Advertisement

ಮೀಸಲಾತಿ ಕುರಿತು ವಿಶೇಷ ಅಧಿವೇಶನ ಕರೆಯಿರಿ

02:34 PM Feb 11, 2021 | Team Udayavani |

ಚಾಮರಾಜನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸ ಲಾತಿ ವಿಚಾರವಾಗಿ ವಿಶೇಷ ಅಧಿವೇಶನ ಕರೆಯಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಒತ್ತಾಯಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ನಾಶ ಮಾಡುವ ಹುನ್ನಾರದಿಂದ ಬಿಜೆಪಿ, ಆರ್‌ಆರ್‌ಎಸ್‌ ಪ್ರಬಲರ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡುತ್ತಿದೆ. ಅದೇ ರೀತಿಯಲ್ಲಿ ಕಾಂಗ್ರೆಸ್‌ ಕೂಡ ಇದಕ್ಕೆ ಬೆಂಬಲ ನೀಡುತ್ತಿದೆ ಎಂದು ದೂರಿದರು.

ಕುರುಬರ ಸಮುದಾಯ ಎಸ್‌ಟಿಗೆ ಸೇರ್ಪಡೆ ಮಾಡುವಂತೆ ದೊಡ್ಡ ಸಮಾವೇಶ ನಡೆಸಿದೆ. ಲಿಂಗಾಯತ ಸಮುದಾಯವು ಕೂಡ ಪ್ರವರ್ಗ 2ಗೆ ಸೇರಿಸುವಂತೆ ದೊಡ್ಡ ಹೋರಾಟ ಮಾಡು ತ್ತಿದೆ. ಅದೇ ರೀತಿ ಒಕ್ಕಲಿಗ ಸಮುದಾಯವು ಕೂಡ ಪ್ರವರ್ಗ 2 ಗೆ ಸೇರಿಸುವಂತೆ ಹೋರಾಟ ನಡೆಸುತ್ತಿದೆ. ಈ ನಡುವೆ ಬಿಲ್ಲವ ಹಾಗೂ ಈಡಿಗ ಸಮುದಾಯ ಇದಕ್ಕೆ ವಿರೋಧ ವ್ಯಕ್ತಪಡಿಸಿ ಯಥಾಸ್ಥಿತಿ ಕಾಪಾಡುವಂತೆ ಒತ್ತಾಯ ಮಾಡಿದೆ. ಇದರಿಂದಾಗಿ ದುರ್ಬಲ ಸಮುದಾಯ ಹಾಗೂ ಪ್ರಬಲ ಸಮುದಾಯಗಳ ನಡುವೆ ಸಂಘರ್ಷ ಉಂಟಾಗಲಿದೆ ಎಂದರು.

ಇದನ್ನೂ ಓದಿ:ಪೊಲೀಸರ ಮಾನವೀಯತೆಗೆ ಸಾರ್ವಜನಿಕರ ಶ್ಲಾಘನೆ

ಪ್ರಾಧಾನ್ಯತೆ ಇಲ್ಲದ ವರ್ಗಗಳಿಗೆ ಶಾಸಕಾಂಗ, ಕಾರ್ಯಾಂಗ ,ನ್ಯಾಯಾಂಗದಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ ಮೀಸಲಾತಿಯನ್ನುಸಂವಿಧಾನದಲ್ಲಿ ದೊರಕಿಸಿಕೊಡಲಾಗಿದೆ. ಮೀಸಲಾತಿ ಬಡತನN ನಿರ್ಮೂಲನೆ ಕಾರ್ಯಕ್ರಮವಲ್ಲ. 12 ಬಾರಿ ಮುಖ್ಯಮಂತ್ರಿಯಾಗಿNರುವ ಲಿಂಗಾಯತ ಸಮುದಾಯ, 8 ಬಾರಿ ಮುಖ್ಯಮಂತ್ರಿಯಾಗಿ ರುವ ಒಕ್ಕಲಿಗ ಸಮುದಾಯ, ಹಾಗೂ ಒಮ್ಮೆ ಮುಖ್ಯಮಂತ್ರಿಯಾಗಿ ಕುರುಬರ ಸಮುದಾಯಗಳು, ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ, ಪ್ರವರ್ಗ 2 ರಲ್ಲಿ ಪಾಲು ಕೇಳುತ್ತಿದೆ.

Advertisement

ಇದು ದುರ್ಬಲ, ಪ್ರಬಲ ಸಮುದಾಯಗಳ ಸಂಘರ್ಷಕ್ಕೆ ಕಾರಣವಾಗಿದೆ ಎಂದರು. ಕೇಂದ್ರ ಸರ್ಕಾರ ದೇಶದಲ್ಲಿ ಜಾತಿ, ಜನಸಂಖ್ಯೆವಾರು ಅಂಬೇಡ್ಕರ್‌ ಅವರ ಸಂವಿಧಾನದ ಆಶಯದಂತೆ ಸರ್ವರಿಗೂ ಸಮ  ಪಾಲು ತತ್ವದಂತೆ ಎಲ್ಲ ವರ್ಗಗಳ ಜನಸಂಖ್ಯೆಯ ಆಧಾರದಲ್ಲಿ ಶೇ.100ಕ್ಕೆ 100 ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ದರು. ಮೀಸಲಾತಿ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ

ರಾಜ್ಯದ 224 ಶಾಸಕರು, 28 ಸಂಸದರು, 100 ವಿಧಾನ ಪರಿಷತ್‌ ಸದಸ್ಯರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದರು..

ಮೊದಲನಿಂದಲೂ ಮೀಸಲಾತಿ ವಿರೋಧಿಸುತ್ತಿದ್ದ ವರ್ಗಗಳು ಈಗ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುನ್ನು ನೋಡಿದರೆ ಮೀಸಲಾತಿ ನಾಶವಾಗುವ ಅನುಮಾನ ಮೂಡುತ್ತಿದೆ ಎಂದರು. ಪಕ್ಷ ಪ್ರಧಾನ ಕಾರ್ಯದರ್ಶಿ ಅರಕಲವಾಡಿನಾಗೇಂದ್ರ, ಜಿಲ್ಲಾಧ್ಯಕ್ಷ ಎನ್‌.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಬ.ಮ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next