Advertisement
ಇಷ್ಟು ಪ್ರಮಾಣದ ಒತ್ತಡ ಹೇರಿದರೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ 20 ಮೀಟರ್ ಉದ್ದದ ಗುಂಡಿಯನ್ನು ಮುಚ್ಚದೆ ಹಾಗೇ ಬಿಟ್ಟಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಈ ರಸ್ತೆಯನ್ನು ನೆಚ್ಚಿಕೊಂಡು ಸುಮಾರು 50 ಕ್ಕೂ ಹೆಚ್ಚು ಮನೆಗಳಿವೆ. ಮಣ್ಣು ಕೂಡ ರಸ್ತೆಗೆ ತಾಗಿಯೇ ಗುಡ್ಡ ಹಾಕಿರುವುದರಿಂದ ವಾಹನಗಳ ಸಂಚಾರವೂ ಕಷ್ಟವಾಗಿದೆ.
ಗುತ್ತಿಗೆದಾರರಿಗೆ ಈ ಬಗ್ಗೆ ಎಚ್ಚರಿಸಲಾಗಿದೆ. ಶೀಘ್ರವೇ ಈ ಕಾರ್ಯ ಮುಗಿಸಿ ಜನರ ಸುಗಮ ಸಂಚಾರಕ್ಕೆ ಅವಕಾಶ ನೀಡಲಾಗುವುದು.
-ಹರೀಶ್ ನಾಯ್ಕ, ಸುಳ್ಯ ಮೆಸ್ಕಾಂ ಎ.ಇ.