Advertisement

ರಾಜಕೀಯ ಮೀಸಲು ಕುರಿತ ಭಕ್ತವತ್ಸಲಂ ಸಮಿತಿ ವರದಿ ಅಂಗೀಕರಿಸಿದ ಸಂಪುಟ ಸಭೆ

04:31 PM Aug 12, 2022 | Team Udayavani |

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲು ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ನ್ಯಾ.ಭಕ್ತವತ್ಸಲಂ ಸಮಿತಿ ಸುಪ್ರೀಂ ಕೋರ್ಟ್ ಗೆ ನೀಡಿದ್ದ ಮಧ್ಯಂತರ ವರದಿಯನ್ನು ರಾಜ್ಯ ಸರಕಾರವೂ ಅಂಗೀಕರಿಸಿದೆ.

Advertisement

ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿ ಅಂಗೀಕರಿಸಲಾಗಿದ್ದು 2027 – 28ರಲ್ಲಿ ಹೊಸ ರಾಜಕೀಯ ಮೀಸಲು ನೀತಿ ಅನ್ವಯ ಚುನಾವಣೆ ನಡೆಸಲಾಗುವುದು.‌ ಆದರೆ ಈ ವರ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹಳೆಯ ಮೀಸಲು ಪಟ್ಟಿ ಅನ್ವಯವೇ ನಡೆಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದುವರೆಗೆ ಬಿಬಿಎಂಪಿ ಯಲ್ಲಿ ಓಬಿಸಿ ಮೀಸಲು ಪದ್ಧತಿ ಇರಲಿಲ್ಲ. ಈ ವರದಿ ಅನ್ವಯ ಮೇಯರ್, ಉಪಮೇಯರ್ ಆಯ್ಕೆಯಲ್ಲೂ ಹಿಂದುಳಿದ ವರ್ಗದವರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಎಸ್ ಸಿ, ಎಸ್ ಟಿ, ಒಬಿಸಿ ಮೀಸಲಾತಿ 50% ಪ್ರಮಾಣ  ಮೀರದಂತೆ ಮೀಸಲಾತಿ ನೀಡಲಾಗುತ್ತದೆ. ಬೆಂಗಳೂರಿಗೆ ಬಂದಾಗ ಕ್ಷೇತ್ರದ ಜನಸಂಖ್ಯೆ ಆಧರಿಸಿ ಓಬಿಸಿ ಮೀಸಲಾತಿ 13% ಮಾತ್ರ ಅನ್ವಯ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next