Advertisement

ಲಂಕೆಗೆ ಸಾಲದ ರೂಪದಲ್ಲಿಸಿಗಲಿದೆ 750 ಮಹೀಂದ್ರಾ ಜೀಪ್‌!

08:28 PM Jan 04, 2022 | Team Udayavani |

ಕೊಲೊಂಬೋ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ ಭಾರತದಿಂದ “ಜೀಪುಗಳನ್ನು ಮತ್ತು ಬಸ್‌’ಗಳನ್ನು ಸಾಲದ ರೂಪದಲ್ಲಿ ಖರೀದಿಸಲಿದೆ.

Advertisement

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ 750 ಜೀಪುಗಳು ಮತ್ತು 32-35 ಮಂದಿ ಪ್ರಯಾಣಿಸುವ ಸಾಮರ್ಥ್ಯ ಇರುವ ಬಸ್ಸುಗಳನ್ನೂ ಖರೀದಿಸುವ ಬಗ್ಗೆ ಅಲ್ಲಿನ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ದ್ವೀಪ ರಾಷ್ಟ್ರದ ಪೊಲೀಸರು ಸದ್ಯ ಹೊಂದಿರುವ ವಾಹನಗಳನ್ನು ಬದಲಿಸಿ, ಭಾರತದಿಂದ ಪಡೆದುಕೊಳ್ಳಲಾಗುವ ಜೀಪ್‌ ಮತ್ತು ಬಸ್ಸುಗಳನ್ನು ಬಳಕೆ ಮಾಡಲಾಗುತ್ತದೆ.

ಇದನ್ನೂ ಓದಿ:ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ : ವೈದ್ಯರಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಾಲಯ

ಟ್ರಿಂಕಾಮಲಿಯಲ್ಲಿ ಇರುವ ತೈಲ ಟ್ಯಾಂಕ್‌ಗಳನ್ನು ಭಾರತಕ್ಕೆ 50 ವರ್ಷಗಳ ಕಾಲ ಭೋಗ್ಯಕ್ಕೆ ನೀಡುವ ಬಗ್ಗೆ ಆದೇಶ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ ಕೊರೊನಾದಿಂದ ಉಂಟಾಗಿರುವ ವಿತ್ತೀಯ ಬಿಕ್ಕಟ್ಟು ನಿವಾರಣೆಗೆ ಅಧ್ಯಕ್ಷ ಗೋಟಬಯ ರಾಜಪಕ್ಸ 1 ಬಿಲಿಯನ್‌ ಡಾಲರ್‌ ಪ್ಯಾಕೇಜ್‌ ಮೊತ್ತಕ್ಕೆ ಮಂಗಳವಾರ ಸಹಿ ಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next