ಇದು ಕ್ರಿಕೆಟಿನ ಅಪರೂಪದ ಬೌಲಿಂಗ್ ಶೈಲಿ. ಎಡಗೈಯಲ್ಲಿ ಲೆಗ್ ಸ್ಪಿನ್ ಮಾಡುವ ಬೌಲಿಂಗ್ ನಮೂನೆಗೆ “ಚೈನಾಮನ್’ ಎನ್ನುತ್ತಾರೆ. ಈ ಸಂದರ್ಭದಲ್ಲಿ ಕಪ್ಪೆಯಂತೆ ಹಾರುತ್ತ ಬೌಲಿಂಗ್ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಪಾಲ್ ಆ್ಯಡಮ್ಸ್ ಅವರನ್ನೊಮ್ಮೆ ಕಲ್ಪಿಸಿಕೊಳ್ಳಿ. ಪಕ್ಕಾ ಚೈನಾಮನ್ ಬೌಲಿಂಗಿಗೆ ಆ್ಯಡಮ್ಸ್‌ಗಿಂತ ಉತ್ತಮ ಉದಾಹರಣೆ ಇಲ್ಲ!
ಧರ್ಮಶಾಲಾದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ ಕುಲದೀಪ್ ಯಾದವ್ ಹಾಗೂ ಅವರು ಮೊದಲ ದಿನವೇ ಸಾಧಿಸಿದ ಯಶಸ್ಸಿ ನಿಂದಾಗಿ ಚೈನಾಮನ್ ಬೌಲಿಂಗ್ ಮತ್ತೆ ಸುದ್ದಿಯಲ್ಲಿದೆ.
Advertisement
ಭಾರತದ ಪ್ರಥಮ ಚೈನಾಮನ್!ಇಲ್ಲೊಂದು ಸಂಗತಿಯನ್ನು ಹೆಮ್ಮೆ ಹಾಗೂ ಅಷ್ಟೇ ಅಚ್ಚರಿಯಿಂದ ಹೇಳಬೇಕಿದೆ. ಕುಲದೀಪ್ ಯಾದವ್ ಭಾರತೀಯ ಟೆಸ್ಟ್ ಇತಿಹಾಸದ ಪ್ರಪ್ರಥಮ ಚೈನಾಮನ್ ಬೌಲರ್!
Related Articles
ಬಲಗೈ ಹಾಗೂ ಎಡಗೈ ಬ್ಯಾಟ್ಸ್‌ಮನ್‌ಗಳಿಬ್ಬರ ಪಾಲಿಗೂ ಹೆಚ್ಚು ಅಪಾಯಕಾರಿಯಾದ ಈ ಎಸೆತಗಳ ಮೂಲ ಚೀನ ಎಂಬುದೊಂದು ಕೌತುಕ! ಎತ್ತಣ ಕ್ರಿಕೆಟ್, ಎತ್ತಣ ಚೀನ?!
Advertisement
ವೆಸ್ಟ್ ಇಂಡೀಸಿನ ಎಲ್ಲಿಸ್ ಅಚೋಂಗ್ 1933ರಷ್ಟು ಹಿಂದೆ ಇಂಥದೊಂದು ವಿಶಿಷ್ಟ ಶೈಲಿಯ ಬೌಲಿಂಗ್ ನಡೆಸಿ ವಿಶ್ವ ಮಟ್ಟದಲ್ಲಿ ಸುದ್ದಿಯಾದರು. ಅದು ಇಂಗ್ಲೆಂಡ್ ಎದುರಿನ ಓಲ್ಡ್ ಟ್ರಾಫರ್ಡ್ ಟೆಸ್ಟ್. ಮೂಲತಃ ಅಚೋಂಗ್ ಎಡಗೈ ಆರ್ಥ ಡಾಕ್ಸ್ ಸ್ಪಿನ್ನರ್ ಆಗಿದ್ದರು. ಆದರೆ ಅವರ ಎಸೆತವೊಂದು ಆಫ್ಸ್ಟಂಪ್‌ನಾಚೆ ಪಿಚ್ ಆದ ಬಳಿಕ “ಶಾರ್ಪ್ ಟರ್ನ್’ ಪಡೆದು ಇಂಗ್ಲೆಂಡಿನ ವಾಲ್ಟರ್ ರಾಬಿನ್ಸ್ ಅವರ ಸ್ಟಂಪನ್ನು ಎಗರಿಸಿತು.
ಇಂಥದೊಂದು ವಿಶಿಷ್ಟ ಹಾಗೂ ಅಷ್ಟೇ ಘಾತಕ ಎಸೆತಕ್ಕೆ ಔಟಾದುದನ್ನು ಸಹಿಸದ ರಾಬಿನ್ಸ್ ಸಿಟ್ಟಿನಿಂದ ಕುದಿಯ ತೊಡಗಿದರು. ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದಾಗ ಅಚೋಂಗ್ ಅವರನ್ನು “ಫ್ಯಾನ್ಸಿ ಬೀಯಿಂಗ್ ಡನ್ ಬೈ ಎ ಬ್ಲಿಡಿ ಚೈನಾಮನ್…’ ಎಂದು ಬೈಯುತ್ತ ಹೋದರು!
ಅಂದಹಾಗೆ ಎಲ್ಲಿಸ್ ಅಚೋಂಗ್ ಮೂಲತಃ ಚೀನದವರು. ಟೆಸ್ಟ್ ಕ್ರಿಕೆಟ್ ಆಡಿದ ಚೀನ ಮೂಲದ ಮೊದಲ ಆಟಗಾರನೆಂಬುದು ಇವರ ಪಾಲಿನ ಹೆಗ್ಗಳಿಕೆ. ಅಂದಿನಿಂದ “ಲೆಫ್ಟ್ ಹ್ಯಾಂಡ್ ರಿಸ್ಟ್ ಸ್ಪಿನ್ನರ್’ಗಳಿಗೆ ಚೈನಾಮನ್ ಬೌಲರ್ ಎಂದು ಕರೆಯುವುದು ರೂಢಿಯಾಯಿತು! ಇವರ ಸಂಖ್ಯೆ ವಿರಳ
ಕ್ರಿಕೆಟ್ ಇತಿಹಾಸದಲ್ಲಿ ಇಂಥ ಚೈನಾಮನ್ ಬೌಲರ್‌ಗಳ ತಳಿ ಬಹಳ ವಿರಳ. ಅಬ್ಬಬ್ಟಾ ಎಂದರೆ 30 ಮಂದಿ ಬೌಲರ್‌ಗಳು ಸಿಕ್ಕಾರು. ಆದರೆ ಯಾರೂ ವಿಶ್ವ ಮಟ್ಟದಲ್ಲಿ ಸುದ್ದಿಯಾದವರಲ್ಲ. ಇಂಥ ಕೆಲವು ಹೆಸರುಗಳೆಂದರೆ ಚಕ್ ಫ್ಲೀಟ್‌ವುಡ್ ಸ್ಮಿತ್, ಜಾರ್ಜ್ ಟ್ರೈಬ್, ಜಾನಿ ವಾಡ್ಲ್ì, ಗ್ಯಾರಿ ಸೋಬರ್, ಲಿಂಡ್ಸೆ ಕ್ಲೈನ್, ಜಾನಿ ಮಾರ್ಟಿನ್, ಡೇವಿಡ್ ಸಿಂಕಾಕ್, ಇಶಾನ್ ಅಲಿ, ಬರ್ನಾರ್ಡ್ ಜೂಲಿಯನ್, ಪಾಲ್ ಆ್ಯಡಮ್ಸ್, ಬ್ರಾಡ್ ಹಾಗ್, ಬ್ಯೂ ಕ್ಯಾಸನ್, ಡೇವ್ ಮೊಹಮ್ಮದ್, ಮೈಕಲ್ ರಿಪ್ಪನ್, ಲಕ್ಷಣ ಸಂದಕನ್. ಇವರಲ್ಲಿ ಎಡಗೈ ವೇಗಿಯಾಗಿದ್ದ ಸೋಬರ್ ಹೆಸರು ಅಚ್ಚರಿ ಮೂಡಿಸುತ್ತದೆ. ಆದರೆ ಇವರು ಆಗಾಗ ರಿಸ್ಟ್ ಸ್ಪಿನ್ ಮೂಲಕವೂ ವಿಕೆಟ್ ಕಬಳಿಸಿದ್ದುಂಟು. ಅಂದಹಾಗೆ ಅಚೋಂಗ್ ಸಹಿತ ಇವರ್ಯಾರೂ ಸ್ಪೆಷಲಿಸ್ಟ್ ಚೈನಾಮನ್ ಬೌಲರ್‌ಗಳಲ್ಲ. ಇವರೆಲ್ಲ “ಫಿಂಗರ್ ಸ್ಪಿನ್’ ಮೂಲಕವೂ ಗುರುತಿಸಿಕೊಂಡಿದ್ದರು. ಸಮಕಾಲೀನರಲ್ಲಿ ಶ್ರೀಲಂಕಾದ ಸಂದಕನ್ ಹೆಚ್ಚು ಚಾಲ್ತಿಯಲ್ಲಿದ್ದಾರೆ. ಕುಲದೀಪ್ ಮೊದಲು ವೇಗಿ !
ಇಲ್ಲಿ ಕುಲದೀಪ್ ಯಾದವ್ ಕುರಿತಂತೆ ಸ್ವಾರಸ್ಯವೊಂದಿದೆ. ಅವರು ಮೂಲತಃ ಚೈನಾಮನ್ ಬೌಲರ್ ಆಗಿರಲಿಲ್ಲ. ಕಾನ್ಪುರ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಳ್ಳುವಾಗ ಅವರೋರ್ವ ವೇಗದ ಬೌಲರ್. ವೇಗದ ಬೌಲಿಂಗ್‌ನತ್ತಲೇ ಅವರಿಗೆ ಹೆಚ್ಚಿನ ಆಸಕ್ತಿ. ಆದರೆ ಕೋಚ್ ಕಪಿಲ್ ಪಾಂಡೆ ಸಲಹೆ ಮೇರೆಗೆ ಅತ್ಯಂತ ವಿರಳವಾದ ಎಡಗೈ ರಿಸ್ಟ್ ಸ್ಪಿನ್ ಬೌಲಿಂಗ್ ನಡೆಸುವಂತೆ ಸೂಚನೆ ಬಂತು. ಮೊದಮೊದಲು ಇದು ಭಾರೀ ಕಠಿನವೆನಿಸಿತು. ಇದು ಸಾಧ್ಯವಿಲ್ಲ ಎಂದು ಅತ್ತದ್ದೂ ಉಂಟು. ಆದರೀಗ ಕುಲದೀಪ್ ಹೆಚ್ಚು ಸಂತೃಪ್ತ ಕ್ರಿಕೆಟಿಗ! - ಎಚ್. ಪ್ರೇಮಾನಂದ ಕಾಮತ್