Advertisement

44 ಸಾವಿರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಲೆಕ್ಕಾಚಾರ

10:33 AM May 23, 2019 | Team Udayavani |

ಹಾನಗಲ್ಲ: ತಾಲೂಕಿನ ಒಟ್ಟು 223 ಪ್ರಾಥಮಿಕ ಶಾಲೆಗಳು, 55ಕ್ಕೂ ಅಧಿಕ ಪ್ರೌಢಶಾಲೆಗಳ ಆರಂಭಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿದ್ಧತೆ ಮಾಡಿಕೊಂಡಿದ್ದು, 2.33 ಲಕ್ಷ ಪುಸ್ತಕಗಳನ್ನು ವಿತರಿಸುತ್ತಿದೆ.

Advertisement

ರಾಜ್ಯದ ದೊಡ್ಡ ತಾಲೂಕುಗಳಲ್ಲಿ ಒಂದಾದ ಹಾನಗಲ್ಲ ತಾಲೂಕಿನಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ 223 ಪ್ರಾಥಮಿಕ ಶಾಲೆಗಳಲ್ಲಿ 44 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಆರಂಭಿಸುವ ಲೆಕ್ಕಾಚಾರವಿದೆ. ಆಡೂರಿನಲ್ಲಿ ಎಲ್ಕೆಜಿ ಹೊಸದಾಗಿ ಆರಂಭವಾಗುತ್ತಿದ್ದು, ಹಾನಗಲ್ಲಿನ ಎಂಕೆಬಿಎಸ್‌ ಶಾಲೆ, ಆಡೂರು, ವರ್ಧಿ, ಬೆಳಗಾಲಪೇಟ ಗಳಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಸಿದ್ಧತೆ ನಡೆದಿದೆ.

ತಾಲೂಕಿನ ಪ್ರಾಥಮಿಕ ಶಾಲೆಗಳಿಗೆ 1112 ಶಿಕ್ಷಕರು ಬೇಕಾಗಿದ್ದು, ಪ್ರಸ್ತುತ 50 ಶಿಕ್ಷಕರ ಕೊರತೆ ಇದೆ. ಹೆಚ್ಚುವರಿ 100 ಕೊಠಡಿಗಳು ಬೇಕಾಗಿವೆ. ಇದೆಲ್ಲದರ ನಡುವೆ ಮೌಲಿಕ ಶಿಕ್ಷಣಕ್ಕಾಗಿ ಸಿದ್ಧತೆ ನಡೆದಿದೆ.

ಮೇ ತಿಂಗಳಾಂತ್ಯದಲ್ಲಿ ವಿಶೇಷ ದಾಖಲಾತಿ ಆಂದೋಲನ ಆರಂಭವಾಗಿದ್ದು, ಮೇ 28 ರಿಂದ ಶಾಲೆಗಳು ಆರಂಭವಾಗಲಿವೆ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಬರಮಾಡಿಕೊಳ್ಳಲು ವಿಶೇಷ ಫ್ಲೆಕ್ಸ್‌ ಹಾಗೂ ಬೇರೆ ಬೇರೆ ರೀತಿಯ ಆಕರ್ಷಕ ಪ್ರಚಾರದೊಂದಿಗೆ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ದಾಖಲಿಸಲು ಹರಸಾಹಸ ನಡೆದಿದೆ. ಶಿಕ್ಷಕರು ಮನೆ ಮನೆಗಳಿಗೆ ತೆರಳಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸಲು ಪ್ರಚಾರ ಮಾಡುತ್ತಿದ್ದಾರೆ.

ಜೂನ ತಿಂಗಳಿನಲ್ಲಿ ಕ್ಷೀರಭಾಗ್ಯ, ಬಿಸಿ ಊಟ, ಬೂಟು, ಸಾಕ್ಸ್‌, ಬಟ್ಟೆ, ಪಠ್ಯ, ಸೈಕಲ್, ವಿದ್ಯಾರ್ಥಿ ವೇತನ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಂಡಿದೆ. ಮೇ 25 ರೊಳಗೆ ಇಡೀ ತಾಲೂಕಿನ ಎಲ್ಲ ಶಾಲೆಗಳಿಗೆ ಹೊಸ ಪಠ್ಯಪುಸ್ತಕಗಳ ವಿತರಣೆ ಪೂರ್ಣಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next