Advertisement

Cabinet: ಗವರ್ನರ್ ಗೆ ಮಾಹಿತಿ: ಸಂಪುಟಕ್ಕಷ್ಟೇ ಪವರ್‌;ನೇರ ವಿವರ ನೀಡುವ ಅಧಿಕಾರಕ್ಕೆ ಕತ್ತರಿ

02:00 AM Sep 27, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರದ ನಡೆಯ ಬಗ್ಗೆ ಪದೇ ಪದೆ ಸ್ಪಷ್ಟೀಕರಣ ಕೇಳುತ್ತಿರುವ ರಾಜ್ಯಪಾಲರ ಪತ್ರಗಳಿಗೆ ಉತ್ತರ ನೀಡುವು ದಕ್ಕೆ ಮುನ್ನ ಅಧಿಕಾರಿಗಳು ಸಚಿವ ಸಂಪುಟ ಸಭೆಯ ಗಮನಕ್ಕೆ ತರುವುದನ್ನು ರಾಜ್ಯ ಸರಕಾರ ಕಡ್ಡಾಯಗೊಳಿ ಸಿದೆ. ಹೀಗಾಗಿ ಇನ್ನು ಮುಂದೆ ರಾಜ್ಯಪಾಲರು ಕೇಳುವ ಯಾವುದೇ ಸ್ಪಷ್ಟೀಕರಣಕ್ಕೂ ರಾಜ್ಯ ಮುಖ್ಯ ಕಾರ್ಯದರ್ಶಿ ನೇರವಾಗಿ ಉತ್ತರಿಸು ವಂತಿಲ್ಲ. ಈ ಮೂಲಕ ರಾಜ್ಯ ಸರಕಾರ ಹಾಗೂ ರಾಜ್ಯಪಾಲರ ನಡುವಿನ ಸಮರ ತಾರಕಕ್ಕೇರಿದಂತಾಗಿದೆ.

Advertisement

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರಕಾರ ಈ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ.

ರಾಜಭವನ-ಉತ್ತರಕ್ಕೆ ಅಂಕುಶ
ರಾಜ್ಯಪಾಲರು ಮೇಲಿಂದ ಮೇಲೆ ಸರಕಾರಕ್ಕೆ ಬರೆದ ಪತ್ರ ಅಥವಾ ಸ್ಪಷ್ಟೀಕರಣಗಳಿಗೆ ಉತ್ತರ ನೀಡುವ ಸಂದರ್ಭದಲ್ಲಿ ಸಚಿವಾಲಯ, ಮುಖ್ಯ ಕಾರ್ಯದರ್ಶಿ ಸಹಿತ ವಿವಿಧ ಇಲಾಖೆಗಳ ಸ್ವಾಯತ್ತೆಗೂ ಸಚಿವ ಸಂಪುಟ ತಡೆಯೊಡ್ಡಿದೆ.

ವಿಶೇಷವಾಗಿ ಅರ್ಕಾವತಿ ರೀಡೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ವರದಿ ಕೇಳಿದ ಬಳಿಕ ಎಚ್ಚೆತ್ತುಕೊಂಡಿರುವ ಸರಕಾರ ಈ ನಿರ್ಣಯವನ್ನು ತೆಗೆದುಕೊಂಡಿದೆ.

ಈ ಬಗ್ಗೆ ವಿವರಣೆ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌, ರಾಜ್ಯಪಾಲರು ಮೇಲಿಂದ ಮೇಲೆ ಒಂದು ರೀತಿಯ ಅಸಹನೆಗೆ ಒಳಪಟ್ಟವರಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆಯುತ್ತಿದ್ದಾರೆ.

Advertisement

ಮಾಹಿತಿಯನ್ನು ತತ್‌ಕ್ಷಣ ಕಳುಹಿಸಲು ಸೂಚನೆ ಕೊಡುತ್ತಿದ್ದಾರೆ. ಹೀಗಾಗಿ ಎಲ್ಲ ನಿಯಮಾವಳಿಗಳನ್ನು ಪರಿಶೀಲಿಸಿ, ಯಾವುದೇ ಮಾಹಿತಿಯನ್ನು ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಅಥವಾ ಇಲಾಖಾವಾರು ಆಗಿ ರಾಜ್ಯಪಾಲರಿಗೆ ಕಳುಹಿಸುವ ಸಂದರ್ಭದಲ್ಲಿ ಸಚಿವ ಸಂಪುಟ ಸಭೆಯ ಮುಂದೆ ತಂದು ಸಚಿವ ಸಂಪುಟದ ನಿರ್ಣಯದಂತೆ ಮುಂದುವರಿಯುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದರು.

ತನಿಖೆ ಪ್ರಸ್ತಾವ
ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಇರುವ, ಲೋಕಾಯುಕ್ತದಿಂದ ಸ್ವೀಕೃತವಾಗಿರುವ ಅಭಿಯೋಜನ ಮಂಜೂರಾತಿ ಪ್ರಕರಣಗಳ ಕುರಿತ ಮಾಹಿತಿ ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ರಾಜ್ಯಪಾಲರು ಕರ್ನಾಟಕ ಸರಕಾರದ ಪೊಲೀಸ್‌ ಮಹಾನಿರ್ದೇಶಕರಿಗೆ ಆ. 17ರಂದು ಸೂಚಿಸಿದ್ದರು. ಪೊಲೀಸ್‌ ಮಹಾನಿರ್ದೇಶಕರು ಆ. 20ರಂದು ಈ ಬಗ್ಗೆ ಲೋಕಾಯುಕ್ತ ಎಸ್‌ಐಟಿ ಡಿಐಜಿಗೆ ಪತ್ರ ಬರೆದು ಈ ಬಗ್ಗೆ ವಿವರ ಕೇಳಿದ್ದರು. ರಾಜಭವನವು ಸಚಿವಾಲಯಕ್ಕೆ ಸಂಬಂಧಪಟ್ಟಂತೆ ಯಾವ ಹಂತದಲ್ಲಿ ಮಾಹಿತಿ ಸೋರಿಕೆಯಾಗಿದೆ, ದಾಖಲೆಗಳು ಬಹಿರಂಗಗೊಂಡಿವೆ ಎಂಬ ಬಗ್ಗೆ ತನಿಖೆ ನಡೆಸಲು ತಮಗೆ ಅನುಮತಿ ನೀಡಬೇಕೆಂದು ಐಜಿಪಿ ಕೇಳಿರುತ್ತಾರೆ. ಹೀಗಾಗಿ ಈ ಬಗ್ಗೆ ರಾಜ್ಯಪಾಲರು ಬಯಸಿದರೆ ತನಿಖೆ ನಡೆಸುವುದಕ್ಕೆ ಸರಕಾರ ಮುಂದಾಗಿದೆ.

ಏನಿದು ನಿರ್ಧಾರ?
-ಈವರೆಗೆ ರಾಜ್ಯಪಾಲರಿಗೆ ಸಚಿವಾ ಲಯ, ಮುಖ್ಯ ಕಾರ್ಯದರ್ಶಿ ಯಿಂದ ನೇರವಾಗಿ ಮಾಹಿತಿ
-ಇನ್ನು ಮುಂದೆ ಸಚಿವ ಸಂಪುಟಕ್ಕೆ ಮಾತ್ರ ರಾಜ್ಯಪಾಲರಿಗೆ ಮಾಹಿತಿ ನೀಡುವ ಅಧಿಕಾರ

ಯಾಕೆ ಈ ನಿರ್ಧಾರ?
-ಸಂಪುಟಕ್ಕೆ ಅರಿವಿಲ್ಲದೆ ರಾಜ್ಯಪಾಲ ರಿಗೆ ಮಾಹಿತಿ ರವಾನೆ ತಪ್ಪಿಸಲು
-ವಿವೇಚಿಸಿ ಮಾಹಿತಿ ನೀಡಲು
-ನೇರ ಉತ್ತರದಿಂದ ಮುಜುಗರ ಉಂಟಾಗುವುದನ್ನು ತಪ್ಪಿಸಲು

 

Advertisement

Udayavani is now on Telegram. Click here to join our channel and stay updated with the latest news.

Next