Advertisement
ಕ್ಯಾಲಿಫೋರ್ನಿಯಾದ ಕಾಫಿ ಮಳಿಗೆಯೊಂದಕ್ಕೆ ಬಂದ ಗ್ರಾಹಕಿಯೋಬ್ಬರು ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮಾಲಕ ಗರಂ ಆಗಿ ಆಕೆಗೆ ಕಾಫಿ ನೀಡಲು ನಿರಾಕರಿಸಿ ಅಂಗಡಿಯಿಂದ ಹೊರಗೆ ಕಳುಹಿಸಿ¨ªಾನೆ.
ಈ ಸಮಸ್ಯೆಯ ತೀವ್ರತೆಯನ್ನು ಅರಿಯದೇ ಗ್ರಾಹಕಿ ಆಯಂಬರ್ ಲಿನ್ ಗಿಲ್ಸ್ ಕಾಫಿ ಅಂಗಡಿ ಮಾಲಕ ನನಗೆ ಅವಮಾನ ಮಾಡಿದ್ದಾನೆಂದು ಕಿಡಿಕಾರಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಾಫಿ ಮಳಿಗೆ ಹಾಗೂ ಕಾಫಿ ಕೊಡಲು ನಿರಾಕರಿಸಿದ ಮಾಲಕ ಲೆನಿನ್ ಅವರ ಪೋಟೋ ಹಂಚಿಕೊಂಡಿದ್ದಾಳೆ. ಇಷ್ಟು ಮಾತ್ರವಲ್ಲದೇ ಲೆನಿನ್ ನಡೆಯನ್ನು ಮಹಾಪರಾಧ ಎಂದು ಬಿಂಬಿಸಿದ್ದು, ತನಗೆ ಅವಮಾನ ಆಗಿದೆ ಎಂದು ತನ್ನ ನೋವು ತೋಡಿಕೊಂಡಿದ್ದಾಳೆ. ಆದರೆ, ಲಿನ್ ಗಿಲ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮಾಸ್ಕ್ ಧರಿಸದೇ ಹೊರಹೋಗಿದ್ದು ನಿನ್ನದೇ ತಪ್ಪು ಎಂದು ಲಿನ್‌ಳನ್ನೇ ತರಾಟೆಗೆ ತೆಗೆದುಕೊಂಡಿದ್ದು, ಕಾಫಿ ಅಂಗಡಿ ಮಾಲಕ ಲೆನಿನ್ ಅವರ ಮೇಲೆ ಮಾಡಿರುವ ಆರೋಪವನ್ನು ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ, ಸಾರ್ವಜನಿಕರ ಹಿತದೃಷ್ಟಿಯಿಂದ ವ್ಯಾಪಾರ ಮತ್ತು ಗಿರಾಕಿಯನ್ನು ಕಳೆದುಕೊಳ್ಳಲು ಮುಂದಾದ ಲೆನಿನ್ ಅವರ ನಡೆಯನ್ನು ಶ್ಲಾಘಿಸಿದ್ದು, ಆತನಿಗಿರುವ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.