Advertisement

ಕೇಬಲ್‌/ಡಿಟಿಎಚ್‌ ಶುಲ್ಕ ಕಡಿತ : ಮಾ.1ರಿಂದ ನೂತನ ನಿಯಮಗಳು ಜಾರಿ

10:08 AM Jan 04, 2020 | sudhir |

ಹೊಸದಿಲ್ಲಿ: ಹೊಸ ವರ್ಷದ ಆರಂಭದಲ್ಲಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಗ್ರಾಹಕರಿಗೆ ಶುಭಸುದ್ದಿ ನೀಡಿದೆ. ಕೇಬಲ್‌ ಮತ್ತು ಡಿಟಿಎಚ್‌ ಮಾಸಿಕ ಶುಲ್ಕವನ್ನು ಇಳಿಸಿದೆ. ಈ ಹಿನ್ನೆಲೆಯಲ್ಲಿ ಟ್ರಾಯ್‌ ಹೊರಡಿಸಿರುವ ನೂತನ ನಿಯಮಗಳೇನು ? ಗ್ರಾಹಕ ವರ್ಗದವರಿಗೆ ಆಗುವ ಲಾಭಗಳೇನು ಎಂಬ ಮಾಹಿತಿ ಇಂತಿದೆ.

Advertisement

ಬುಧವಾರ ನಡೆದ ಸಭೆಯಲ್ಲಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಮಾರ್ಚ್‌ 1ರಿಂದ ಕೇಬಲ್‌ ಬಿಲ್‌ ಇಳಿಕೆಯಾಗಲಿದೆ ಎಂದು ಹೇಳಿದೆ.

ಗರಿಷ್ಠ ಮಿತಿ ನಿಗದಿ
ಡಿಟಿಎಚ್‌ ಅಥವಾ ಕೇಬಲ್‌ ಸಂಪರ್ಕ ಸೇವೆ ಒದಗಿಸಲು ಸಂಸ್ಥೆಗಳು ಪಡೆಯುತ್ತಿದ್ದ ಕಡ್ಡಾಯ ನೆಟ್‌ವರ್ಕ್‌ ಸಾಮರ್ಥ್ಯ ಶುಲ್ಕವನ್ನು (ಎನ್‌ಸಿಎಫ್) 130 ರೂ.ಗಳ ಗರಿಷ್ಠ ಮಿತಿಗೆ ಟ್ರಾಯ್‌ ನಿಗದಿಪಡಿಸಿದೆ.

ಜನವರಿ 15 ರೊಳಗೆ ಶುಲ್ಕ ನಿಗದಿ
ಟ್ರಾಯ್‌ ಪ್ರಸಾರ ಸಂಸ್ಥೆಗಳಿಗೆ ನೂತನ ಪರಿಷ್ಕರಣ ದರಪಟ್ಟಿಯನ್ನು ಜ.15ರ ಒಳಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಹೇಳಿದ್ದು, ಡಿಪಿಒ(ಡಿಸ್ಟ್ರಿಬ್ಯೂಷನ್‌ ಫ್ಲಾರ್ಟ್‌ಫಾರ್ಮ್ ಆಪರೇಟರ್)ಗಳಿಗೆ ” ಎಲಾ ಕಾರ್ಟ್‌ನ ‘ ಗುತ್ಛ (ಬೊಕ್ಕೆ)ದಲ್ಲಿ ಲಭ್ಯವಾಗುವ ಚಾನೆಲ್‌ಗ‌ಳ ವಿವರಣೆಯನ್ನು ಜನವರಿ 30ರ ಒಳಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸೂಚಿಸಿದೆ.

ಹೊಸ ನಿಯಮಗಳೇನು?
· ಎನ್‌ಸಿಎಫ್ ಶುಲ್ಕ (ಮಾಸಿಕವಾಗಿ ಕಡ್ಡಾಯ ವಾಗಿ ಪಾವತಿಸಬೇಕಾದ ಶುಲ್ಕ)ವನ್ನು ತೆರಿಗೆ ಹೊರತುಪಡಿಸಿ 130 ರೂ.ಗೆ ನಿಗದಿ.
· ತೆರಿಗೆ ಮೊತ್ತ ಸೇರಿ ಅಂದಾಜು 150 ರೂ.ಗಳಿಗೆ 200 ಚಾನೆಲ್‌ಗ‌ಳ ಸೌಲಭ್ಯವನ್ನು ಒದಗಿಸುವಂತೆ ಆದೇಶ.
· ಸರಕಾರ ಕಡ್ಡಾಯ ಎಂದು ಘೋಷಿಸಿರುವ ಚಾನೆಲ್‌ಗ‌ಳನ್ನು ಉಚಿತ ಪಟ್ಟಿಯಲ್ಲಿ ಪರಿಗಣಿಸುವಂತಿಲ್ಲ. ಇದರ ಹೊರತಾಗಿ 200 ಉಚಿತ ಚಾನೆಲ್‌ಗ‌ಳ ಸೌಲಭ್ಯ ನೀಡಬೇಕು.
· 12 ರೂ. ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಚಾನೆಲ್‌ಗ‌ಳನ್ನು ಮಾತ್ರ
ಗುತ್ಛಕ್ಕೆ (ಬೊಕೆ) ಸೇರಿಸಬೇಕು.
· ”ಎ ಲಾ ಕಾರ್ಟ್‌’ ಆಧಾರದ ಮೇಲೆ ಒದಗಿಲಾಗುವ ಚಾನೆಲ್‌ಗ‌ಳ ಗರಿಷ್ಠ ಬೆಲೆ ಮೇಲೆ ಮಿತಿ ವಿಧಿಸುವಿಕೆ.
· ಗ್ರಾಹಕ ಒಂದಕ್ಕಿಂತ ಹೆಚ್ಚು ಟಿವಿ ಸಂಪರ್ಕಗಳನ್ನು ಹೊಂದಿದ್ದರೆ 2ನೇ ಮತ್ತು ಅನಂತರದ ಸಂಪರ್ಕಕ್ಕೆ ಶೇ.40ರಷ್ಟು ಮಾತ್ರವನ್ನು ಎನ್‌ಸಿಎಫ್ ಶುಲ್ಕವಾಗಿ ವಿಧಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next