Advertisement
ಎಲ್ಲರಿಗೂ ಮನೆಯ ಬಾಗಿಲುಗಳ, ಅದರಲ್ಲೂ ಮುಂಬಾಗಿಲಿನ ಭದ್ರತೆಯ ಬಗ್ಗೆ ಹೆಚ್ಚು ಆತಂಕವಿರುತ್ತದೆ. ಮನೆಯ ಒಳಗೆ- ಹೊರಗೆ ಎಂದು ನಿರ್ದಿಷ್ಟವಾಗಿ ಲಕ್ಷ್ಮಣರೇಖೆಯಂತೆ ನಿಲ್ಲುವುದು ಈ ಮುಂಬಾಗಿಲೇ ಆದ ಕಾರಣ ನಮಗೆ ಇದು ಹೆಚ್ಚು ಮುಖ್ಯವಾಗುತ್ತದೆ. ಒಳಗಿನ ಬಾಗಿಲುಗಳು ಹೇಗಿದ್ದರೂ ಪರವಾಗಿಲ್ಲ. ಮುಂದಿನ ಹಾಗೆಯೇ ಹಿಂದಿನ ಬಾಗಿಲು ಇದ್ದರೆ, ಅದೂ ಕೂಡ ಗಟ್ಟಿಮುಟ್ಟಾಗಿರಲಿ ಎಂದು ಆಶಿಸುತ್ತೇವೆ. ಕಳ್ಳಕಾಕರು ಮನೆಯನ್ನು ಪ್ರವೇಶಿಸಲು ಸಾಮಾನ್ಯವಾಗಿ ಪ್ರಯತ್ನಿಸುವುದೇ ಈ ಬಾಗಿಲುಗಳ ಮೂಲಕ. ಆದುದರಿಂದ ಭದ್ರತೆಯ ದೃಷ್ಟಿಯಿಂದಲೂ ನಾವು ಇವನ್ನು ಸದೃಢವಾಗಿ ಮಾಡುವುದರ ಜೊತೆಗೆ, ಕಳ್ಳಕಾಕರಿಗೆ -“ಈ ಮನೆಯ ಬಾಗಿಲು ಒಡೆಯುವುದು ಕಷ್ಟ, ಬೇರೆ ಕಡೆ ಪ್ರಯತ್ನಿಸೋಣ’ಎಂಬಂತಿರಬೇಕು ಎಂದೂ ನಿರ್ಧರಿಸಿರುತ್ತೇವೆ. ಆದರೆ ನಾವು ನಮ್ಮ ಮನೆಯ ಮುಂಬಾಗಿಲನ್ನು ತೀರ ಕೋಟೆ ಬಾಗಿಲಿನಂತೆ ಬಿಗಿಗೊಳಿಸಿದರೂ ಸರಿಬರುವುದಿಲ್ಲ! ನಮ್ಮ ಆಶಯಲುರುವುದು- ನೋಡಲು ಸುಂದರವಾಗಿರುವುದರ ಜೊತೆಗೆ ಗಟ್ಟಿಮುಟ್ಟಾಗಿಯೂ ಇರಲಿ ಎಂದೇ ಆಗಿರುತ್ತದೆ.
Related Articles
ಬಾಗಿಲಿನ ಅಗಲ ಸುಮಾರು ಮೂರು ಅಡಿ ಆರು ಇಂಚಿನಷ್ಟು ಉದ್ದ. ಎತ್ತರ ಏಳು ಅಡಿ ಇರುವುದರಿಂದ, ಇಷ್ಟು ಅಗಲದ ಮರದ ಹಲಗೆ ಒಂದೇ ಸೈಜಿನಲ್ಲಿ ಸಿಗುವುದು ಕಷ್ಟ. ಸಿಕ್ಕರೂ ಅದು ತೀರ ದುಬಾರಿಯಾಗಿರುತ್ತದೆ. ಆದುದರಿಂದ ನಾವು ಅನಿವಾರ್ಯವಾಗಿ ಹೆಚ್ಚು ಅಗಲವಿಲ್ಲದ ಮರದ ಹಲಗೆಗಳನ್ನೂ, ರಿಪೀಸುಗಳನ್ನೂ ಬಳಸಿ ಮರದ ಬಾಗಿಲುಗಳನ್ನು ವಿನ್ಯಾಸ ಮಾಡಬೇಕಾಗುತ್ತದೆ.
Advertisement
ಸದೃಢ ವಿನ್ಯಾಸಮರದ ಹಲಗೆಗಳಿಗಿಂತ ಸಾಮಾನ್ಯವಾಗಿ ರಿಪೀಸುಗಳು ಹೆಚ್ಚು ಗಟ್ಟಿಮುಟ್ಟಾಗಿರುತ್ತವೆ. ಹಾಗಾಗಿ ರಿಪೀಸುಗಳನ್ನು ಬಳಸಿ ಚೌಕಟ್ಟುಗಳನ್ನು ಮಾಡಿಕೊಂಡು, ಇವುಗಳ ಮಧ್ಯೆ ಹಲಗೆಗಳನ್ನು ಅಳವಡಿಸಲಾಗುತ್ತದೆ. ಹೀಗೆ ಮಾಡುವುದರಿಂದ, ಮರದ ವಿವಿಧ ತುಂಡುಗಳು ಸಮರ್ಪಕವಾಗಿ ಬೆಸೆಯುವುದರ ಜೊತೆಗೆ ತಮ್ಮ ಅಗಲ, ಉದ್ದ ಹಾಗೂ ಆಕಾರವನ್ನು ಕಾಪಾಡಿಕೊಂಡು ಬರಲು ಈ ಸಂದಿಗಳು ಸಹಾಯಕವಾಗಿರುತ್ತದೆ. ಈ ಜಾಯಿಂಟ್‌ಗಳಲ್ಲಿರುವ ಸಣ್ಣ ಸಣ್ಣ ಸಂದುಗಳು ಮರ ಹಿಗ್ಗಿದಾಗ ಇಲ್ಲ ಕುಗ್ಗಿದಾಗ, ಬಾಗಿಲನ್ನು ತೆಗೆದು ಹಾಕಲು ತೊಂದರೆಯಾಗದಂತೆ- ರಸ್ತೆಯಲ್ಲಿ ಗುಂಡಿಗಳಿದ್ದರೆ, ವಾಹನಗಳಲ್ಲಿ ಅಳವಡಿಸುವ ಶಾಕ್ ಅಬಾÕಸºರ್‌ಗಳಂತೆ ಕಾರ್ಯ ನಿರ್ವಹಿಸುತ್ತವೆ! ಸುಂದರವಾಗಿ ಕಾಣಲು..,
ಎಲ್ಲರಿಗೂ ತಮ್ಮ ಮನೆಯ ಮುಂಬಾಗಿಲು ಆಕರ್ಷಕವಾಗಿ ಕಾಣಬೇಕು ಎಂಬ ಹಂಬಲ ಇರುತ್ತದೆ. ಇದನ್ನು ನಾವು ಬಾಗಿಲಿನ ವಿನ್ಯಾಸ ಮಾಡುವಾಗಲೇ
ನಿರ್ಧರಿಸಬೇಕಾಗುತ್ತದೆ. ನಿಮಗೆ ದೊಡ್ಡ ದೊಡ್ಡ ವಿನ್ಯಾಸದ ಕೆತ್ತನೆ ಕೆಲಸ ಬೇಕೆಂದಿದ್ದರೆ, ಸ್ವಲ್ಪ ದೊಡ್ಡ ಹಲಗೆಗಳು ಬರುವಂತೆ ಬಾಗಿಲನ್ನು ಡಿಸೈನ್ ಮಾಡಿಸಬೇಕು. ಹಲಗೆಗಳು ಸಣ್ಣದಿದ್ದರೂ ಹೆಚ್ಚು ಕುಸುರಿ ಕೆಲಸ ಮಾಡಿಸುತ್ತೇವೆ ಎಂದಿದ್ದರೆ, ಮಾಮೂಲಿ ಅಗಲದ ಹಲಗೆ ಸಾಕಾಗುತ್ತದೆ. ಸಾಮಾನ್ಯವಾಗಿ ಮರದ ಹಲಗೆಯ ಅಗಲ ಹೆಚ್ಚಾದಷ್ಟೂ ಅದರ ಬೆಲೆ ಹೆಚ್ಚಾಗುತ್ತದೆ. ಜೊತೆಗೆ ಅಗಲದ ಮರದ ಹಲಗೆ ಬಿರುಕುಬಿಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದುದರಿಂದ, ನಮ್ಮ ವಿನ್ಯಾಸಕ್ಕೆ ಹೊಂದಿಕೊಳ್ಳುವಂತಿದ್ದು, ತೀರ ಅಗಲ ಇಲ್ಲದ ಅಳತೆಯ ಹಲಗೆಯನ್ನು ಆಯ್ದುಕೊಳ್ಳುವುದು ಉತ್ತಮ. ಯಾವುದು ಹೆಚ್ಚು ಕಾರ್ಯ ನಿರ್ವಸುತ್ತದೋ, ಯಾವುದು ಹೆಚ್ಚು ಭಾರ ಹೊರುತ್ತದೋ ಅಂಥ ರಿಪೀಸನ್ನು ದೊಡ್ಡದು ಅಂದರೆ ಅಗಲವಾಗಿಯೂ, ಲಘು ಕಾರ್ಯ ನಿರ್ವಹಿಸುವ ರಿಪೀಸನ್ನು ಕಡಿಮೆ ಅಗಲದಲ್ಲಿ ವಿನ್ಯಾಸ ಮಾಡುವುದೂ ರೂಢಿಯಲ್ಲಿದೆ. ಬಾಗಿಲಿನ ಕೆಳಮಟ್ಟದಲ್ಲಿರುವ ರಿಪೀಸು ಹೆಚ್ಚು ಅಗಲರುತ್ತದೆ. ಇಲ್ಲಿ ಬಾಗಿಲಿನ ಇಡಿ ಭಾರ ಬಂದು ಬೀಳುತ್ತದೆ! ಹಾಗೆಯೇ ಬಾಗಿಲಿನ ಮೇಲಿನ ರಿಪೀಸು ಸಾಮಾನ್ಯವಾಗಿ ಕಡಿಮೆ ಅಗಲದ್ದಾಗಿರುತ್ತದೆ! ಹೆಚ್ಚುವರಿ ಬಿಗಿಗೊಳಿಸುವುದು.
ಸಾಮಾನ್ಯವಾಗಿ ಮನೆಯ ಮುಂಬಾಗಿಲಿಗೆ ವಿನ್ಯಾಸದಂತೆ ಕಾರ್ವಿಂಗ್ ಮಾಡಿಸಿದರೆ, ಸಾಕಷ್ಟು ಮರದ ದಪ್ಪ ಕುಸುರಿ ಕೆಲಸದಲ್ಲಿ ಕೆತ್ತಿಹೋಗಿ, ಮರದ ಬಾಗಿಲುಗಳು ದುರ್ಬಲವಾಗುವ ಸಾಧ್ಯತೆ ಇರುತ್ತದೆ. ಮರದ ಹಲಗೆಗಳ ದಪ್ಪ ಸುಮಾರು ಒಂದರಿಂದ ಒಂದೂವರೆ ಇಂಚು ಇರುವುದರಿಂದ, ಕೆತ್ತನೆ ಕೆಲಸಮಾಡುವಾಗ ಅರ್ಧದಿಂದ ಮುಕ್ಕಾಲು ಇಂಚಿನಷ್ಟು ಮರ ಕೊರೆದು ಹೋದರೂ ನಮಗೆ ನಂತರದಲ್ಲಿ ಸಿಗುವ ದಪ್ಪ ಕಡಿಮೆ. ಆದುದರಿಂದ, ಬಾಗಿಲಿನ ಹಿಂದೆ ಕಡೇ ಪಕ್ಷ ಅರ್ಧ ಇಂಚಿನ ಪ್ಲೆ„ವುಡ್ ಅನ್ನು, ಅಂಟು ಉಪಯೋಗಿಸಿ ಸಿಗಿಸಿದರೆ, ನಿಮ್ಮ ಮನೆಯ ಬಾಗಿಲು ಸದೃಢ ವಾಗುವುದರ ಜೊತೆಗೆ ಸುಂದರವಾಗಿಯೂ ಕಾಣುತ್ತದೆ! ಹೆಚ್ಚುವರಿ ಮಾತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ ಜಯರಾಮ್