Advertisement
ಪ್ರಾರಂಭದ ಹಂತದಲ್ಲಿ ಸುಧಾರಣೆಗಳನ್ನು ಪ್ರಬಲವಾಗಿ ಅನುಷ್ಠಾನಗೊಳಿಸಬೇಕೆಂಬ ದೃಷ್ಟಿಯಿಂದ ಏಕೀಕೃತ ಮಾರುಕಟ್ಟೆ ವೇದಿಕೆಯನ್ನು (ಯುಎಂಪಿ) ಕಲ್ಪಿಸಿಕೊಟ್ಟ ಕರ್ನಾಟಕ ಸರಕಾರ, ಕೃಷಿ ಮಾರುಕಟ್ಟೆಯನ್ನು ಅದರೊಂದಿಗೆ ವಿಲೀನಗೊಳಿಸಿತು. ಆ ಮೂಲಕ ನೇರವಾಗಿ ಕೃಷಿ ಮಾರುಕಟ್ಟೆಯಿಂದ ಸರಕುಗಳನ್ನು ಎಲೆಕ್ಟ್ರಾನಿಕ್ ಮಾರಾಟ ಪದ್ಧತಿಯಲ್ಲಿ ಮಾಡಲು ನಿರ್ಧರಿಸಲಾಗಿತ್ತು. 2014ರಲ್ಲಿ ಕರ್ನಾಟಕ ಸರಕಾರ, ಎನ್.ಸಿ.ಡಿ.ಇ.ಎಕ್ಸ್. ಸ್ಪಾಟ್ ಎಕ್ಸ್‌ಚೇಂಜ್ ಜಂಟಿ ಸಹಭಾಗಿತ್ವದಲ್ಲಿ ಎಸ್‌ಪಿವಿ ಹಾಗೂ ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ (ಆರ್.ಎಂ.ಸ್.) ಅನ್ನು ರೈತರ ಅನುಕೂಲಕ್ಕಾಗಿ ಹೊರತಂದಿತ್ತು.
ಯುಎಂಪಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ದೊರೆಯುತ್ತಿಲ್ಲ ಎಂಬ ಅಂಶವನ್ನು ವರಿದಿ ಕಂಡುಕೊಂಡಿದ್ದು, ಮಾರುಕಟ್ಟೆ ರೈತರ ಬೆಲೆಗಳಿಗೆ ನಿರ್ದಿಷ್ಟ ಬೆಲೆಯನ್ನು ಒದಗಿಸಿಕೊಡುವುದರಲ್ಲಿ ವಿಫಲವಾಗಿದೆ. 2017-18ರಲ್ಲಿ ಪ್ರಮುಖ 8 ಸರಕುಗಳಿಗಿದ್ದ ದರ ಎಂಎಸ್‌ಪಿ ಬೆಲೆಗಿಂತ ಕಡಿಮೆ ಇದೆ ಎಂದು ಸಿಎಜಿ ವರದಿ ತಿಳಿಸಿದೆ. ಇದಲ್ಲದೆ, ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘಿಸಿ 2014-18ರಲ್ಲಿ ಶೇ.3.95 ಕೋಟಿ ವಹಿವಾಟು ಶುಲ್ಕವನ್ನು ಆರ್‌ಇಎಂಎಸ್ ಪಾವತಿಸಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.
Related Articles
ಕೃಷಿ ಮಂಡಿಗಳಲ್ಲಿ ನಡೆಯುತ್ತಿದ್ದ ಏಕಸ್ವಾಮ್ಯ ಪದ್ಧತಿಯನ್ನು ಕೊನೆಗೊಳಿಸುವುದು ಕೃಷಿ ಮಾರುಕಟ್ಟೆ ಸುಧಾರಣೆಗಳ ಪ್ರಮುಖ ಉದ್ದೇಶವಾಗಿದ್ದು, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ ಎಂಬ ಅಂಶವನ್ನು ಸಿಎಜಿ ಗಮನಿಸಿದೆ. ಸುಧಾರಣೆಯ ಪ್ರಮುಖ ಉದ್ದೇಶವನ್ನು ಅನುಸರಿಸದೇ ಖಾಸಗಿ ಮಾರುಕಟ್ಟೆ ಮಾರಾಟಗಾರರಿಗೆ ಪರವಾನಗಿ ನೀಡಿದ್ದು, ಗೋದಾಮಿನ ಆಧಾರಿತ ಮಾರಾಟದ ಪರಿಕಲ್ಪನೆಯು ಸಹ ಅಪೇಕ್ಷಿತ ಫಲಿತಾಂಶವನ್ನು ನೀಡಿಲ್ಲ ಎಂಬ ಮಾಹಿತಿಯನ್ನು ವರದಿ ಹಂಚಿಕೊಂಡಿದೆ.
Advertisement