Advertisement
ಪ್ರತಿ ಕ್ವಿಂಟಲ್ ಭತ್ತಕ್ಕೆ ಕನಿಷ್ಠ 200 ರೂ. ಬೆಂಬಲ ಬೆಲೆ ಘೋಷಿಸಲಾಗಿದ್ದು,ಕಳೆದ ವರ್ಷ 1,550 ರೂಪಾಯಿ ಇತ್ತು. ಈಗ 1,750 ರೂಪಾಯಿ ಆಗಿದೆ. 12.9 % ಹೆಚ್ಚಳ ಮಾಡಲಾಗಿದೆ. ಗರಿಷ್ಠ ಬೆಂಬಲ ಬೆಲೆಯನ್ನು ರಾಗಿಗೇ ಘೋಷಿಸಲಾಗಿದೆ.
Related Articles
Advertisement
ತೊಗರಿ 5,675 ರೂಪಾಯಿ ಬೆಂಬಲ ಬೆಲೆ ಘೋಷಿಸಲಾಗಿದ್ದು, ಹಿಂದೆ 5,450 ರೂಪಾಯಿ ಇತ್ತು.
ಉದ್ದು ಕ್ವಿಂಟಾಲ್‌ಗೆ 5,600 ರೂ ಘೋಷಿಸಲಾಗಿದ್ದು, ಹಿಂದೆ 5,400 ರೂಪಾಯಿ ಇತ್ತು.
ಹತ್ತಿ (ಮದ್ಯಮ) 4,020 ರೂ ಇತ್ತು, ಈಗ 5, 150 ಆಗಿದೆ.
ಹೆಸರು ಬೇಳೆ ಕ್ವಿಂಟಾಲ್‌ಗೆ 6,975 ರೂಪಾಯಿ ಘೋಷಿಸಲಾಗಿದ್ದು , ಮೊದಲು 5,575 ರೂಪಾಯಿ ಇತ್ತು.
ಸೋಯಾಬೀನ್ 3999 ರೂ ಬೆಂಬಲ ಬೆಲೆ ಘೋಷಿಸಲಾಗಿದೆ.
ನೆಲಗಡಲೆ 4, 890 ರೂ ಘೋಷಿಸಲಾಗಿದ್ದು, ಹಿಂದೆ 4,550 ರೂಪಾಯಿ ಇತ್ತು
ಮುಸುಕಿನ ಜೋಳ, ಎಳ್ಳಿಗೂ ಬೆಂಬಲ ಬೆಲೆ ಘೋಷಿಸಲಾಗಿದೆ.
ಬುಧವಾರ ನಡೆದ ಆರ್ಥಿಕ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ (ಸಿಸಿಇಎ) ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 2 ವಾರಗಳಲ್ಲಿ ಕಬ್ಬಿನ ಬೆಳೆಗೂ ಬೆಂಬಲ ಬೆಲೆ ಘೋಷಿಸುವುದಾಗಿ ಸರ್ಕಾರ ಹೇಳಿದೆ.
ಸಿಸಿಇಎ ಸಭೆಯ ಬಳಿಕ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಮತ್ತು ಸಚಿವ ರವಿಶಂಕರ್ ಪ್ರಸಾದ್ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕೇಂದ್ರ ದ ಈ ನಿರ್ಧಾರದಿಂದ ಬೊಕ್ಕಸಕ್ಕೆ 15,000 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದರು.