Advertisement

2859 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು 478 ಕೋಟಿ ರೂ: ಸಂಪುಟ ಸಭೆ ಅನುಮೋದನೆ

01:41 PM Aug 19, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಂಪುಟ ಸಭೆ ನಡೆಯಿತು. ಇದರಲ್ಲ  2859 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು 478 ಕೋಟಿ ರೂ. ಗೆ ಅನುಮೋದನೆ ನೀಡಲಾಯಿತು.

Advertisement

ಸಭೆಯ ಬಳಿಕ ಸಚಿವ ಮಾಧುಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಸಭೆಯಲ್ಲಿ ಕರ್ನಾಟಕ ಸ್ಟೇಟ್ ಮೆಂಟಲ್ ಹೆಲ್ತ್ ಕಾಯ್ದೆ ಜಾರಿಗೆ ತೀರ್ಮಾನ ಮಾಡಲಾಯಿತು.  ಸರ್ಕಾರಿ- ಅನುದಾನಿತ ಕಾಲೇಜುಗಳಲ್ಲಿ ಸ್ಯಾನಿಟರಿ ಪ್ಯಾಡ್ ಗೆ 47 ಕೋಟಿ ರೂ. ವೆಚ್ಚ ಮಾಡಲಾಗವುದು. 2859 ಆರೋಗ್ಯ ಉಪ ಕೇಂದ್ರಗಳನ್ನು ಮೇಲ್ದರ್ಜೆಗೆ 478 ಕೋಟಿ ರೂ. ಅನುಮೋದನೆ ನೀಡಲಾಗಿದೆ. ಶೇ 50% ರಷ್ಟು ಕೇಂದ್ರ ಸರ್ಕಾರ ನೀಡಲಿದೆ. 278.ಕೋಟಿ ರಾಜ್ಯ ಸರ್ಕಾರ ನೀಡಲಿದೆ ಎಂದರು.

ಆರೋಗ್ಯ ಪೂರೈಕೆದಾರರ ಹುದ್ದೆ ಸೃಜಿಸಲಾಗುವುದು. ನರ್ಸ್ ಗಳ ನೇಮಕ ಮಾಡಲಾಗುವುದು. ಕಟ್ಟಡ ಬಾಡಿಗೆ ತೆಗೆದುಕೊಳ್ಳಲು 5000 ರೂ ನೀಡಲಾಗುವುದು. 3 ವರ್ಷದವರೆಗೆ ಗುತ್ತಿಗೆ ಆಧಾರದಲ್ಲಿ ನರ್ಸ್, ಸ್ಟಾಫ್ ತೆಗೆದುಕೊಳ್ಳಲಾಗುವುದು. ಬಿಎಸ್ಸಿ ನರ್ಸ್ ಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ವಿಧಾನಮಂಡಲ ಅಧಿವೇಶನ ದಿನಾಂಕ ನಿಗದಿ: ಸಂಪುಟ ಸಭೆಯಲ್ಲಿ ತೀರ್ಮಾನ

Advertisement

ಮಂಗಳೂರಿನಲ್ಲಿ 9 ಲಕ್ಷ ಟನ್ ತ್ಯಾಜ್ಯ ವಿಲೇವಾರಿ ಹೈಕೋರ್ಟ್ ಸೂಚನೆ ಮೇರೆಗೆ ಏರಿಯಾ ಸ್ವಚ್ಛ ಮಾಡಿ ಮತ್ತೆ ತ್ಯಾಜ್ಯ ಹಾಕಲು 73 ಕೋಟಿ ರೂ.  ವೆಚ್ಚ ಮಾಡಲಾಗುವುದು. ಈಗಿರುವ ತ್ಯಾಜ್ಯದಿಂದಲೇ 22 ಕೋಟಿ ಬರಲಿದೆ. 30 ಕೋಟಿ ರೂ. ಪಾಲಿಕೆ ಉಳಿದ ಹಣವನ್ನು ಕೆಯುಐಡಿಎಸ್ ನಿಂದ ಭರಿಸಲಾಗುವುದು ಎಂದರು.

75 ಸ್ಥಳೀಯ ನಗರ ಸಂಸ್ಥೆಗಳನ್ನು ಅಮೃತ ನಗರ ಗಳಾಗಿ ಪರಿವರ್ತನೆ ಮಾಡಲಾಗವುದು.  700 ಸರ್ಕಾರಿ ಶಾಲೆಗಳಿಗೆ ಪ್ರತಿ ಶಾಲೆಗೆ 10 ಲಕ್ಷ ನೀಡಲು 100 ಕೋಟಿ ಹಣ, ಅಮೃತ ಸ್ವಸಹಾಯ ಗುಂಪುಗಳಿಗೆ 1 ಲಕ್ಷ ಸಹಾಯಧನ. ಅಮೃತ ಗ್ರಾಮ ಪಂಚಯಾತಿ 700 ಆಯ್ಕೆ ಮಾಡಲಾಗುವುದು ಪ್ರತಿ ಗ್ರಾಮ ಪಂಚಾಯತಿಗೆ 25 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರು.

ಮೂರನೇ ಅಲೆ ಬಗ್ಗೆ ನಮಗೆ ಯಾವುದೇ ಆತಂಕ ಇಲ್ಲ. ನಮ್ಮಲ್ಲಿ ನಿಯಂತ್ರಣದಲ್ಲಿದೆ ಎಂದ ಸಚಿವರು, ಸಣ್ಣ ನೀರಾವರಿ ಯೋಜನೆಗೆ ಮೂರು ಯೋಜನೆಗಳಿವೆ. ಅವುಗಳ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next