Advertisement
ಸಂಪುಟದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ 1.64 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ದೂರಸಂಪರ್ಕ ಕಂಪನಿ ಹೊಂದಿರುವ ಸಾಲಗಳನ್ನು ಮರು ಹೊಂದಾಣಿಕೆ, ಹೆಚ್ಚುವರಿಯಾಗಿ ಹೊಂದಾಣಿಕೆ ಮಾಡಲಾಗಿರುವ ಆದಾಯ (ಎಜಿಆರ್), ಕೇಂದ್ರ ಸರ್ಕಾರಕ್ಕೆ ಸಂಸ್ಥೆ ಹೊಂದಿರುವ ಷೇರುಗಳ ಮರು ನೀಡಿಕೆಗೆ ಬಳಕೆ ಮಾಡಲಾಗುತ್ತದೆ ಎಂದರು.
ತಾಂತ್ರಿಕವಾಗಿ ಇರುವ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಕೆ ಮಾಡಲೂ ಕೇಂದ್ರ ಸಂಪುಟ ತೀರ್ಮಾನಿಸಿದೆ. ನಾಲ್ಕು ಖಾಸಗಿ ಕಂಪನಿಗಳು 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಭಾಗವಹಿಸುತ್ತಿರುವುದರ ಜತೆಗೆ, ಬಿಎಸ್‌ಎಸ್‌ಎನ್‌ಗೆ 4ಜಿ ಮತ್ತು 5ಜಿ ಸ್ಪೆಕ್ಟ್ರಂ ನೀಡುವ ಬಗ್ಗೆ ಆಡಳಿತಾತ್ಮಕ ನಿರ್ಣಯವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು ವೈಷ್ಣವ್. ಗ್ರಾಮೀಣಕ್ಕೆ 4ಜಿ ಸೇವೆ:
ಮತ್ತೂಂದು ಮಹತ್ವದ ನಿರ್ಧಾರವೆಂದರೆ, ದೇಶದಲ್ಲಿ 4ಜಿ ಸೇವೆ ಸಿಗದ 29,616 ಗ್ರಾಮಗಳಲ್ಲಿ ಆ ವ್ಯವಸ್ಥೆ ಒದಗಿಸಲೂ ತೀರ್ಮಾನಿಸಲಾಗಿದೆ. ಅದಕ್ಕಾಗಿ 19,722 ಟವರ್‌ಗಳನ್ನು ಸ್ಥಾಪಿಸಲಾಗುತ್ತದೆ. ಅದಕ್ಕೆ ಯುನಿವರ್ಸಲ್ ಸರ್ವಿಸ್ ಆಬ್ಲಿಗೇಷನ್ ಫಂಡ್ ಮೂಲಕ ನೆರವು ನೀಡಲಾಗುತ್ತದೆ.
Related Articles
ಭಾರತ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ (ಬಿಬಿಎನ್‌ಎಲ್) ಬಿಎಸ್‌ಎನ್‌ಎಲ್ ಜತೆಗೆ ವಿಲೀನಗೊಳ್ಳುವ ಮೂಲಕ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಗೆ ಹೆಚ್ಚುವರಿಯಾಗಿ 5.67 ಲಕ್ಷ ಕಿಮೀ ಆಪ್ಟಿಕಲ್ ಫೈಬರ್ ಕೇಬಲ್ (ಓಎಫ್) ಜಾಲ ಸಿಗಲಿದೆ. ಬಿಬಿಎನ್‌ಎಲ್ ಈಗಾಗಲೇ 1.85 ಲಕ್ಷ ಗ್ರಾ.ಪಂ.ಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಿಕೊಟ್ಟಿದೆ.
Advertisement
ಬಿಎಸ್‌ಎನ್‌ಎಲ್‌ಗೆ ನೆರವು ನೋಟ– ಆಡಳಿತಾತ್ಮಕವಾಗಿ 4ಜಿ, 5ಜಿ ಸ್ಪೆಕ್ಟ್ರಂ- ಹಾಲಿ ಇರುವ 4ಜಿ ಸ್ಪೆಕ್ಟ್ರಂ ಸೇವೆ ಸುಧಾರಣೆ. ಅದಕ್ಕೆ 44,993 ಕೋಟಿ ರೂ. ಜತೆಗೆ 5ಜಿ ಸ್ಪೆಕ್ಟ್ರಂ ನೀಡಿಕೆ
– ತಾಂತ್ರಿಕ ನೆರವು- ದೇಶೀಯವಾಗಿ ಇರುವ 4ಜಿ ಅಭಿವೃದ್ಧಿಗೆ ಕ್ರಮ. ಮುಂದಿನ 4 ವರ್ಷಗಳಲ್ಲಿ 22,471 ಕೋಟಿ ರೂ.
– ಗ್ರಾಮೀಣ ಪ್ರದೇಶದಲ್ಲಿ ಸೇವೆ ಸುಧಾರಿಸಲು 13, 789 ಕೋಟಿ ರೂ.
– ಎ.ಜಿ.ಆರ್ ಪಾವತಿ, ಸ್ಪೆಕ್ಟ್ರಂ ಶುಲ್ಕಕ್ಕೆ ನೆರವು 40 ಸಾವಿರ ಕೋಟಿ ರೂ.ಗಳಿಂದ 1,50,000 ಕೋಟಿ ರೂ.ಗೆ ಏರಿಕೆ.
– ಸಾಲ ಮರು ಹೊಂದಾಣಿಕೆ 40 ಸಾವಿರ ಕೋಟಿ ರೂ.