Advertisement

Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್‌ ಭೇಟಿ ಸಾಧ್ಯತೆ

01:13 AM Nov 28, 2024 | Team Udayavani |

ಬೆಂಗಳೂರು: ಸಚಿವ ಸಂಪುಟ ಪುನಾರಚನೆ ವಿಚಾರಗಳ ಚರ್ಚೆ ಮುನ್ನೆಲೆಗೆ ಬಂದಿ ರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೊಸದಿಲ್ಲಿಗೆ ಪ್ರಯಾಣ ಬೆಳೆಸುತ್ತಿದ್ದು, ಅನೇಕ ಕುತೂಹಲಗಳನ್ನು ಹುಟ್ಟು ಹಾಕಿದೆ.

Advertisement

ಶುಕ್ರವಾರ ನಡೆಯುವ ಎಐಸಿಸಿ ಕಾರ್ಯ ಕಾರಿಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಿದ್ದ ರಾಮಯ್ಯ, ಡಿಕೆಶಿ ಸಹಿತ ಹಲವು ಮುಖಂಡರು ರಾಷ್ಟ್ರ ರಾಜಧಾನಿಯತ್ತ ಮುಖ ಮಾಡಿದ್ದು, ಸಂಪುಟ ಪುನಾರಚನೆ ವಿಚಾರವೂ ಚರ್ಚೆ ಆಗ ಬಹುದು ಎನ್ನಲಾಗಿದೆ.

ಮೂರೂ ಉಪಚುನಾವಣೆ ಗೆದ್ದ ಬಳಿಕ ಆಡಳಿತಾರೂಢ ಕಾಂಗ್ರೆಸ್‌ ಒಳಗೆ ಚಟುವಟಿಕೆ ಗರಿಗೆದರುತ್ತಿದ್ದು, ಸಂಪುಟ ಪುನಾ ರಚನೆ ಮುಹೂರ್ತ ನಿಗದಿಪಡಿಸಿಯೇ ನಾಯಕರು ಮರಳಬಹುದೆನ್ನುವ ಲೆಕ್ಕಾಚಾರಗಳಿವೆ.ಈ ಮಧ್ಯೆ ಎಐಸಿಸಿ ಕಾರ್ಯಕಾರಿಣಿ ಆಗಿರುವು ದರಿಂದ ರಾಷ್ಟ್ರೀಯ ಕಾಂಗ್ರೆಸ್‌ಗೆ ಸಂಬಂಧಿಸಿದ ವಿಚಾರಗಳು, ಅದರಲ್ಲೂ ಡಿ. 26 ಮತ್ತು 27ರಂದು ಬೆಳಗಾವಿಯಲ್ಲಿ ಆಯೋಜಿಸಲು ಉದ್ದೇಶಿಸಿರುವ ಎಐಸಿಸಿ ಅಧಿವೇಶನದಂತಹ ವಿಚಾರಗಳು ಚರ್ಚೆಗೆ ಬರಬಹುದು. ಇದೇ ಸಂದರ್ಭದಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸುವ ಅವಕಾಶ ಸಿಕ್ಕಿದರೆ ಹೈಕಮಾಂಡ್‌ ಸಮ್ಮುಖದಲ್ಲಿ ಸಮಾಲೋಚಿಸುವ ಆಲೋಚನೆಯಲ್ಲಿ ಡಿ.ಕೆ. ಶಿವಕುಮಾರ್‌ ಇದ್ದಾರೆ.

ದಿಲ್ಲಿಯಲ್ಲೇ ಡಿಸಿಎಂ ಬಿಡಾರ
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈಗಾಗಲೇ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು, ಗುರುವಾರ ಬೆಳಗ್ಗೆ ಝಾರ್ಖಂಡ್‌ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಲಿದ್ದಾರೆ.
ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ಇರುವು ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆಯ ಬಳಿಕ ದಿಲ್ಲಿಗೆ ತೆರಳಲಿದ್ದಾರೆ. ಶುಕ್ರವಾರ ಕೇಂದ್ರ ಸಚಿವರ ಭೇಟಿ, ಎಐಸಿಸಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ರಾತ್ರಿಯೇ ಹಿಂದಿರುಗಲಿದ್ದಾರೆ.

ಪಟ್ಟಿ ಬಂದರೆ ಮನೆ
ಖಾಲಿ ಮಾಡಬೇಕು
ಸಚಿವ ಸತೀಶ್‌ ಜಾರಕಿಹೊಳಿ ಮಾಧ್ಯಮಗಳ ಜತೆಗೆ ಮಾತನಾಡಿ, ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಚರ್ಚೆ ಇಲ್ಲ. ಅದು ಮುಳ್ಳಿನ ಮೇಲೆ ನಿಂತಂತೆ ಕಷ್ಟದ ಕೆಲಸ. ಯುದ್ಧ ಮಾಡುವ ಮೊದಲು ತಯಾರಿ ಇರಬೇಕು. 2028ಕ್ಕೆ ಹಕ್ಕು ಪ್ರತಿಪಾದಿಸು ತ್ತೇನೆ ಎಂದಿದ್ದೇನೆ. 2 ವರ್ಷದ ಅನಂತರ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಯಾರೂ ಹೇಳಿಲ್ಲ. ಆದರೆ ಸಂಪುಟ ಪುನಾಚರನೆ ಮಾಡುತ್ತಾ ರೆಂಬ ಸುದ್ದಿ ಇದೆ. ಯಾವಾಗ ಎಂಬುದು ಗೊತ್ತಿಲ್ಲ. ಅವೆಲ್ಲ ವರಿಷ್ಠರಿಗೆ ಬಿಟ್ಟ ವಿಚಾರ. ದಿಲ್ಲಿಯಿಂದ ಪಟ್ಟಿ ಬಂದರೆ ಮನೆ ಖಾಲಿ ಮಾಡಿಕೊಂಡು ಹೋಗಬೇಕಷ್ಟೇ ಎಂದು ಸೂಚ್ಯವಾಗಿ ಸಂಪುಟ ಪುನಾರಚನೆಯ ಸುಳಿವು ನೀಡಿದರು.

Advertisement

ಸಂಪುಟ ಪುನಾರಚನೆ ಬಗ್ಗೆ ನನಗಂತೂ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳನ್ನೇ ಕೇಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈ ವಿಚಾರದಲ್ಲಿ ನಿರ್ಣಯ ಕೈಗೊಳ್ಳಬಹುದು.
-ಡಾ| ಜಿ. ಪರಮೇಶ್ವರ್‌, ಗೃಹ ಸಚಿವ

ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಬೆಳವಣಿಗೆ ಇಲ್ಲ. 2 ವರ್ಷದ ಅನಂತರ ಸಂಪುಟ ಪುನಾರಚನೆ ಆದರೆ ಒಳ್ಳೆಯದೇ. ಬೇರೆಯವರಿಗೂ ಅವಕಾಶ ಸಿಗುತ್ತದೆ. ನಾವೇ ಸಚಿವರಾಗಿ ಇರಬೇಕು. ಇನ್ನೊಬ್ಬರು ಬರಬಾರದು ಅಂತೇನಲ್ಲ. ಎಲ್ಲರೂ ತಯಾರಾ ಗಿರಬೇಕು.
-ದಿನೇಶ್‌ ಗುಂಡೂರಾವ್‌, ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next