ನವ ದೆಹಲಿ: ದೇಶದಲ್ಲಿ ಅತಿ ಹೆಚ್ಚು ಜನರು ಬಳಸುವಂಥ ಕ್ಯಾಡ್ ಬರಿ ಉತ್ಪನ್ನಗಳ ಕಂಪನಿಯು ಈಗ “ಬೀಫ್ ವಿವಾದ’ಕ್ಕೆ ಸಿಲುಕಿದೆ.
ಬ್ರಿಟಿಷ್ ಬಹುರಾಷ್ಟ್ರೀಯ ಮಿಠಾಯಿ ಕಂಪನಿಯು ತನ್ನ ಉತ್ಪನ್ನಗಳಲ್ಲಿ ಜಿಲಾಟಿನ್ ಪದಾರ್ಥ ಬಳಸುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಂಪನಿ ಸೋಮವಾರ ಸ್ಪಷ್ಟನೆ ನೀಡಿದೆ.
ಭಾರತದಲ್ಲಿ ಉತ್ಪಾದಿಸಿ, ಮಾರಾಟ ಮಾಡಲಾಗುತ್ತಿರುವ ನಮ್ಮ ಎಲ್ಲ ಉತ್ಪನ್ನಗಳೂ ಶೇ.100ರಷ್ಟು ಸಸ್ಯಾಹಾರಿ. ಸುಳ್ಳು ಸುದ್ದಿ ಹರಡಿ ಕಂಪನಿಯ ವರ್ಚಸ್ಸಿಗೆ ಧಕ್ಕೆ ತರಬೇಡಿ ಎಂದು ಕಂಪನಿ ಕೇಳಿಕೊಂಡಿದೆ.
“ಯಾವುದೇ ಉತ್ಪನ್ನದಲ್ಲಿ “ಜೆಲಾಟಿನ್’ ಪದಾರ್ಥ ಇದೆ ಎಂದಾದರೆ, ಅದನ್ನು ಗೋಮಾಂಸದಿಂದ ತಯಾರಿಸಲಾಗಿದೆ ಎಂದರ್ಥ’ ಎಂದು ಬರೆಯಲಾದ ವೆಬ್ ಸೈಟ್‌ನ ಸ್ಕ್ರೀನ್ ಶಾಟ್‌ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.
ಇದನ್ನೂ ಓದಿ : 2025ರ ವೇಳೆಗೆ ಮಾರುತಿ-ಸುಝುಕಿ ಸಂಸ್ಥೆಯಿಂದ ವಿದ್ಯುತ್ ಚಾಲಿತ ಕಾರು ಮಾರುಕಟ್ಟೆಗೆ !