Advertisement

1.06 ಬಿಲಿಯನ್‌ ಡಾಲರ್‌ ಕೊಟ್ಟರೆ ಕೇಸು ವಾಪಸ್‌: ಕೈರ್ನ್ ಎನರ್ಜಿ

07:59 PM Sep 07, 2021 | Team Udayavani |

ನವದೆಹಲಿ:ಭಾರತ ಸರ್ಕಾರ ಶೀಘ್ರವೇ 1.06 ಬಿಲಿಯನ್‌ ಡಾಲರ್‌ ಮೊತ್ತವನ್ನು ಪಾವತಿಸುವ ವಿಶ್ವಾಸವಿದೆ. ಈ ಮೊತ್ತ ಪಾವತಿ ಮಾಡಿದರೆ, ವಿದೇಶಗಳಲ್ಲಿರುವ ಕೇಂದ್ರದ ಆಸ್ತಿ ವಶಪಡಿಸಿಕೊಳ್ಳುವುದನ್ನು ಕೈ ಬಿಡುವುದಾಗಿ ಕೈರ್ನ್ ಎನರ್ಜಿ ಮಂಗಳವಾರ ಹೇಳಿದೆ.

Advertisement

ಭಾರತದ 1.06 ಶತ ಕೋಟಿ ಡಾಲರ್‌ ಮರು ಪಾವತಿ ಆಫ‌ರ್‌ ಅನ್ನು ನಾವು ಸ್ವೀಕರಿಸಿದ್ದು, ತೆರಿಗೆ ವಿವಾದ ಶೀಘ್ರವೇ ಇತ್ಯರ್ಥಗೊಳ್ಳಲಿದೆ ಎಂದು ಕೈರ್ನ್ ಎನರ್ಜಿ ಸಿಇಒ ಸಿಮೊನ್‌ ಥಾಮ್ಸನ್‌ ಹೇಳಿದ್ದಾರೆ. ಕೇಂದ್ರ ಸರ್ಕಾರದ ಜತೆಗೆ ದೀರ್ಘ‌ ಕಾಲದಿಂದ ಇರುವ ವಿವಾದ ಮುಕ್ತಾಯ ಗೊಳ್ಳುವುದರ ಜತೆಗೆ ವಿಶೇಷ ಡಿವಿಡೆಂಡ್‌ ವಿತರಿಸಲೂ ಈ ಸೂತ್ರ ಅನುಕೂಲವಾಗಲಿದೆ ಎಂದಿದ್ದಾರೆ. ಈ ಬೆಳವಣಿಗೆಯಿಂದಾಗಿ ಲಂಡನ್‌ ಷೇರುಮಾರುಕಟ್ಟೆಯಲ್ಲಿ ಕೈರ್ನ್ ಷೇರುಗಳು ಶೇ.8.2ರಷ್ಟು ಏರಿಕೆ ಕಂಡಿವೆ.

ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ರಿಕ್ಷಾ : ಓರ್ವ ಮಹಿಳೆ ಸಾವು, ಐವರು ಗಂಭೀರ

ಕೈರ್ನ್ ಇಂಡಿಯಾ 2006ರಲ್ಲಿ ಹೊರಡಿಸಿದ್ದ ಐಪಿಒಗೆ ತೆರಿಗೆ ಪಾವತಿಸುವಂತೆ ಅಂದಿನ ಕೇಂದ್ರ ಸರ್ಕಾರ ನೋಟಿಸ್‌ ನೀಡಿತ್ತು. ಇದೇ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಕೇಂದ್ರ ಸರ್ಕಾರಕ್ಕೆ 1.2 ಬಿಲಿಯನ್‌ ಡಾಲರ್‌ ಮೊತ್ತವನ್ನು ಬಡ್ಡಿಸಹಿತ ಪಾವತಿ ಮಾಡುವಂತೆ ಆದೇಶ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next