Advertisement
ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ-2015ನ್ನು ಫೆ. 9ರಂದು ಆಯೋಗದ ಅಂದಿನ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಂದ ಸ್ವೀಕರಿಸಿದ್ದ ಸರಕಾರ, ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಪ್ರಕಟಿಸಿತ್ತು.
Related Articles
Advertisement
ಅನೌಪಚಾರಿಕ ಚರ್ಚೆ ಸಾಧ್ಯತೆಇನ್ನು ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ನೀಡಿದ್ದು, ಮೀಸಲಾತಿ ವರ್ಗೀಕರಣಕ್ಕೆ ಸರಕಾರದಲ್ಲೇ ಗೊಂದಲಗಳೂ ಇವೆ. ಎಡಗೈ ಸಮುದಾಯವು ಒಳಮೀಸಲಾತಿ ಜಾರಿಯ ಪರವಾಗಿದ್ದರೆ, ಬಲಗೈ ಸಮುದಾಯದ ಕೆಲವರು ವರ್ಗೀಕರಣವನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಬೇಕು ಎನ್ನುವ ಮೂಲಕ ಪರೋಕ್ಷ ಪ್ರತಿರೋಧ ಒಡ್ಡಿರುವುದಿದೆ. ಈ ಸಮಸ್ಯೆ ಬಗ್ಗೆ ಸಂಪುಟ ಸಭೆಯ ಕೊನೆಯಲ್ಲಿ ಅನೌಪಚಾರಿಕವಾಗಿ ಚರ್ಚೆ ನಡೆಯಬಹುದು ಎನ್ನಲಾಗಿದೆ. “ಓದು ಕರ್ನಾಟಕ’ ಚಟುವಟಿಕೆಗೆ
14 ಕೋಟಿ ರೂ. ?
ಕರ್ನಾಟಕ ಪ್ರವಾಸೋದ್ಯಮ ನೀತಿ 2024-29, ಬಾಗಲಕೋಟೆ ಜಿಲ್ಲೆ ಮುಧೋಳ ನಗರಕ್ಕೆ ಕೃಷ್ಣಾ ನದಿಯಿಂದ ನೀರು ಒದಗಿಸುವ ಕಾಮಗಾರಿಗೆ 177 ಕೋಟಿ ರೂ., ನಾಗರಿಕ ಹಕ್ಕು ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಿಸಿ, ಅಗತ್ಯ 450 ಹುದ್ದೆಗಳ ಮಂಜೂರಾತಿ ನೀಡುವ ಸಾಧ್ಯತೆಯಿದ್ದು, 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿನ್ಯಾಸ, ಮುದ್ರಣ, ವಿತರಣೆ ಹಾಗೂ ಶಿಕ್ಷಕರಿಗೆ ತರಬೇತಿ ನೀಡುವ 14 ಕೋಟಿ ರೂ.ಗಳನ್ನು “ಓದು ಕರ್ನಾಟಕ’ ಚಟುವಟಿಕೆಗೆ ಅನುಮೋದಿಸುವ ಸಾಧ್ಯತೆಗಳಿವೆ. ಡಿ. 9ರಿಂದ 20ರ ವರೆಗೆ
ಬೆಳಗಾವಿಯಲ್ಲಿ ಅಧಿವೇಶನ
ಪ್ರಸಕ್ತ ವರ್ಷದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲು ತಯಾರಿ ನಡೆದಿದ್ದು, ಡಿಸೆಂಬರ್ 9ರಿಂದ 20ರವರೆಗೆ ಅಧಿವೇಶನ ಸಮಾವೇಶಗೊಳ್ಳುವ ಸಂಭವವಿದೆ. ಈ ಕುರಿತೂ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿದ್ದು, ಡಿ. 20ರಿಂದ 22ರ ವರೆಗೆ ಮಂಡ್ಯದಲ್ಲಿರುವ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಡಿ. 24, 25ರ ಕ್ರಿಸ್‌ಮಸ್ ರಜೆ, ಡಿ. 26 ಮತ್ತು 27ರಂದು ನಡೆಯುವ ಕಾಂಗ್ರೆಸ್ ಅಧಿವೇಶನಗಳ ಹಿನ್ನೆಲೆಯಲ್ಲಿ ಡಿ. 9-20ರ ವರೆಗೆ ಅಧಿವೇಶನದ ದಿನಾಂಕ ನಿಗದಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.