ಧರಿಸಲು ಆರಾಮದಾಯಕ ಆಗಿರುವ ಕಾಫ್ತಾನ್, ಸೆಖೆಯಿಂದ ಮುಕ್ತಿ ನೀಡುತ್ತದೆ. ಉದ್ದ ಇರುವ ಇದನ್ನು ನೈಟಿಯಂತೆಯೂ ಧರಿಸಬಹುದು!
ಹಳೆಯ ಟ್ರೆಂಡ್‌ಗಳು ಮರಳಿ ಬರುವುದು ಫ್ಯಾಷನ್ ಲೋಕದಲ್ಲಿ ಹೊಸತೇನಲ್ಲ. ಈಗ ‘ಕಫ್ತಾನ್’ ಎಂಬ ಕೂಲ್ ಡ್ರೆಸ್ ಮತ್ತೂಮ್ಮೆ ಮುಂಚೂಣಿಗೆ ಬಂದಿದೆ. ಬಾಲಿವುಡ್ ನಟಿ ಕರೀನಾ ಕಪೂರ್ ಕಫ್ತಾನ್ ದಿರಿಸಿನಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ.
ಕೂಲ್ ಕೂಲ್ ಕಫ್ತಾನ್: ಧರಿಸಲು ಆರಾಮದಾಯಕ ಆಗಿರುವ ಕಫ್ತಾನ್, ಸೆಖೆಯಿಂದ ಮುಕ್ತಿ ನೀಡುತ್ತದೆ.ಇದನ್ನು ಲಂಗ, ಶಾರ್ಟ್ಸ್, ಲೆಗಿಂಗ್ಸ್, ಜೀನ್ಸ್, ಪಲಾಝೊ, ಹ್ಯಾರೆಂ, ಧೋತಿ, ಥ್ರಿ ಫೋರ್ಥ್ ಪ್ಯಾಂಟ್, ಜೆಗಿಂಗ್ಸ್, ಜೀನೀ ಪ್ಯಾಂಟ್, ಮಿನಿ ಸ್ಕರ್ಟ್ ಜೊತೆ ಮೇಲು ಡುಗೆಯಾಗಿ ತೊಡಬಹುದು. ಉದ್ದ ಇರುವ ಕಫ್ತಾನ್ ಅನ್ನು ನೈಟಿಯಂತೆಯೂ ಧರಿಸಬಹುದು! ಈಗ ಹೆಚ್ಚಿನ ಸೆಲೆಬ್ರಿಟಿ ಗಳು ಮನೆಯಲ್ಲೇ ಇರುವ ಕಾರಣ, ಕಫ್ತಾನ್‌ಗಳನ್ನು ತೊಟ್ಟು ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಆದುದರಿಂದ ಈ ಉಡುಗೆ ಟ್ರೆಂಡ್ ಆಗುತ್ತಿದೆ.
ಟು ಇನ್ ಒನ್: ಇವುಗಳಲ್ಲಿ ಕಾಲರ್ ಇರುವುದಿಲ್ಲ. ಆದರೆ ಜೇಬು, ಅಲಂಕಾರಿಕ ಬಟನ್, ನೆಕ್ ಡಿಸೈನ್, ಬ್ಯಾಕ್ ಡಿಸೈನ್, ಬೆಲ್ಟ್ (ಸೊಂಟಪಟ್ಟಿ), ಟ್ಯಾಝೆಲ್, ಮುಂತಾದವುಗಳ ಆಯ್ಕೆ ಇದೆ. ಕಫ¤ನ್ ಅನ್ನು ಒನ್ ಪೀಸ್‌ನಂತೆ ತೊಡುವುದಾದರೆ ಬೆಲ್ಟ್ (ಸೊಂಟ ಪಟ್ಟಿ) ಅಥವಾ ದಾರ (ಲಾಡಿ) ಜೊತೆ ತೊಡಬಹುದು. ಇದು ಸಮ್ಮರ್‌ವೇರ್, ಬೀಚ್ ವೇರ್, ನೈಟಿ, ಪಾರ್ಟಿ ವೇರ್, ಏರ್ಪೋರ್ಟ್ ಫ್ಯಾಷನ್, ಕ್ಯಾಶುವಲ್ ವೇರ್, ಎಲ್ಲವೂ ಹೌದು. ಮ್ಯಾಕ್ಸಿಯಂತೆ, ಬುರ್ಕಾದಂತೆ, ಪ್ಯಾಂಟ್ ಮೇಲೆ, ಈಜುಡುಗೆ ಮೇಲೆಯೂ ರೋಬ್‌ನಂತೆ ತೊಡಬಹುದು. ಒಟ್ಟಿನಲ್ಲಿ ಇದು ಮೇಲುಡುಗೆಯೂ ಹೌದು, ಅಂಗಿಯೂ ಹೌದು.
ಒಂದೊಂದು ಕಡೆ ಒಂದೊಂದು ಬಗೆ: ಆಫ್ರಿಕನ್ ಕಫ್ತಾನ್ ಮೇಲೆ ನೀಲಿ, ಹಳದಿ, ಹಸಿರು, ಕೆಂಪು, ಕೇಸರಿ, ಗುಲಾಬಿಯಂಥ ಗಾಢ ಬಣ್ಣಗಳಿಂದ ಟೈ ಡೈ ಪದ್ಧತಿ ಬಳಸಿ ಚಿತ್ತಾರ ಮೂಡಿಸಲಾಗುತ್ತದೆ. ಅರೇಬಿಕ್ ಶೈಲಿಯ ಕಫ್ತಾನ್‌ಗಳಲ್ಲಿ ಸಂಪೂರ್ಣ ತಿಳಿ ಬಣ್ಣ ಅಥವಾ ಕೇವಲ ಗಾಢ ಬಣ್ಣಗಳನ್ನು ಬಳಸಲಾಗುತ್ತದೆ.
ನೀವೇ ತಯಾರಿಸಿ: ದುಪಟ್ಟಾ ಅಥವಾ ಶಾಲಿನಿಂದಲೂ ಕಫ್ತಾನ್ ಹೊಲಿಯಬ ಹುದು. ಸಡಿಲವಾದ ತೋಳುಗಳುಳ್ಳ ಅಂಗಿ ಯಂಥ ಕಫ್ತಾನ್ ಅನ್ನು ಹೊಲಿಯುವ ಬಗೆಯನ್ನು ತಿಳಿಯಲು, ಯೂಟ್ಯೂಬ್‌ನಲ್ಲಿ ಟುಟೋರಿಯಲ್ ವಿಡಿಯೋಗ ಳಿವೆ. ಹಳೆಯ ದುಪಟ್ಟಾ, ಶಾಲು, ಪರದೆ, ಸೀರೆ ಅಥವಾ ಯಾವುದೇ ತೆಳುವಾದ ಬಟ್ಟೆಯಿಂದ ಕಫ್ತಾನ್‌ಗಳನ್ನು ತಯಾರಿಸಿ, ಅದನ್ನು ತೊಟ್ಟು ಫೋಟೊ ಕ್ಲಿಕ್ಕಿಸಿ. ನಿಮ್ಮ ಹೊಸ ಹವ್ಯಾಸಗಳ ಪಟ್ಟಿಯಲ್ಲಿ ಇದೂ ಸೇರಿಕೊಳ್ಳಲಿ!
ಬಹಳ ಹಿಂದೆಯೂ ಇತ್ತು: ಕಫ್ತಾನ್ ದಿರಿಸು ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು. ರಷ್ಯನ್ ಪುರುಷರು ತೊಡುತ್ತಿದ್ದ ಬಿಗಿಯಾದ ತೋಳುಗಳಿರುವ ಉದ್ದನೆಯ ಸೂಟ್‌ಗೆ ಕಫ್ತಾನ್ ಎನ್ನುತ್ತಿದ್ದರು. ಆಗ ಇದನ್ನು ಉಣ್ಣೆ, ರೇಷ್ಮೆ ಅಥವಾ ತ್ತಿ ಬಟ್ಟೆಯಿಂದ ಮಾಡಲಾಗುತ್ತಿತ್ತು. ಈಗ ಶಿಫಾನ್, ಸ್ಯಾಟಿನ್, ಮಖ್ಮಲ್, ಸಿಂಥೆಟಿಕ್ ಫ್ಯಾಬ್ರಿಕ್, ಪಾಲಿಯೆಸ್ಟರ್, ನೈಲಾನ್ ಬಟ್ಟೆಗಳಲ್ಲಿಯೂ ಲಭ್ಯ.
* ಅದಿತಿಮಾನಸ ಟಿ.ಎಸ್.