ಪಂ.ನಿಕಟಪೂರ್ವ ಕಾರ್ಯದರ್ಶಿ ನಾರಾಯಣ ವೈ.ಸಂವಾದವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಪ್ರಕೃತಿಯನ್ನು ಪ್ರೀತಿಸುತ್ತಾ ಪೂಷಿಸುತ್ತಾ ಬದುಕಿದ ನಮ್ಮ ಹಿರಿಯರ ಅವಿರತ ಶ್ರಮದಿಂದ ನಾವು ಹಸಿರು ತುಂಬಿದ ಪ್ರಕೃತಿಯ ಫಲವನ್ನು ಅನುಭವಿಸುತ್ತಿದ್ದೇವೆ. ಆದರೆ ನಗರೀಕರಣ, ಕೈಗಾರಿಕರಣದ ಮಾಯಾಜಾಲದಲ್ಲಿ ನಾವು ಹಸಿರನ್ನು ನಾಶಮಾಡಿದ ಪರಿಣಾಮದ ಮುನ್ಸೂಚನೆ ಪ್ರತೀ ವರ್ಷ ಹೆಚ್ಚುತ್ತಿರುವ ತಾಪಮಾನ.ಇದು ಜೀವ ಕೋಟಿಗೆ ಅಪಾಯದ ಕರೆಗಂಟೆಯಾಗಿದೆ ಎಂದರು. ಮರಗಿಡಗಳನ್ನು ಬೆಳೆಸಿ ವಾತಾವರಣದ ಸಮತೋಲನವನ್ನು ಕಾಪಾಡಿ ಮಳೆಯ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ ಇಲ್ಲದಿದ್ದರೆ ಮುಂದೆ ಜೀವಜಾಲದ ಬದುಕು ಶೋಚನೀಯವಾಗಬಹುದು ಎಂದು ಹೇಳಿದರು. ಗ್ರಂಥಾಲಯ ಅಧ್ಯಕ್ಷ ರಾಮಕೃಷ್ಣ ರೈ ಕುದ್ವ ಅಧ್ಯಕ್ಷತೆ ವಹಿಸಿದ್ದರು. ಎಪಂ.ಸದಸ್ಯರಾದ ಮೊಹಮ್ಮದ್‌ ಹನೀಫ್‌,ಪ್ರೇಮಾ,ಮಂಜೇಶ್ವರ ತಾ. ಗ್ರಂಥಾಲಯ ಕೌನ್ಸಿಲರ್‌ ಉದಯ ಸಾರಂಗ,ವಿನೋದ್‌ ಸಂವಾದದಲ್ಲಿ ಭಾಗವಹಿಸಿದರು.ನಂತರ ಎಲ್ಲರಿಗೂ ಗಿಡಗಳನ್ನು ವಿತರಿಸಲಾಯಿತು.ಗ್ರಾಮಾಧಿಕಾರಿ ಚಂದ್ರಶೇ ಖರ್‌, ಪೆರ್ಲ ಎಸ್‌ಎನ್‌ಎಲ್‌ಪಿ ಶಾಲಾ ಮುಖ್ಯ ಶಿಕ್ಷಕ ಮಹಾಲಿಂಗೇಶ್ವರ ಎನ್‌.ಗಿಡ ನೆಟ್ಟು ಗ್ರಂಥಾಲಯದ ಮಹತ್ವದ ಯೋಜನೆ ನಾಳೆಗಾಗಿ ನೆರಳು ಅಭಿಯಾನಕ್ಕೆ ಚಾಲನೆ ನೀಡಿದರು.ಅನಿಲ್‌ ಕುಮಾರ್‌,ಸದಾನಂದ ನಲ್ಕ ಉಪಸ್ಥಿತರಿದ್ದರು. ಗ್ರಂಥಾಲಯ ಸದಸ್ಯ ರಾಜೇಶ್‌ ಸ್ವಾಗತಿಸಿ,ಮಣಿಕಂಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next